ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ ಜೂಹಿಯ 5 ಜಿ ವಿರುದ್ದದ ಅರ್ಜಿ ವಿಚಾರಣೆ ವೇಳೆ ಕೇಳಿ ಬಂತು ಸಿನಿಮಾದ ಹಾಡುಗಳು!

|
Google Oneindia Kannada News

ನವದೆಹಲಿ, ಜೂ. 03: ಸಾಮಾನ್ಯವಾಗಿ ನ್ಯಾಯಾಲಯವೆಂದರೆ ಮನಸ್ಸಲ್ಲಿ ಗಂಭೀರ ಭಾವನೆ ಮೂಡುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನ್ಯಾಯಾಲಯ ಬಹುಮುಖ್ಯ ಪಾತ್ರವಹಿಸುತ್ತದೆ. ಈ ನಡುವೆ ದೆಹಲಿ ಹೈಕೋರ್ಟ್‌ನಲ್ಲಿ ಗಂಭೀರವಾಗಿ ವಿಚಾರಣೆ ನಡೆಯುತ್ತಿದ್ದ ಸಂದರ್ಭ ಬಾಲಿವುಡ್ ನಟಿ, ಪರಿಸರವಾದಿ ಜೂಹಿ ಚಾವ್ಲಾರ ಅಭಿಮಾನಿಯೋರ್ವರು ಮಾಡಿದ ಎಡವಟ್ಟಿನಿಂದಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

5 ಜಿ ನೆಟ್‌ವರ್ಕ್ ವಿರುದ್ದ ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ದೆಹಲಿ ಹೈಕೋರ್ಟ್‌ನಲ್ಲಿ ವರ್ಚುವಲ್‌ ಮೂಲಕ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ವರ್ಚುವಲ್‌ ಲಿಂಕ್‌ ಮೂಲಕ ಪ್ರವೇಶಿಸಿದ ಅಪರಿಚಿತ ಸಂದರ್ಶಕರು ನಟಿ ಜೂಹಿ ಚಾವ್ಲಾ ಸಿನಿಮಾದ ಹಾಡುಗಳನ್ನು ಹಾಡಲು ಆರಂಭಿಸಿದ್ದಾರೆ.

5 ಜಿ ನೆಟ್‌ವರ್ಕ್‌ ವಿರುದ್ದ ಕೋರ್ಟ್ ಮೆಟ್ಟಿಲೇರಿದ ನಟಿ ಜೂಹಿ ಚಾವ್ಲಾ5 ಜಿ ನೆಟ್‌ವರ್ಕ್‌ ವಿರುದ್ದ ಕೋರ್ಟ್ ಮೆಟ್ಟಿಲೇರಿದ ನಟಿ ಜೂಹಿ ಚಾವ್ಲಾ

ಹಾಡಿನ ಕಾರಣದಿಂದಾಗಿ ವಿಚಾರಣೆಗೆ ಅಡ್ಡಿ ಉಂಟಾಗಿದ್ದು, ಬಳಿಕ ವರ್ಚುವಲ್‌ ವಿಚಾರಣೆಯಿಂದ ಆ ವ್ಯಕ್ತಿಯನ್ನು ಹೊರಹಾಕಿ ಮತ್ತೆ ವಿಚಾರಣೆ ಪುನರಾರಂಭ ಮಾಡಲಾಗಿದೆ. ದೆಹಲಿ ಹೈಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ನಿಂದನೆ ನೊಟೀಸ್‌ ಜಾರಿ ಮಾಡಿದೆ. ಆ ವ್ಯಕ್ತಿಯನ್ನು ಪತ್ತೆ ಹಚ್ಚಿ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ.

ಲಿಂಕ್‌ ದೊರೆತದ್ದಾದರೂ ಎಲ್ಲಿಂದ?

ಲಿಂಕ್‌ ದೊರೆತದ್ದಾದರೂ ಎಲ್ಲಿಂದ?

ಅಷ್ಟಕ್ಕೂ ವರ್ಚುವಲ್‌ ವಿಚಾರಣೆಯ ಈ ಲಿಂಕ್‌ ಅಪರಿಚಿತರಿಗೆ ದೊರೆತದ್ದಾರೂ ಎಲ್ಲಿಂದ ಎಂಬ ಪ್ರಶ್ನೆ ನಮ್ಮೆಲ್ಲರಲ್ಲಿ ಮೂಡುವುದು ಸಹಜ. ಆದರೆ ಈ ಲಿಂಕ್‌ ಶೇರ್‌ ಮಾಡಿದ್ದೆ ಜೂಹಿ ಚಾವ್ಲಾ. 5 ಜಿ ನೆಟ್‌ವರ್ಕ್‌ನಿಂದಾಗಿ ಪರಿಸರಕ್ಕೆ ಭಾರೀ ಹಾನಿಯಾಗುತ್ತದೆ ಎಂದು ದೇಶದಲ್ಲಿ 5 ಜಿ ನೆಟ್‌ವರ್ಕ್‌ ಸ್ಥಾಪಿಸುವುದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ನಟಿ ವರ್ಚುವಲ್‌ ತನಿಖೆಯ ಬಗ್ಗೆ ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ನಾವು, ನೀವು ಅಥವಾ 5 ಜಿ. ಈ ವಿಷಯ ನಿಮಗೆ ಸಂಬಂಧಿಸಿದ್ದು ಎಂದಾದರೆ ದೆಹಲಿ ಹೈಕೋರ್ಟ್‌ ನಡೆಸುವ ನಮ್ಮ ಮೊದಲ ವರ್ಚುವಲ್ ವಿಚಾರಣೆಗೆ ಸೇರಲು ಹಿಂಜರಿಯಬೇಡಿ, ಜೂನ್ 2, ಬೆಳಿಗ್ಗೆ 10.45 ರಿಂದ ವಿಚಾರಣೆ ನಡೆಯಲಿದೆ ಎಂದು ಲಿಂಕ್‌ ಕೂಡಾ ಶೇರ್‌ ಮಾಡಿದ್ದರು.

"ಜೂಹಿ ಮೇಡಂ ಎಲ್ಲಿ ಕಾಣುತ್ತಿಲ್ಲ"

ವಿಚಾರಣೆ ಆರಂಭವಾಗಿ ಸ್ವಲ್ಪ ಹೊತ್ತು ಆಗುತ್ತಿದ್ದಂತೆ, ವಿಚಾರಣೆಗೆ ಹಲವಾರು ಅಡೆತಡೆಗಳು ಸಂಭವಿಸುತ್ತಿದ್ದವು. ಈ ನಡುವೆ ಲಿಂಕ್‌ ಮೂಲಕ ಪ್ರವೇಶಿಸಿದ ಕೆಲವು ಸಂದರ್ಶಕರು ಆರಂಭದಲ್ಲಿ "ಜೂಹಿ ಮೇಡಂ ಎಲ್ಲಿ ಕಾಣುತ್ತಿಲ್ಲ" ಎಂದು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಆ ಬಳಿಕ ಯಾರೋ ಓರ್ವ "ಗೂಂಗಟ್‌ ಕೀ ಆಡ್‌ ಸೇ ದಿಲ್‌ ಬರ್‌ಕಾ..." ಎಂಬ ಜೂಹಿ ಅಭಿನಯದ ಚಿತ್ರದ ಹಾಡನ್ನು ಹಾಡತೊಡಗಿದ್ದಾರೆ. ಇದರಿಂದಾಗಿ ಗಲಿಬಿಲಿಗೊಂಡ ನ್ಯಾಯಮೂರ್ತಿಗಳು ಕೋರ್ಟ್‌ ಮಾಸ್ಟರ್‌ ಮತ್ತು ಸಿಬ್ಬಂದಿಗಳಲ್ಲಿ ಸಂದರ್ಶಕರ ಧ್ವನಿಯನ್ನು ಮ್ಯೂಟ್‌ ಮಾಡುವಂತೆ ಸೂಚನೆ ನೀಡಿದ್ದಾರೆ.

5 ಜಿ ತಂತ್ರಜ್ಞಾನ ಪರೀಕ್ಷೆಗೆ ಇಳಿದ ಬಿಎಸ್ಎನ್ಎಲ್5 ಜಿ ತಂತ್ರಜ್ಞಾನ ಪರೀಕ್ಷೆಗೆ ಇಳಿದ ಬಿಎಸ್ಎನ್ಎಲ್

ಪ್ರತಿವಾದಿಗಳ ದಾರಿ ತಪ್ಪಿಸುವ ಪ್ರಯತ್ನ?

ಪ್ರತಿವಾದಿಗಳ ದಾರಿ ತಪ್ಪಿಸುವ ಪ್ರಯತ್ನ?

ವಿಚಾರಣೆಯ ನಡುವೆ ಈ ಅಡೆತಡೆಗಳನ್ನು ಗಮನಿಸಿದ ಜೂಹಿ ಪರ ವಕೀಲ ದೀಪಕ್‌ ಖೋಸ್ಲಾ ಪ್ರತಿವಾದಿಗಳ ದಾರಿ ತಪ್ಪಿಸುವ ಪ್ರಯತ್ನವಾಗಿರಬಹುದೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಡುಗಳು ಕೇಳಿ ಬಂದ ಬೆನ್ನಲ್ಲೇ ನ್ಯಾಯಾಮೂರ್ತಿಗಳು ಸಂದರ್ಶಕರ ಧ್ವನಿಯನ್ನು ಮ್ಯೂಟ್‌ ಮಾಡುವಂತೆ ಹೇಳಿದ ಬೆನ್ನಲ್ಲೇ ವಿಚಾರಣೆ ಆರಂಭದಿಂದಲೂ ಉಂಟಾಗುತ್ತಿರುವ ಅಡೆತಡೆಗಳ ಬಗ್ಗೆ ಪ್ರತಿಕ್ರಿಯಿಸಿದ ಜೂಹಿ ಪರ ವಕೀಲ ದೀಪಕ್‌ ಖೋಸ್ಲಾ, ಇದು ಪ್ರತಿವಾದಗಿಳ ದಾರಿ ತಪ್ಪಿಸುವ ಪ್ರಯತ್ನವಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಮತ್ತೆ ಹಾಡು ಹಾಡಿದ ಅಪರಿಚಿತ ಸಂದರ್ಶಕ

ಮತ್ತೆ ಹಾಡು ಹಾಡಿದ ಅಪರಿಚಿತ ಸಂದರ್ಶಕ

ಈ ಎಲ್ಲಾ ಬೆಳವಣಿಗೆಯ ನಂತರ ವಿಚಾರಣೆ ಸುಸೂತ್ರವಾಗಿ ನಡೆಯುತ್ತಿದ್ದ ಸಂದರ್ಭ ಮತ್ತೋರ್ವ ವ್ಯಕ್ತಿ ಲಿಂಕ್‌ ಮೂಲಕ ಪ್ರವೇಶಿಸಿ "ಲಾಲ್ ಲಾಲ್‌ ಹೋಟೋಂಪೆ ಗೋರಿ ತೇರಾ ನಾಮ್ ಹೈ" ಎಂದು ನಟಿಯ ಮತ್ತೊಂದು ಸಿನಿಮಾದ ಹಾಡನ್ನು ಗುನುಗತೊಡಗಿದ. ಮತ್ತೆ ಸಿಬ್ಬಂದಿಗಳು ಸಂದರ್ಶಕರ ಧ್ವನಿ ಮ್ಯೂಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮತ್ತೆ ಬೇರೆ ಸಂದರ್ಶಕನೋರ್ವ ವರ್ಚುವಲ್‌ ಲಿಂಕ್‌ ಮೂಲಕ ಪ್ರವೇಶಿಸಿ "ಮೇರಿ ಬನ್ನೋಕಿ ಆಯೇಗಿ ಬರಾತ್‌" ಎಂದು ಹಾಡಲು ಆರಂಭಿಸಿದ್ದಾನೆ.

ಸಕಾಲದಲ್ಲಿ 5 ಜಿ ಅನುಷ್ಠಾನ ಖಾತ್ರಿಪಡಿಸಲು ಮೋದಿ ಕರೆಸಕಾಲದಲ್ಲಿ 5 ಜಿ ಅನುಷ್ಠಾನ ಖಾತ್ರಿಪಡಿಸಲು ಮೋದಿ ಕರೆ

ಜೂಹಿ ಅರ್ಜಿ ವಿಚಾರಣೆ ಏನಾಯಿತು?

ಜೂಹಿ ಅರ್ಜಿ ವಿಚಾರಣೆ ಏನಾಯಿತು?

ಈ ನಡುವೆ ಜೂಹಿ 5 ಜಿ ನೆಟ್‌ವರ್ಕ್ ವಿರುದ್ದ ನೀಡಿದ ಅರ್ಜಿಯು ದೋಷಯುಕ್ತವಾಗಿದೆ ಮತ್ತು ಮಾಧ್ಯಮ ಪ್ರಚಾರಕ್ಕಾಗಿ ಇದನ್ನು ಮಾಡಲಾಗಿದೆ ಎಂದು ಹೇಳಿರುವ ನ್ಯಾಯಾಲಯ ಜೂಹಿ ವಿರುದ್ದ ಗರಂ ಆಗಿದೆ. ಜೂಹಿ ಹಾಗೂ ಮತ್ತಿತರರ ಫಿರ್ಯಾದಿದಾರರಿಗೆ ತಾವು ಮಾಡುತ್ತಿರುವ ಆರೋಪದ ಬಗ್ಗೆ ಯಾವುದೇ ಜ್ಞಾನವಿಲ್ಲ. ಯಾವುದೇ ಪರಿಶೀಲನೆ ಇಲ್ಲದೆ ಹೇಗೆ ದಾವೆ ಹೂಡಲಾಗಿದೆ ಎಂದು ಜೂಹಿ ಪರ ವಕೀಲ ದೀಪಕ್‌ ಖೋಸ್ಲಾರನ್ನು ಪ್ರಶ್ನಿಸಿದೆ. ಓರ್ವ ವ್ಯಕ್ತಿ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಆದರೂ ವಿಚಾರಣೆ ನಡೆಸಿ ಎಂದು ಹೇಳುವ ಮೊಕದ್ದಮೆಯನ್ನು ನಾನು ಇವರೆಗೂ ನೋಡೇ ಇಲ್ಲ ಎಂದು ನ್ಯಾಯಾಮೂರ್ತಿಗಳು ಕಿಡಿಕಾರಿದರು.

2021ಕ್ಕೆ ರಿಲಯನ್ಸ್ ಜಿಯೋ ಭಾರತದಲ್ಲಿ 5G ಕ್ರಾಂತಿ ಮಾಡಲಿದೆ: ಮುಕೇಶ್ ಅಂಬಾನಿ2021ಕ್ಕೆ ರಿಲಯನ್ಸ್ ಜಿಯೋ ಭಾರತದಲ್ಲಿ 5G ಕ್ರಾಂತಿ ಮಾಡಲಿದೆ: ಮುಕೇಶ್ ಅಂಬಾನಿ

ಕೇಂದ್ರ ಸರ್ಕಾರ ಪರ ಹಾಜರಾದ ಸಾಲಿಸಿಟರ್ ಜನರಲ್ ಹೇಳಿದ್ದಿಷ್ಟು..

ಕೇಂದ್ರ ಸರ್ಕಾರ ಪರ ಹಾಜರಾದ ಸಾಲಿಸಿಟರ್ ಜನರಲ್ ಹೇಳಿದ್ದಿಷ್ಟು..

ಈ ಮೊಕದ್ದಮೆ ಕ್ಷುಲ್ಲಕ ಎಂದು ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದು, ಕೇಂದ್ರ ಸರ್ಕಾರದ ಸ್ಥಾಯಿ ವಕೀಲ ಅಮಿತ್ ಮಹಾಜನ್ ಕೂಡ ಈ ಮೊಕದ್ದಮೆ ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ. ಕೆಲ ಖಾಸಗಿ ಟೆಲಿಕಾಂ ಕಂಪೆನಿಗಳ ಪರ ಹಾಜರಾದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌, 5ಜಿ ಸರ್ಕಾರದ ನೀತಿಯಾಗಿದ್ದು ರಿಟ್ ಅರ್ಜಿಯ ಮೂಲಕ ಮಾತ್ರ ಅದನ್ನು ಪ್ರಶ್ನಿಸಬಹುದು ಎಂದು ಹೇಳಿದ್ದಾರೆ. ಈ ಎಲ್ಲಾ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ.

(ಒನ್ಇಂಡಿಯಾ ಸುದ್ದಿ)

English summary
Man sings songs from Juhi Chawla’s movies during hearing on 5G rollout, court orders contempt charge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X