ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಶಿಕ್ಷಣಕ್ಕಾಗಿ ಹಸು ಮಾರಿ ಸ್ಮಾರ್ಟ್‌ಫೋನ್ ಕೊಡಿಸಿದ ಬಡ ವ್ಯಕ್ತಿ

|
Google Oneindia Kannada News

ಶಿಮ್ಲಾ, ಜುಲೈ 23: ಕೊರೊನಾ ವೈರಸ್‌ನಿಂದ ಸಾಮಾನ್ಯ ಜನರ ಬದುಕೇ ಅಸ್ಥಿರವಾಗಿದೆ. ಕೈಯಲ್ಲಿದ್ದ ಕೆಲಸ ಕಳೆದುಕೊಂಡು, ಆದಾಯವಿಲ್ಲದೆ ಬಡ ಜನರು ಒಂದೊತ್ತಿನ ಊಟಕ್ಕೆ ಕಷ್ಟ ಪಡುವಂತಹ ಸ್ಥಿತಿ ಬಂದೊದಗಿದೆ. ತನ್ನ ಜೊತೆಗೆ ಕುಟುಂಬವನ್ನು ಪೋಷಿಸಬೇಕಾದ ಒತ್ತಡಕ್ಕೆ ಸಿಲುಕಿರುವ ವ್ಯಕ್ತಿ ಕಷ್ಟ ಹೇಳುವುದೇ ಬೇಡ. ಒಂದು ಕಡೆ ಕೊರೊನಾ ವೈರಸ್, ಇನ್ನೊಂದು ಜೀವನ ಸಾಗಿಸಬೇಕಾದ ಅನಿವಾರ್ಯತೆ.

Recommended Video

India vs China : ಪಾಕಿಸ್ತಾನವನ್ನು ಬಿಟ್ಟು ಚೀನಾವನ್ನು ಟಾರ್ಗೆಟ್ ಮಾಡಿದ ಭಾರತ | Oneindia Kannada

ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣ ಎನ್ನುವುದು ಮತ್ತಷ್ಟು ರೀತಿ ಸಮಸ್ಯೆ ನೀಡುತ್ತಿದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ. ಆನ್‌ಲೈನ್ ಶಿಕ್ಷಣ ಹಿನ್ನೆಲೆ ಮಕ್ಕಳಿಗೆ ಸ್ಮಾರ್ಟ್‌ಫೋನ್ ತೆಗೆದುಕೊಡುವುದಕ್ಕಾಗಿ ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಹಸುವನ್ನು ಮಾರಾಟ ಮಾಡಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಮುಂದೆ ಓದಿ....

ಹಸು ಮಾರಿ ಸ್ಮಾರ್ಟ್‌ಫೋನ್ ಖರೀದಿ

ಹಸು ಮಾರಿ ಸ್ಮಾರ್ಟ್‌ಫೋನ್ ಖರೀದಿ

ಜ್ವಾಲಾಮುಖಿ ಜಿಲ್ಲೆಯ ಗುಮ್ಮರ್ ಗ್ರಾಮಕ್ಕೆ ಸೇರಿದ ಕುಲದೀಪ್ ಕುಮಾರ್ ಅವರ ಇಬ್ಬರು ಮಕ್ಕಳು, ಅನ್ನು ಮತ್ತು ಡಿಪ್ಪು ನಾಲ್ಕನೇ ಹಾಗೂ ಎರಡನೇ ತರಗತಿಯಲ್ಲಿ ಓದುತ್ತಿದ್ದರು. ಮಕ್ಕಳ ಆನ್‌ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್‌ಫೋನ್‌ ತೆಗೆದುಕೊಡಲು, ತನ್ನ ಕುಟುಂಬಕ್ಕೆ ಆಧಾರವಾಗಿದ್ದ ಹಸುವನ್ನು 6000 ರೂಪಾಯಿಗೆ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಸ್ಮಾರ್ಟ್‌ಫೋನ್ ಕೊಡಿಸಿದ್ದಾರೆ.

ಕೊರೊನಾ ಸುಳಿಯಿಂದ ಹೊರಬಂದ ನಾಲ್ಕು ಹಾಟ್‌ಸ್ಪಾಟ್‌ ದೇಶಗಳುಕೊರೊನಾ ಸುಳಿಯಿಂದ ಹೊರಬಂದ ನಾಲ್ಕು ಹಾಟ್‌ಸ್ಪಾಟ್‌ ದೇಶಗಳು

ಸಾಲ ನೀಡದ ಬ್ಯಾಂಕ್

ಸಾಲ ನೀಡದ ಬ್ಯಾಂಕ್

ಲಾಕ್‌ಡೌನ್ ಕಾರಣ ಮಾರ್ಚ್‌ನಲ್ಲಿ ಶಾಲೆಗಳು ಮುಚ್ಚಿದ್ದವು. ಈಗ ಆನ್‌ಲೈನ್‌ ಮೂಲಕ ತರಗತಿಗಳನ್ನು ಆರಂಭವಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಕಳೆದ ಒಂದು ತಿಂಗಳಿನಿಂದ ಹಲವು ಬ್ಯಾಂಕ್ ಹಾಗೂ ಖಾಸಗಿ ವ್ಯಕ್ತಿಗಳ ಸಾಲ ಕೇಳಿದೆ. ಆರ್ಥಿಕ ಸಂಕಷ್ಟದ ಕಾರಣ ಹೇಳಿ, ಯಾರೂ ಸಾಲ ನೀಡಲಿಲ್ಲ. ಬೇರೆ ಮಾರ್ಗವೇ ಇಲ್ಲದಂತಾದಾಗ ಹಸುವನ್ನು 6000 ರೂಗೆ ಮಾರಾಟ ಮಾಡಬೇಕಾಯಿತು ಎಂದು ಕುಲ್ದೀಪ್ ಹೇಳಿದ್ದಾರೆ.

ಸ್ಮಾರ್ಟ್‌ಫೋನ್‌ ಇಲ್ಲವಾದರೆ ಕಷ್ಟ ಎಂದ ಶಿಕ್ಷಕರು

ಸ್ಮಾರ್ಟ್‌ಫೋನ್‌ ಇಲ್ಲವಾದರೆ ಕಷ್ಟ ಎಂದ ಶಿಕ್ಷಕರು

ಆನ್‌ಲೈನ್ ತರಗತಿಗಳಿಗೆ ಸ್ಮಾರ್ಟ್‌ಫೋನ್ ಅಗತ್ಯ, ಅದು ಇಲ್ಲವಾದರೆ ಶಿಕ್ಷಣ ಮುಂದುವರಿಸುವುದು ಕಷ್ಟ ಎಂದು ಶಿಕ್ಷಕರು ಹೇಳಿದರು. 500 ರೂಪಾಯಿ ಹೊಂದಿಸುವುದಕ್ಕೆ ಕಷ್ಟದ ಪರಿಸ್ಥಿತಿಯಲ್ಲಿರುವ ನಾನು 6000 ಹೊಂದಿಸುವುದು ಹೇಗೆ ಎಂದು ಕೇಳಿಕೊಂಡರೆ. ಏನೂ ಪ್ರಯೋಜನ ಆಗಲಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಮಣ್ಣಿನ ಮನೆಯಲ್ಲಿ ವಾಸ!

ಮಣ್ಣಿನ ಮನೆಯಲ್ಲಿ ವಾಸ!

ಪ್ರಸ್ತುತ, ಕುಲದೀಪ್ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕುಲದೀಪ್ ನಳಿ ಬಿಪಿಎಲ್ ಕಾರ್ಡ್ ಸಹ ಇಲ್ಲ. ಸಮಗ್ರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ (ಐಆರ್‌ಡಿಪಿ) ಫಲಾನುಭವಿಗಳಲ್ಲ. ಮನೆ ನಿರ್ಮಾಣ ಮತ್ತು ಅವರ ಹೆಸರನ್ನು ಐಆರ್‌ಡಿಪಿ, ಬಿಪಿಎಲ್ ಮತ್ತು ಆಂಟೋದಯದಲ್ಲಿ ಸೇರಿಸಲು ಆರ್ಥಿಕ ಸಹಾಯಕ್ಕಾಗಿ ಪಂಚಾಯತ್‌ಗೆ ಹಲವಾರು ಅರ್ಜಿಗಳನ್ನು ನೀಡಿದ್ದಾರೆ, ಆದರೆ ಯಾವುದು ಸಹಾಯ ಮಾಡಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಎಂಎಲ್‌ಎ ನೆರವಿನ ಆಶ್ವಾಸನೆ

ಎಂಎಲ್‌ಎ ನೆರವಿನ ಆಶ್ವಾಸನೆ

ಈ ವಿಷಯ ತಿಳಿದ ಮೇಲೆ ಜ್ವಾಲಾಮುಖಿ ಶಾಸಕ ರಮೇಶ್ ಧವಾಲಾ ನೆರವಿನ ಆಶ್ವಾಸನೆ ನೀಡಿದ್ದಾರೆ. 'ತನ್ನ ಮಕ್ಕಳ ಆನ್‌ಲೈನ್ ಅಧ್ಯಯನಕ್ಕಾಗಿ ಒಬ್ಬ ವ್ಯಕ್ತಿ ಫೋನ್ ಖರೀದಿಸಲು ತನ್ನ ಹಸುವನ್ನು ಮಾರಾಟ ಮಾಡಬೇಕಾಗಿರುವುದು ಆಘಾತಕಾರಿ. ತಕ್ಷಣ ಅವರಿಗೆ ಆರ್ಥಿಕ ಸಹಾಯ ನೀಡುವಂತೆ ಬಿಡಿಒ ಮತ್ತು ಎಸ್‌ಡಿಎಂಗೆ ನಿರ್ದೇಶನ ನೀಡಿದ್ದೇನೆ' ಎಂದು ಹೇಳಿದ್ದಾರೆ.

ಫಿಟ್ನೆಸ್ ಪ್ರಿಯರಿಗೆ ಸಿಹಿ ಸುದ್ದಿ: ಜಿಮ್ ತೆರೆಯಲು ಸಜ್ಜಾದ ಮೊದಲ ರಾಜ್ಯ!ಫಿಟ್ನೆಸ್ ಪ್ರಿಯರಿಗೆ ಸಿಹಿ ಸುದ್ದಿ: ಜಿಮ್ ತೆರೆಯಲು ಸಜ್ಜಾದ ಮೊದಲ ರಾಜ್ಯ!

English summary
Himachal Pradesh: Man sells cow to buy smartphone for his children's online Classes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X