ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನನ್ನು ಮದುವೆಯಾದ ತಾಯಿ; ಗಂಡನಿಂದ ಪೊಲೀಸರಿಗೆ ದೂರು!

|
Google Oneindia Kannada News

ಡೆಹ್ರಡೂನ್, ಮೇ 19: ಉತ್ತರಾಖಂಡದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ತನ್ನ ಪತ್ನಿ ಆಕೆಯ ಮೊದಲ ಗಂಡನಿಂದ ಜನಿಸಿದ ಮಗುವನ್ನು ವಿವಾಹವಾಗಿದ್ದಾಳೆ ಎಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಉತ್ತರಾಖಂಡ ರಾಜ್ಯದ ಉಧಮ್ ಸಿಂಗ್ ನಗರ ಜಿಲ್ಲೆಯ ಬಾಜ್ಪುರದಲ್ಲಿ ಈ ಘಟನೆ ನಡೆದಿದೆ. ಪೊಲೀಸರಿಗೆ ದೂರು ನೀಡಿರುವ ಇಂದ್ರರಾಮ ಎಂಬಾತ ಪತ್ನಿ ಮನೆಯಿಂದ 20 ಸಾವಿರ ರೂಪಾಯಿಗಳನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಾಳೆ ಎಂದು ಉಲ್ಲೇಖಿಸಿದ್ದಾರೆ.

ಹಳೆ ಲವ್ವರ್ ಮಸಲತ್ತು; ಸ್ಫೋಟವಾಯ್ತು ಮದುವೆ ಮನೆಯಲ್ಲಿ ನೀಡಿದ ಆ ಗಿಫ್ಟು!ಹಳೆ ಲವ್ವರ್ ಮಸಲತ್ತು; ಸ್ಫೋಟವಾಯ್ತು ಮದುವೆ ಮನೆಯಲ್ಲಿ ನೀಡಿದ ಆ ಗಿಫ್ಟು!

ತನ್ನ ಮಡದಿ ಅವಳ ಮೊದಲ ಗಂಡನ ಮಗನನ್ನು ವಿವಾಹವಾಗಿದ್ದಾಳೆ. ಇಬ್ಬರೂ ಪರಾರಿಯಾಗಿದ್ದಾರೆ.
ತಾವೂ ಬಬ್ಲಿ ಎಂಬ ಮಹಿಳೆಯೊಂದಿಗೆ 11 ವರ್ಷಗಳ ಹಿಂದೆ ವಿವಾಹವಾಗಿದ್ದೆ. ಆಕೆಗೆ ಅದಾಗಲೇ ವಿವಾಹವಾಗಿ, ಮೊದಲ ಪತಿಯಿಂದ ಇಬ್ಬರು ಗಂಡು ಮಕ್ಕಳಿದ್ದರು. ಅವಳು ನನ್ನನ್ನು ವಿವಾಹವಾದ ನಂತರ ಮೊದಲ ಪತಿ ಮಕ್ಕಳನ್ನು ತೊರೆದು ನನ್ನನ್ನೊಂದಿಗೆ ಬಂದಿದ್ದಳು. ನಾವಿಬ್ಬರಿಗೆ ವಿವಾಹದ ನಂತರ ಮೂರು ಮಕ್ಕಳಾಗಿದ್ದವು ಎಂದು ಹೇಳಿದ್ದಾರೆ.

Man Moved Police Station Against Wife Alleges She Married Her Son

ಕಳೆದ ಕೆಲವು ದಿನಗಳ ಬಬ್ಲಿಯ ಮೊದಲ ಗಂಡನ ಮಗ ಮನೆಗೆ ಬರಲು ಶುರುಮಾಡಿದ್ದ. ಇದೀಗ ಅವರು ಮನೆಯಲ್ಲಿದ್ದ 20 ಸಾವಿರ ನಗದನ್ನು ತೆಗೆದುಕೊಂಡು ಓಡಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದೇ ರೀತಿಯ ಪ್ರಕರಣ; ರಷ್ಯಾದಲ್ಲಿ ಇಂತಹದ್ದೇ ಒಂದು ಸಮಾಜ ತಲೆತಗ್ಗಿಸುವ ಘಟನೆ ನಡೆದಿತ್ತು. 35 ವರ್ಷದ ಮಹಿಳೆ ಮರೀನಾ ಬಾಲ್ಮಶೇವಾ ಎಂಬಾಕೆ ತನ್ನ 20 ವರ್ಷದ ಮಲಮಗನನ್ನು ವಿವಾಹವಾಗಿದ್ದರು. ಮರೀನಾ ಅಲೆಕ್ಸಿ ಎಂಬ ವ್ಯಕ್ತಿಯೊಡನೆ ವಿವಾಹವಾಗಿದ್ದರು.

ಪತಿಗೆ ಂಚನೆ: ಫ್ರೆಂಚ್ ಡೇಟಿಂಗ್ ಆ್ಯಪ್ ಸಮೀಕ್ಷೆ ವರದಿ ಬಹಿರಂಗಪತಿಗೆ ಂಚನೆ: ಫ್ರೆಂಚ್ ಡೇಟಿಂಗ್ ಆ್ಯಪ್ ಸಮೀಕ್ಷೆ ವರದಿ ಬಹಿರಂಗ

ಅಲೆಕ್ಸಿಗೆ ಈಗಾಗಲೇ ವಿವಾಹವಾಗಿ ವ್ಲಾಡಿಮಿರ್ ಎಂಬ ಮಗನಿದ್ದನು. ಕೆಲವು ತಿಂಗಳ ನಂತರ ಮರೀನಾ ಮತ್ತು ಅಲೆಕ್ಸಿ ವಿಚ್ಛೇಧನ ಪಡೆದುಕೊಂಡಿದ್ದರು. ಆ ಬಳಿಕ ಮರೀನಾ ಅಲೆಕ್ಸಿ ಮೊದಲ ಪತ್ನಿ ಮಗ ವ್ಲಾಡಿಮಿರ್‌ ಜೊತೆಗೆ ಸ್ನೇಹ ಬೆಳೆದು ನಂತರ ಇವರಿಬ್ಬರು ವಿವಾಹವಾಗಿದ್ದರು. ಈ ವಿಷಯವನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ಗೆ ಸಾಕಷ್ಟು ಆಕ್ಷೇಪ ವ್ಯಕ್ತವಾಗಿತ್ತು.

ಆದರೆ ಭಾರತದಲ್ಲಿ ಈ ರೀತಿಯ ಘಟನೆ ನಡೆದಿದೆ ಎಂದರೆ ನಂಬಲು ಸಾಧ್ಯವಿಲ್ಲ. ಸದ್ಯಕ್ಕೆ ಇಂದ್ರರಾಮ್ ನೀಡಿರುವ ದೂರಿನನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದು, ತಪ್ಪಿಸಿಕೊಂಡಿರುವ ಬಬ್ಲಿ ಸಿಕ್ಕ ನಂತರ ಸತ್ಯ ತಿಳಿಯಲಿದೆ.

English summary
Woman allegedly married her son in Bazpur in Uttarakhand, Udham Singh Nagar. Now her husband moved police station and field complaint aganist her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X