ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಗೋಳದಲ್ಲೊಂದು ಮಾನವ ನಿರ್ಮಿತ ನಕ್ಷತ್ರ 'ಹ್ಯುಮ್ಯಾನಿಟಿ ಸ್ಟಾರ್'

By Sachhidananda Acharya
|
Google Oneindia Kannada News

ಬೆಂಗಳೂರು, ಜನವರಿ 27: ಭೂಮಿಯಿಂದ ಆಕಾಶ ನೋಡಿದರೆ ನಕ್ಷತ್ರಗಳು ಬರಿಗಣ್ಣಿಗೆ ಕಾಣಿಸುತ್ತವೆ. ಆದರೆ ನಮ್ಮ ವಿಜ್ಞಾನಿಗಳು ಹಾರಿ ಬಿಟ್ಟ ಉಪಗ್ರಹಗಳು ಬರಿಗಣ್ಣಿಗೆ ಕಾನಿಸುವುದಿಲ್ಲ. ಒಂದೊಮ್ಮೆ ಹೀಗೆ ಹಾರಿಬಿಟ್ಟ ಉಪಗ್ರಹ ಬರಿಗಣ್ಣಿಗೆ ಗೋಚರಿಸಿದರೆ ಅದೇ ಮಾನವ ನಿರ್ಮಿತ ನಕ್ಷತ್ರ.

ಇಂಥಹದೊಂದು ಪ್ರಯತ್ನಕ್ಕೆ ಉಪಗ್ರಹ ಉಡಾವಣಾ ಸಂಸ್ಥೆಯೊಂದು ಕೈ ಹಾಕಿದೆ. ರಾಕೆಟ್ ಲ್ಯಾಬ್ ಎಂಬ ಸಂಸ್ಥೆ ನ್ಯೂಜಿಲ್ಯಾಂಡ್ ನಲ್ಲಿರುವ ತನ್ನ ಉಪಗ್ರಹ ಉಡಾವಣಾ ಕೇಂದ್ರದಿಂದ ಕಳೆದ ವಾರ ಈ ಕೃತಕ ನಕ್ಷತ್ರವನ್ನು ಹಾರಿ ಬಿಟ್ಟಿದೆ. ಈ ನಕ್ಷತ್ರಕ್ಕೆ 'ಹ್ಯುಮ್ಯಾನಿಟಿ ಸ್ಟಾರ್' ಎಂದು ಸಂಸ್ಥೆ ಹೆಸರಿಟ್ಟಿದೆ.

ಇದೊಂದು 65 ಪ್ರಬಲ ಪ್ರತಿಫಲಕಗಳನ್ನು ಒಳಗೊಂಡ ಗೋಲವಾಗಿದೆ. ಕಾರ್ಬಲ್ ಫೈಬರ್ ನಿಂದ ಇದನ್ನು ತಯಾರಿಸಲಾಗಿದೆ. ಇದು ಆಕಾಶದಲ್ಲಿ ನಿರಂತರ ತಿರುಗುತ್ತಿದ್ದು ಸೂರ್ಯನಬೆಳಕನ್ನು ಭೂಮಿಯತ್ತ ಪ್ರತಿಫಲಿಸಲಿದೆ.

Man made 'Humanity Star’ visible from space with naked eye

ಇದು ಪ್ರತಿ 90 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರಲಿದೆ. ಇದು ಭೂಮಿಯ ಯಾವ ಭಾಗದಿಂದಲಾದರೂ ಬರಿಗಣ್ಣಿಗೂ ಗೋಚರಿಸಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದನ್ನು ರಾಕೆಟ್ ಲ್ಯಾಬ್ ಸಂಸ್ಥಾಪಕ ಮತ್ತು ಸಿಇಒ ಪೀಟರ್ ಬೆಕ್ ಸೃಷ್ಟಿಸಿದ್ದಾರೆ.

English summary
Visible from space with the naked eye, the Humanity Star is a highly reflective satellite that blinks brightly across the night sky. This was created by Rocket Lab founder and CEO Peter Beck.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X