ಕೇರಳ: ಮದುವೆ ಮುನ್ನಾದಿನ ವಧುವನ್ನು ಇರಿದು ಕೊಂದ ಪಾಪಿ ತಂದೆ

Posted By:
Subscribe to Oneindia Kannada

ಮಲ್ಲಪ್ಪುರಂ, ಮಾರ್ಚ್ 23: ಹೆತ್ತ ಮಗಳನ್ನು ತಂದೆಯೊಬ್ಬ ಆಕೆಯ ಮದುವೆಗೆ ಒಂದು ದಿನ ಇರುವಾಗ ಕೊಲೆ ಮಾಡಿದ ಅಮಾನವೀಯ ಘಟನೆ ಕೇರಳದ ಅರಿಕ್ಕೊಡ್ ಎಂಬಲ್ಲಿ ನಿನ್ನೆ(ಮಾ.22) ನಡೆದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅನ್ಯ ಜಾತಿಯ ಹುಡುಗನನ್ನು ಮಗಳು ಪ್ರೇಮಿಸುತ್ತಿದ್ದುದು ತಂದೆ ಇಷ್ಟವಿರಲಿಲ್ಲ. ಇದಕ್ಕಾಗಿ ಅವರಿಬ್ಬರ ನಡುವೆ ಸದಾ ವಾಗ್ವಾದಗಳು ನಡೆಯುತ್ತಿದ್ದು. ವಾದ ವಿವಾದಗಳ ನಡುವಲ್ಲೇ ಅವರಿಬ್ಬರ ಮದುವೆಯನ್ನು ನಿಕ್ಕಿ ಇರಿಸಲಾಗಿತ್ತು.

ಪ್ರೀತಿಸಿದ್ದಕ್ಕೆ ಮಗಳನ್ನೇ ನೇಣು ಹಾಕಿ, ಬೆಂಕಿ ಹಚ್ಚಿ ಕೊಂದ ಪಾಪಿ ತಂದೆ

ಆದರೆ ಮಗಳ ಮದುವೆಗೆ ಇನ್ನೊಂದು ದಿನ ಬಾಕಿ ಇರುವಾಗ ಸ್ವತಃ ತಂದೆಯೇ ಮಗಳನ್ನು ಇರಿದು ಕೊಲ್ಲುವ ಮೂಲಕ ಮರ್ಯಾದಾ ಹತ್ಯೆಯ ಇರುವನ್ನು ಸಾಬೀತುಪಡಿಸಿದ್ದಾನೆ.

Man kills her own daughter a day before her marriage in Kerala

ಮೃತ ವಧುವನ್ನು ಅತಿರಾ ಎಂದು ಗುರುತಿಸಲಾಗಿದೆ. ಈಕೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನನ್ನು ಪ್ರೇಮಿಸುತ್ತಿದ್ದಳು. ಆದರೆ ಈ ಸಂಬಂಧ ತಂದೆ ರಾಜನ್ ಗೆ ಇಷ್ಟವಿರಲಿಲ್ಲ. ಇಬ್ಬರ ನಡುವಲ್ಲಿ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರಲ್ಲೇ ಆಕೆ ಕೊನೆಯುಸಿರೆಳೆದಿದ್ದರು. ಆರೋಪಿ ರಾಜನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Kerala woman who is 22 year old was killed by her own father just a day before her wedding. The incident took place in Arikkod, Kerala on March 22nd.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ