ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿಗೂ ಆಧಾರ್ ಕಾರ್ಡ್ ಮಾಡಿಸಿದ ಕಿಲಾಡಿ!

By Shami
|
Google Oneindia Kannada News

ಭಿಂಡ್(ಮಧ್ಯಪ್ರದೇಶ), ಜು. 03: ತನ್ನ ನಾಯಿಗೆ ಆಧಾರ್ ಕಾರ್ಡ್ ಮಾಡಿಸಿದ ಭೂಪನೊಬ್ಬನ ಪಾಡು ಈಗ ನಾಯಿಪಾಡಾಗಿದೆ. ಆಧಾರ್ ಕಾರ್ಡ್ ಮಾಡಿಸುವ ಏಜೆನ್ಸಿಯಲ್ಲಿ ಸೂಪರ್ ವೈಸರ್ ಆಗಿರುವ ಅಜಮ್ ಖಾನ್ ತನ್ನ ನಾಯಿಗೂ ಈ ಗುರುತಿನ ಚೀಟಿ ಮಾಡಿಸಿರುವುದು ಇನ್ನಷ್ಟು ಸೋಜಿಗವಾಗಿದೆ. ಎಂಥೆಂತ ಕಿಲಾಡಿಗಳು ಇದಾರೆ ಈ ದೇಶದಲ್ಲಿ.

ಆಧಾರ್ ಕಾರ್ಡಿನ ವಿವರ ಇಂತಿದೆ... ಹೆಸರು ಟಾಮಿ ಸಿಂಗ್, ಸನ್ ಆಫ್ ಶೇರು ಸಿಂಗ್. ಜನ್ಮ ದಿನಾಂಕ 26-11-2009. ಲಿಂಗ, ಪುರುಷ! ..ಪ್ರಾಣಿಗಳಿಗೂ ಆಧಾರ್ ಕಾರ್ಡ್ ನೀಡಲಾಗುತ್ತಿದೆ, ನಮಗೆ ಮಾತ್ರ ಸಿಗುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ ನಂತರ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

aadhar

ಸಾಕು ಪ್ರಾಣಿಯ ಮೇಲಿನ ಪ್ರೀತಿಯೋ? ಪ್ರಯೋಗಶೀಲ ಬುದ್ಧಿಯೋ ? ಇದರ ಲಾಭಗಳನ್ನು ಪಡೆಯುವ ಹುನ್ನಾರವೋ? ಅಂತೂ ಖಾನ್ ಜೈಲು ಪಾಲಾಗಿದ್ದಾನೆ. ಖಾನ್ ತನ್ನ ನಾಯಿ ಹೆಸರಲ್ಲಿ ಜನಧನ ಖಾತೆ ತೆರೆಯುವ ಬಯಕೆ ಹೊಂದಿದ್ದನೋ ಅಥವಾ ಗ್ಯಾಸ್ ಸಬ್ಸಿಡಿ ಪಡೆಯಬೇಕು ಎಂದು ಅಂದುಕೊಂಡಿದ್ದನೋ ಗೊತ್ತಿಲ್ಲ!

ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ವಾಕಾಂಕ್ಷಿ ಯೋಜನೆ ದಾರಿ ತಪ್ಪುತ್ತಿದೆಯೇ ಎಂಬ ಪ್ರಶ್ನೆಯೂ ಇದರೊಂದಿಗೆ ಒಡಮೂಡಿದೆ. ಆಧಾರ್ ಕಾರ್ಡ್ ನ್ನು ಗ್ಯಾಸ್ ಸಬ್ಸಿಡಿ ಪಡೆಯಲು, ಆದಾಯ ತೆರಿಗೆ ಪಾವತಿ ಸಲ್ಲಿಕೆಗೆ ಬಳಸಿಕೊಳ್ಳಬಹುದು. ಅಲ್ಲದೇ ಚುನಾವಣಾ ಆಯೋಗ ತಿಳಿಸಿರುವ 21 ದಾಖಲಾತಿಗಳಲ್ಲಿ ಆಧಾರ್ ಕಾರ್ಡ್ ಸಹ ಒಂದು. ಆಧಾರ್ ಕಾರ್ಡ್ ನ್ನು ಬಹುತೇಕ ಜನ ಗುರುತಿನ ಚೀಟಿಯನ್ನಾಗಿ ಬಳಸಿಕೊಳ್ಳುತ್ತಿರುವುದು ಸುಳ್ಳಲ್ಲ.[ಅರ್ಜಿ ಹಾಕಿದ 48 ಗಂಟೆಗಳಲ್ಲಿ ಪ್ಯಾನ್ ಕಾರ್ಡ್]

ಸ್ಥಳೀಯ ನಾಗರಿಕ ಅಖಿಲೇಶ್ ಸಿಂಗ್ ಯಾದವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ 'ನಾಯಿ ಕಾರ್ಡ್' ವಿಚಾರ ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಮಿಂದನಪುರ್ ವಿದ್ಯಾರ್ಥಿ ಸೌಮ್ಯದೀಪ್ ಐಟಿಐ ಪ್ರವೇಶ ಪತ್ರದಲ್ಲೂ ನಾಯಿ ಫೋಟೋ ಕಂಡುಬಂದಿತ್ತು. ನಂತರ ಆತ ಸೌಮ್ಯದೀಪ್ ದಾಖಲೆ ನೀಡುವಾಗಲೇ ನಾಯಿ ಫೋಟೋ ನೀಡಿದ್ದ ಎಂಬ ವಿಚಾರ ತಿಳಿದು ಆತನನ್ನು ಬಂಧಿಸಲಾಗಿತ್ತು.[ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?]

ಆದರೆ ಖಾನ್ ತನ್ನ ನಾಯಿಗೆ ಯಾಕೆ ಆಧಾರ್ ಕಾರ್ಡ್ ಮಾಡಿಸಿದ್ದ ಎಂಬುದು ತಿಳಿದು ಬಂದಿಲ್ಲ. ಈತನೇ ಮೇಲ್ವಿಚಾರಕನಾದ್ದರಿಂದ ಉಳಿದ ಸಾಕು ಪ್ರಾಣಿಗಳಿಗೂ ಕಾರ್ಡ್ ಮಾಡಿಸಿದ್ದಾನೆಯೇ? ಪೊಲೀಸರು ತಲೆ ಬಿಸಿ ಮಾಡಿಕೊಂಡಿದ್ದಾರೆ.

ನಂದನ್ ನೀಲೆಕಣಿ ನೇತೃತ್ವದಲ್ಲಿ ಜಾರಿಗೆ ಬಂದ ಆಧಾರ್ ಯೋಜನೆ ಇಡೀ ದೇಶದ ನಾಗರಿಕರಿಗೆ ಏಕರೂಪದ ಗುರುತಿನ ಪತ್ರ ನೀಡುವ ಗುರಿ ಹೊಂದಿತ್ತು. ಬದಲಾದ ಸರ್ಕಾರಗಳ ನೀತಿಗೆ ಸಿಕ್ಕ ಆಧಾರ್ ನಲ್ಲೂ ಕೆಲ ಬದಲಾವಣೆಗಳಾಗಿದ್ದರೂ ಸರ್ಕಾರ ಮಾನ್ಯತೆಯನ್ನು ಹಾಗೆ ಇರಿಸಿದೆ.

English summary
Madhya Pradesh: A man has been arrested for getting an Aadhaar card made of his dog in the district, police said. Azam Khan (35), who is working as a supervisor at an Aadhaar enrollment agency in Umri town, about 45 kms from the district headquarters, was arrested yesterday following a complaint that he had made an Aadhaar card for his dog, Bhind Superintendent of Police Navneet Bhasin provided details the beneficiary Tommy Singh, Azam Khans Pet!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X