ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾಫಿಕ್ ಪೊಲೀಸರ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿ ಮಾಡಿದ್ದೇನು?

|
Google Oneindia Kannada News

ವಡೋದರ, ಸೆಪ್ಟೆಂಬರ್ 11: ಹೊಸ ಟ್ರಾಫಿಕ್ ನಿಯಮ ಜಾರಿಗೆ ಬಂದ ದಿನದಿಂದ ವಾಹನ ಸವಾರರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಸಂಚಾರ ನಿಯಮ ಪಾಲನೆ ಮಾಡದವರು ಹಾಗಿರಲಿ ಎಲ್ಲಾ ದಾಖಲೆಗಳಿದ್ದರೂ ಕೂಡ ಎಲ್ಲಿ ಟ್ರಾಫಿಕ್ ಪೊಲೀಸರು ಹಿಡಿದು ಪದೇ ಪದೇ ದಾಖಲೆಗಳನ್ನು ತೋರಿಸಲು ಹೇಳುತ್ತಾರೋ ಎನ್ನುವ ಕಾರಣಕ್ಕೆ ಅವುಗಳಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಉಪಾಯಗಳನ್ನು ಮಾಡುತ್ತಿದ್ದಾರೆ.

ಹುಷಾರ್‌! ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ಬೀಳುತ್ತೆ ದಂಡಹುಷಾರ್‌! ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ಬೀಳುತ್ತೆ ದಂಡ

ಹೆಲ್ಮೆಟ್ ಧರಿಸುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ತುಂಬಾನೆ ಟ್ರೋಲ್ ಆಗುತ್ತಿದೆ. ಮನೆಯಲ್ಲೂ ಹೆಲ್ಮೆಟ್ ಹಾಕಿಕೊಂಡೇ ಇರುವುದು, ಊಟ ಮಾಡುವಾಗಲೂ ರಸ್ತೆಯಲ್ಲಿ ಓಡಾಡುವಾಗಲೂ, ಮಲಗುವಾಗಲೂ ಹೀಗೆ ಹೆಲ್ಮೆಟ್ ವಿಷಯ ಟ್ರೋಲ್ ಆಗುತ್ತಲೇ ಇದೆ.

ನಿತ್ಯ ಪೊಲೀಸರು ಅಷ್ಟು ದಂಡ ವಸೂಲಿ ಮಾಡಿದರಂತೆ ಎನ್ನುವ ಮಾತೇ ಕಿವಿಗೆ ಬೀಳುತ್ತಿದ. ಹೀಗಾಗಿ ವಡೋದರದಲ್ಲಿ ಹೆಲ್ಮೆಟ್‌ಗೆ ದಾಖಲೆಗಳನ್ನು ಅಂಟಿಸಿಕೊಂಡು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.

 ಪೊಲೀಸರು ದಂಗಾಗಿದ್ದು ಈ ಐಡಿಯಾ ನೋಡಿಯೇ

ಪೊಲೀಸರು ದಂಗಾಗಿದ್ದು ಈ ಐಡಿಯಾ ನೋಡಿಯೇ

ದೇಶಾದ್ಯಂತ ಈಗ ಸಂಚಾರಿ ನಿಯಮ ಉಲ್ಲಂಘನೆ, ಸಂಚಾರಿ ಪೊಲೀಸರಿಂದ ಭರ್ಜರಿ ಕಲೆಕ್ಷನ್‌ನದ್ದೇ ಸುದ್ದಿ ಹರಿದಾಡುತ್ತಿದೆ. ಆದರೆ ಗುಜರಾತ್‌ನ ವಡೋದರಾದ ವ್ಯಕ್ತಿಯೊಬ್ಬರು ಸಂಚಾರಿ ಪೊಲೀಸರ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಮಾಸ್ಟರ್‌ ಪ್ಲ್ಯಾನ್ ಮಾಡಿದ್ದಾರೆ. ಅವರ ಭರ್ಜರಿ ಐಡಿಯಾ ಕಂಡು ಪೊಲೀಸರೇ ದಂಗಾಗಿದ್ದಾರೆ.

 ಪದೇ ಪದೇ ಗಾಡಿ ನಿಲ್ಲಿಸುವುದನ್ನು ತಡೆಯಲು ಹೊಸ ಉಪಾಯ

ಪದೇ ಪದೇ ಗಾಡಿ ನಿಲ್ಲಿಸುವುದನ್ನು ತಡೆಯಲು ಹೊಸ ಉಪಾಯ

ಬೈಕ್‌ ಸವಾರ ರಾಮ್‌ ಶಾ ತಮ್ಮ ಬೈಕ್‌ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಹೆಲ್ಮೆಟ್‌ಗೆ ಅಂಟಿಸಿಕೊಂಡಿದ್ದಾರೆ. ಪೊಲೀಸರು ದಾರಿಯುದ್ದಕ್ಕೂ ಪದೇಪದೆ ಗಾಡಿ ನಿಲ್ಲಿಸುವುದು, ದಾಖಲೆಗಳನ್ನು ತೆಗೆದು ತೋರಿಸುವುದು ಇದೆಲ್ಲಾ ರಾದ್ಧಾಂತವೇ ಬೇಡವೆಂದು ಈ ಪ್ಲ್ಯಾನ್ ಮಾಡಿದ್ದಾರೆ.

ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್

 ರಾಮ್ ಶಾ ವಿಮೆ ಏಜೆಂಟ್

ರಾಮ್ ಶಾ ವಿಮೆ ಏಜೆಂಟ್

ರಾಮ್ ಶಾ ವಿಮೆ ಏಜೆಂಟ್ ಆಗಿದ್ದು ರಾಯಲ್‌ ಎನ್‌ಫೀಲ್ಡ, ಬುಲೆಟ್‌ ಬೈಕ್‌ ಹೊಂದಿದ್ದಾರೆ. ವಿಮೆ ಕೆಲಸಕ್ಕಾಗಿ ದಿನವಿಡೀ ಹಲವು ಕಡೆ ತಿರುಗಾಡುವುದು ಅವರ ವೃತ್ತಿಯ ಭಾಗವಾಗಿದೆ.

ಹೀಗಾಗಿ ದಿನವಿಡೀ ಹಲವು ಬಾರಿ ಪೊಲೀಸರಿಗೆ ದಾಖಲೆ ತೋರಿಸುತ್ತಾ ಸಮಯ ವ್ಯರ್ಥಮಾಡುವುದನ್ನು ತಪ್ಪಿಸಲು ಈ ಉಪಾಯ ಕಂಡುಕೊಂಡಿದ್ದಾಗಿ ಹೇಳುತ್ತಾರೆ ರಾಮ್‌ ಶಾ. ಡ್ರೈವಿಂಗ್‌ ಲೈಸೆನ್ಸ್‌, ವಿಮೆ, ಪಿಯುಸಿ (ಮಾಲಿನ್ಯ ನಿಯಂತ್ರಣ)ಪ್ರಮಾಣ ಪತ್ರ, ಬೈಕ್‌ನ ನೋಂದಣಿ ಪತ್ರಗಳ ನಕಲುನ ಪ್ರತಿ ಎಲ್ಲವನ್ನೂ ಹೆಲ್ಮೆಟ್‌ಗೆ ಅಂಟಿಸಿಕೊಂಡಿದ್ದಾರೆ.

 ಪೊಲೀಸ್ ಅಧಿಕಾರಿಯೇ ಹೆಲ್ಮೆಟ್ ಹಾಕದೆ ಗಾಡಿ ಚಾಲನೆ

ಪೊಲೀಸ್ ಅಧಿಕಾರಿಯೇ ಹೆಲ್ಮೆಟ್ ಹಾಕದೆ ಗಾಡಿ ಚಾಲನೆ

ಒಂದೆಡೆ ಜನರಿಗೆ ಸಂಚಾರ ನಿಯಮ ಪಾಲನೆ ಬಗ್ಗೆ ಭಾಷಣ ಮಾಡುವ ಪೊಲೀಸರೇ ನಿಯಮ ಪಾಲಿಸದೆ ಎಲ್ಲೆಡೆ ಟ್ರೋಲ್ ಆಗುತ್ತಿದ್ದಾರೆ. ಕಳೆದ ವಾರ ಗುಜರಾತ್‌ನ ಪೊಲೀಸ ಅಧಿಕಾರಿಯೇ ಹೆಲ್ಮೆಟ್‌ ಇಲ್ಲದೆ ಬೈಕ್‌ ಚಾಲನೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದರು. ವಿಡಿಯೊ ವೈರಲ್‌ ಆದ ನಂತರ ಈ ಪೊಲೀಸ್‌ ಅಧಿಕಾರಿಗೆ 1,100 ರೂ. ದಂಡ ವಿಧಿಸಲಾಗಿತ್ತು.

ಶಾಕ್ ಆಯ್ತಾ, ಶಾಕ್ ಆಗ್ಲೇ ಬೇಕೂಂತ ತಾನೇ ಟ್ರಾಫಿಕ್ ಫೈನ್ ಹಾಕಿರೋದು..ಶಾಕ್ ಆಯ್ತಾ, ಶಾಕ್ ಆಗ್ಲೇ ಬೇಕೂಂತ ತಾನೇ ಟ್ರಾಫಿಕ್ ಫೈನ್ ಹಾಕಿರೋದು..

 ದಂಡದ ಮೊತ್ತ ಇಳಿಸಿದ ಗುಜರಾತ್

ದಂಡದ ಮೊತ್ತ ಇಳಿಸಿದ ಗುಜರಾತ್

ಮೋಟಾರು ವಾಹನ ತಿದ್ದುಪಡಿ ಕಾಯಿದೆ ಜಾರಿಯೊಂದಿಗೆ ಗಗನಕ್ಕೇರಿದ್ದ ಟ್ರಾಫಿಕ್‌ ನಿಯಮ ಉಲ್ಲಂಘನೆಯ ದಂಡ ಪ್ರಮಾಣವನ್ನು ಗುಜರಾತ್‌ ಸರಕಾರ ಗಣನೀಯ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ನೂತನ ನಿಯಮದ ಪ್ರಕಾರ ಹೆಲ್ಮೆಟ್‌ರಹಿತ ಸವಾರನಿಗೆ 1000 ರೂ. ದಂಡ ವಿಧಿಸಲಾಗುತ್ತದೆ. ಆದರೆ ಗುಜರಾತ್‌ ಸರಕಾರ ಈ ದಂಡ ಪ್ರಮಾಣವನ್ನು ಅರ್ಧಕ್ಕೆ ಅಂದರೆ 500 ರೂ.ಗಳಿಗೆ ಇಳಿಸಿದೆ. ಸೀಟ್‌ ಬೆಲ್ಟ್‌ ಧರಿಸದ ಕಾರು ಚಾಲಕರ ವಿರುದ್ಧದ ದಂಡ ಪ್ರಮಾಣವನ್ನು ಕೂಡ ಅರ್ಧದಷ್ಟು ಇಳಿಕೆ ಮಾಡಲಾಗಿದೆ. ಪರವಾನಿಗೆ ರಹಿತ ಚಾಲನೆಗೆ ಇರುವ 5000 ರೂ. ದಂಡವನ್ನು 3000 ರೂ. (ಕಾರು ಚಾಲನೆ) ಮತ್ತು 2000 ರೂ.ಗಳಿಗೆ (ದ್ವಿಚಕ್ರ) ಇಳಿಸಲಾಗಿದೆ.

English summary
Ram Shah, an insurance agent who travels everyday on his two-wheeler, has fixed his driving license, insurance slip, PUC certificate and his bike’s registration on his helmet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X