ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಭಕ್ಷಕ 'ಅವನಿ ಹುಲಿ' ಇನ್ನಿಲ್ಲ! 13 ಜನರನ್ನು ಕೊಂದಿದ್ದ ಹುಲಿಗೆ ಗುಂಡೇಟು!

|
Google Oneindia Kannada News

ಯಾವತ್ಮಾಲ್(ಮಹಾರಾಷ್ಟ್ರ), ನವೆಂಬರ್ 03: ಕಳೆದ ಎರಡು ವರ್ಷಗಳಿಂದ ಸುಮಾರು 13 ಜನರನ್ನು ಕೊಂದಿದ್ದ ಹೆಣ್ಣು ಹುಲಿ ಅವನಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

ದೀಪಾವಳಿ ವಿಶೇಷ ಪುರವಣಿ

ಆರು ವರ್ಷ ವಯಸ್ಸಿನ 'ಅವನಿ' ಕಳೆದ ಎರಡು ವರ್ಷಗಳಿಂದ ನರಭಕ್ಷಕ ಹುಲಿಯಾಗಿ ಪರಿವರ್ತನೆಯಾಗಿತ್ತು. ಅವನಿಯ ಉಪಟಳ ತಡೆಯಲಾರದೆ ಹಲವರು ಆನ್ ಲೈನ್ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, ಈ ಹುಲಿಯನ್ನು 'ಕಂಡಲ್ಲಿ ಗುಂಡಿಕ್ಕುವ ಆದೇಶ'ವನ್ನು ನೀಡಿತ್ತು.

ಅಗಸನಹುಂಡಿ ಬಳಿ ಬೋನಿಗೆ ಬಿದ್ದ ಹೆಣ್ಣು ಹುಲಿ ನೋಡಲು ಜಮಾಯಿಸಿದ ಜನಅಗಸನಹುಂಡಿ ಬಳಿ ಬೋನಿಗೆ ಬಿದ್ದ ಹೆಣ್ಣು ಹುಲಿ ನೋಡಲು ಜಮಾಯಿಸಿದ ಜನ

ಹತ್ತು ತಿಂಗಳಿನ ಎರಡು ಮರಿಗಳನ್ನು ಹೊಂದಿರುವ ಅವನಿ ಸುಮಾರು 150 ಸಿಬ್ಬಂದಿ, ಆನೆಗಳು, ಹುಲಿ ಹಿಡಿಯುವ ಪರಿಣಿತರು, ಶೂಟರ್ ಗಳಿಗೆ ಮೂರು ತಿಂಗಳಿನಿಂದ ಚಳ್ಳೆಹಣ್ಣು ತಿನ್ನಿಸಿತ್ತು. ಅವನಿಯನ್ನು ಜೀವಂತವಾಗಿ ಹಿಡಿಯುವ ಎಲ್ಲಾ ಪ್ರಯತ್ನವೂ ವಿಫಲವಾಗಿದ್ದವು. 2012 ರಲ್ಲಿ ಯವಾತ್ಮಾಲ್ ಕಾಡಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ 'ಅವನಿ'ಗೆ ಕಳೆದ ಎರಡು ವರ್ಷಗಳಿಂದ ಮನುಷ್ಯರ ಮಾಂಸದ ರುಚಿ ಹತ್ತಿತ್ತು. ಇದರಿಂದಾಗಿ ಸುತ್ತಮುತ್ತಲ ಗ್ರಾಮದ ಜನರು ನಿದ್ದೆಗೆಡಬೇಕಾಯಿತು.

Array

ಕಂಡಲ್ಲಿ ಗುಂಡು

ಬೇರೆ ದಾರಿ ಕಾಣದೆ ಸೆಪ್ಟೆಂಬರ್ 4 ರಂದು ಅವನಿಯನ್ನು ಕಂಡಲ್ಲಿ ಗುಂಡಿಕ್ಕುವ ಆದೇಶವನ್ನು ಮಹಾರಾಷ್ಟ್ರ ಅರಣ್ಯ ಇಲಾಖೆ ನೀಡಿತ್ತು. ಆದರೆ ಈ ನಿರ್ಧಾರವನ್ನು ವನ್ಯಜೀವಿ ಪ್ರಿಯರು ವಿರೋಧಿಸಿ, ಅವನಿಯನ್ನು ಬದುಕುಲು ಬಿಡುವಂತೆ ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ ಇದೀಗ ಅವನಿ ಇನ್ನಿಲ್ಲ ಎಂಬ ಸುದ್ದಿ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಈಗ ಬಂಡೀಪುರದಲ್ಲಿ ಸಫಾರಿಗೆ ಹೋದಾಗಲೆಲ್ಲ ಹುಲಿರಾಯ ಕಾಣಿಸುತ್ತಾನಂತೆ!ಈಗ ಬಂಡೀಪುರದಲ್ಲಿ ಸಫಾರಿಗೆ ಹೋದಾಗಲೆಲ್ಲ ಹುಲಿರಾಯ ಕಾಣಿಸುತ್ತಾನಂತೆ!

Array

ಅವನಿ ಇನ್ನಿಲ್ಲ!

ಅತ್ಯಂತ ದುಃಖದಿಂದ ಅವನಿಯನ್ನು ಕೊಲ್ಲಲಾಗಿದೆ ಎಂದು ನಾನು ಹೇಳುತ್ತಿದ್ದೇನೆ. ದೇವೇಂದ್ರ ಫಡ್ನವಿಸ್ ಎಂದಿಗೂ ಸುಳ್ಳು ಭರವಸೆಯನ್ನೇ ನೀಡುತ್ತಿದ್ದಾರೆ. ರಿಲಯನ್ಸ್ ನಂಥ ನರಭಕ್ಷಕರಿರುವಾಗ ಒಂದು ಹುಲಿಯ ಜೀವದ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ ಎಂದು ಪ್ರೀತಿ ಶರ್ಮಾ ಮೆನನ್ ಎಂಬುವವರು ವಿಷಾದದಿಂದ ಟ್ವೀಟ್ ಮಾಡಿದ್ದಾರೆ.

ಬಂಡೀಪುರದ ಕಾಡಾನೆಗೆ ಸಫಾರಿ ವಾಹನವೇ ಟಾರ್ಗೆಟ್, ಯಾಕಿರಬಹುದು?ಬಂಡೀಪುರದ ಕಾಡಾನೆಗೆ ಸಫಾರಿ ವಾಹನವೇ ಟಾರ್ಗೆಟ್, ಯಾಕಿರಬಹುದು?

ಇದು ಕರಾಳ ದಿನ

ಇದು ನಿಜಕ್ಕೂ ಕರಾಳ ದಿನ! ಅವನಿ ಈ ಭೂಮಿಯ ಅತ್ಯಂತ ಅಪಾಯಕಾರಿ ಪ್ರಬೇಧವಾದ ಮನುಷ್ಯನಿಂದ ಹತ್ಯೆಯಾಗಿದೆ. ಮನುಷ್ಯರಾಗಿರುವುದಕ್ಕೆ ನಾಚಿಕೆಯಾಗುತ್ತಿದೆ ಎಂದಿದ್ದಾರೆ ಜಯಿತಾ ಸೇನ್ ಗುಪ್ತಾ.

ಅಭಿನಂದನೆಗಳು!

ಅವನಿಯನ್ನು ಕೊಂದಿದ್ದಕ್ಕೆ ಅಭಿನಂದನೆಗಳು ದೇವೇಂದ್ರ ಫಡ್ನವಿಸ್! ಈಗ ಯಾವತ್ಮಾಲ್ ಅರಣ್ಯವನ್ನು ಕೊಳ್ಳೆ ಹೊಡೆಯಲು ನಿಮಗಿದ್ದ ಏಕೈಕ ಅಡೆತಡೆಯೂ ನಿವಾರಣೆಯಾಗಿದೆ. ಕೊಳ್ಳೆಹೊಡೆಯುವುದಕ್ಕೆ ಆರಂಭಿಸಿ. ಅಲ್ಲೇ ಒಂದು ಸಿಮೆಂಟ್ ಫ್ಯಾಕ್ಟರಿ ಕಟ್ಟಿ ಎಂದು ಕಿಡಿಕಾರಿದ್ದಾರೆ ರಾಜೀವ್.

English summary
Tigress Avni (T1) had reportedly killed 14 persons in and around the Yavatmal area of Maharashtra. She was eventually shot dead here late on Friday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X