ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲೆ ಮೇಲೆ ಬೈಕ್ ಹೊತ್ತು ಬಸ್‌ ಹತ್ತಿದ ವ್ಯಕ್ತಿ: 'ಬಾಹುಬಲಿ' ಎಂದ ನೆಟ್ಟಿಗರು

|
Google Oneindia Kannada News

ಒಬ್ಬ ವ್ಯಕ್ತಿ 10-15 ಕೆಜಿ ತೂಕದ ವಸ್ತುವನ್ನು ಎತ್ತಬಹುದು. ಅಮ್ಮಮ್ಮಾ ಅಂದರೆ 25-30 ಕೆಜಿ ತೂಕದ ಅಕ್ಕಿ ಚೀಲ ಹೊತ್ತುಕೊಂಡು ಹೋಗಬಹುದು. ಅವರ ಸಾಮಾರ್ಥ್ಯ ಇದಕ್ಕಿಂತಲೂ ಇನ್ನೂ ಹೆಚ್ಚಿದ್ದರೂ ಆಶ್ಚರ್ಯವಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ. 140 ರಿಂದ 166 ಕೆಜಿ ತೂಕದ ಬೈಕ್‌ ಅನ್ನು ಎತ್ತುವ ಮೂಲಕ ನೋಡುಗರನ್ನು ಬೆರಗಾಗಿಸಿದ್ದಾನೆ. ಕೇವಲ ಎತ್ತುವುದು ಮಾತ್ರವಲ್ಲ ಅದನ್ನು ತಲೆ ಮೇಲೆ ಹೊತ್ತುಕೊಂಡು ಬಸ್ ಕೂಡ ಹತ್ತುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ವಿಡಿಯೋವನ್ನು ಗುಲ್ಜಾರ್ ಸಾಹಬ್ ಎಂಬುವವರು ಶುಕ್ರವಾರ ತಮ್ಮ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು 76,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 5,000 ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಸಂಗ್ರಹಿಸಿದೆ. "ಈತ ನಿಜವಾಗಿಯೂ ಸೂಪರ್ ಮಾನವ" ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಕೆಳಗಿನ ವಿಡಿಯೊವನ್ನು ವೀಕ್ಷಿಸಿ:

ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ತಲೆಯ ಮೇಲೆ ಭಾರವಾದ ಬೈಕ್ ಹೊತ್ತು ಬಸ್‌ನತ್ತ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ನಂತರ, ಅವನು ಬಸ್ಸಿನ ಬದಿಯಲ್ಲಿ ಇರಿಸಲಾದ ಏಣಿಯನ್ನು ಹತ್ತುತ್ತಾನೆ. ನಡಿಗೆಯಲ್ಲಿ ನಡುಕವಿಲ್ಲ, ಮಾತಲ್ಲಿ ತಡವರಿಕೆಯಿಲ್ಲ, ತೇಗುಸಿರು, ಅಳುಕು, ಅಂಜಿಕೆ ಇವ್ಯಾವು ಇಲ್ಲವೇ ಇಲ್ಲ. ತಲೆ ಮೇಲೆ ಏನೂ ಇಲ್ಲವೆಂಬಂತೆ ಸಲೀಸಾಗಿ ಈ ವ್ಯಕ್ತಿ ತಲೆ ಮೇಲೆ ಬೈಕ್ ಹೊತ್ತು ಬಸ್‌ ಮೇಲೇರುತ್ತಾನೆ. ಮತ್ತೊಂದು ವಿಚಿತ್ರ ಅಂದರೆ ಈ ವ್ಯಕ್ತಿ ಬೈಕ್‌ ಅನ್ನು ಕೈಯಲ್ಲಿ ಹಿಡಿದುಕೊಳ್ಳದೇ ಏಣಿ ಮೇಲೆ ನಡೆಯುತ್ತಾನೆ. ಇದನ್ನು ಕಂಡ ಜನ ಈ ವ್ಯಕ್ತಿಯನ್ನು ಬಾಹುಬಲಿಗೆ ಹೋಲಿಸಿದ್ದಾರೆ. ಈತನನ್ನು ನಿಜ ಜೀವನದ ಬಾಹುಬಲಿ ಎಂದು ಕರೆದಿದ್ದಾರೆ.

Man boarded a bus carrying a bike on his head: People called him Baahubali

ಹೆವಿ ವಾಹನವನ್ನು ತಲೆಯ ಮೇಲೆ ಬ್ಯಾಲೆನ್ಸ್ ಮಾಡುತ್ತ ಆ ವ್ಯಕ್ತಿ ಒಂದೊಂದಾಗಿ ಮೆಟ್ಟಿಲುಗಳನ್ನು ಜಾಗ್ರತೆಯಿಂದ ಹತ್ತುತ್ತಾನೆ. ಕೊನೆಯಲ್ಲಿ, ಅವರು ಯಶಸ್ವಿಯಾಗಿ ಮೇಲಕ್ಕೆ ತಲುಪಿ ಬೈಕ್ ಅನ್ನು ಬಸ್ ಮೇಲೆ ಇರಿಸುತ್ತಾನೆ.

ವಿಡಿಯೋ ಶೇರ್ ಆದ ನಂತರ ಇಂಟರ್ನೆಟ್ ಬಳಕೆದಾರರನ್ನು ಬೆಚ್ಚಿ ಬಿದ್ದಿದ್ದಾರೆ. ಹಲವಾರು ಕಾಮೆಂಟ್ ಮಾಡುತ್ತಿದ್ದಾರೆ.

Man boarded a bus carrying a bike on his head: People called him Baahubali

"ನನಗೆ ಆತನ ಕುತ್ತಿಗೆಯಲ್ಲಿರುವ ಶಕ್ತಿ ಬೇಕು" ಎಂದು ಒಬ್ಬ ನೆಟ್ಟಿಗ ಬರೆದಿದ್ದಾರೆ.

ಮತ್ತೊಬ್ಬರು ಈತ "ನಿಜವಾದ ಬಾಹುಬಲಿ" ಎಂದು ಕರೆದಿದ್ದಾರೆ.

ಮೂರನೆಯವರು ಈ ವ್ಯಕ್ತಿಯನ್ನು "ಸೂಪರ್ ಮ್ಯಾನ್" ಎಂದು ಕರೆದರೆ, "ವಾವ್ ಮಹಾನ್ ಶಕ್ತಿ", ''ಕ್ಯಾಪ್ಟನ್ ಅಮೇರಿಕಾ ಕೂಡ ಈ ರೀತಿ ಮಾಡುತ್ತಿರಲಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.

Man boarded a bus carrying a bike on his head: People called him Baahubali

'ಈತ ವೀರನಲ್ಲ. ಆದರೂ ಈತ ತನ್ನ ಕುಟುಂಬ ನಿರ್ವಹಣೆಗಾಗಿ ಈ ಕೆಲಸ ಮಾಡುತ್ತಿದ್ದಾರೆ. ಅವರು ಗಾಯದ ಅಪಾಯವನ್ನು ಎದುರಿಸುತ್ತಾರೆ. ಮುಂದೊಂದು ದಿನ ಅವರು ಈ ಗಾಯದ ನೋವು ತಿನ್ನಬಹುದು' ಎಂದು ಮನಸ್ಸಿಗೆ ತಾಗುವಂತೆ ಬರೆದಿದ್ದಾರೆ.

ವಿಡಿಯೋ ಚಿತ್ರೀಕರಣಗೊಂಡ ಸ್ಥಳ ಇನ್ನಷ್ಟೇ ಗೊತ್ತಾಗಬೇಕಿದೆ. ನಂಬಲಾಗದ ಶಕ್ತಿಯ ಬಗ್ಗೆ ಮಾತನಾಡುವಾಗ ಮತ್ತೊಂದು ಘಟನೆ ನೆನಪಿಗೆ ಬರುತ್ತದೆ. ಸ್ವಲ್ಪ ಸಮಯದ ಹಿಂದೆ 56 ವರ್ಷದ ಮಹಿಳೆಯೊಬ್ಬರು ಭಾರವಾದ ತೂಕವನ್ನು ಎತ್ತುವ ಮತ್ತು ಇತರ ಜಿಮ್ ಉಪಕರಣಗಳನ್ನು ಬಳಸುವ ವಿಡಿಯೊ ವೈರಲ್ ಆಗಿತ್ತು. ಕ್ಲಿಪ್ ಅನ್ನು ಹ್ಯೂಮನ್ಸ್ ಆಫ್ ಮದ್ರಾಸ್ ಮತ್ತು ಮದ್ರಾ ಬಾರ್ಬೆಲ್ ಜಂಟಿಯಾಗಿ Instagram ನಲ್ಲಿ ಹಂಚಿಕೊಂಡಿದ್ದಾರೆ.

Man boarded a bus carrying a bike on his head: People called him Baahubali

ವಿಡಿಯೋದಲ್ಲಿ, ಮಹಿಳೆಯು ಸೀರೆಯನ್ನು ಧರಿಸಿ ಭಾರವಾದ ಡಂಬ್ಬೆಲ್ಸ್ ಮತ್ತು ಇತರ ಜಿಮ್ ಯಂತ್ರಗಳು ಮತ್ತು ಉಪಕರಣಗಳನ್ನು ಎತ್ತಿದ್ದಾರೆ. ಪೋಸ್ಟ್ 1.1 ಮಿಲಿಯನ್ ವೀಕ್ಷಣೆಗಳನ್ನು ಮತ್ತು 70,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

English summary
A video of a man boarding a bus carrying a bike on his head has gone viral. The person has been called 'Baahubali' on social media. Learn more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X