ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಹರಂ ದಿನದಂದು ದುರ್ಗಾ ಮೂರ್ತಿ ವಿಸರ್ಜನೆ ಅವಕಾಶ ನೀಡಿದ ಕೋರ್ಟ್

By ವಿಕಾಸ್ ನಂಜಪ್ಪ
|
Google Oneindia Kannada News

ಕೊಲ್ಕೊತ್ತಾ, ಸೆಪ್ಟೆಂಬರ್ 21: ಮೊಹರಂ ದಿನದಂದು ದುರ್ಗಾ ಮೂರ್ತಿ ವಿಸರ್ಜನೆಗೆ ಅವಕಾಶ ನಿರಾಕರಿಸಿ ಪಶ್ಚಿಮ ಬಂಗಾಳ ಸರಕಾರ ಹೊರಡಿಸಿದ್ದ ಆದೇಶವನ್ನು ಕೊಲ್ಕೊತ್ತಾ ಹೈಕೋರ್ಟ್ ತೆರವುಗೊಳಿಸಿದೆ. ಇದರಿಂದ ಮಮತಾ ಬ್ಯಾನರ್ಜಿ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ.
ಮೊಹರಂ ಸೇರಿದಂತೆ ಎಲ್ಲಾ ದಿನಗಳಲ್ಲೂ ರಾತ್ರಿ 12 ಗಂಟೆವರೆಗೆ ದುರ್ಗಾ ಮೂರ್ತಿ ವಿಸರ್ಜನೆಗೆ ಕೊಲ್ಕೊತ್ತಾ ಹೈಕೋರ್ಟ್ ಅವಕಾಶ ನೀಡಿದೆ.

ವಿಜಯ ದಶಮಿಯ ದಿನ ಅಂದರೆ ಸೆಪ್ಟೆಂಬರ್ 30ರಂದು ರಾತ್ರಿ 10 ಗಂಟೆ ನಂತರ ಹಾಗೂ ಅಕ್ಟೋಬರ್ 1ರಂದು ಮೊಹರಂ ಹಬ್ಬದ ದಿನ ದುರ್ಗಾ ಮೂರ್ತಿಗಳ ವಿಸರ್ಜನೆಗೆ ಪಶ್ಚಿಮ ಬಂಗಾಳ ಸರಕಾರ ಅವಕಾಶ ನಿರಾಕರಿಸಿತ್ತು.

Mamata’s order to ban Durga idol immersion during Muharram revoked by HC

ಸರಕಾರದ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಕೊಲ್ಕೊತ್ತಾ ಉಚ್ಚ ನ್ಯಾಯಾಲಯ, 'ಸರ್ಕಾರ ಈ ರೀತಿಯ ಆದೇಶ ನೀಡುವುದು ಸರಿಯಲ್ಲ' ಎಂದು ಆದೇಶದಲ್ಲಿ ಹೇಳಿದೆ.

ಈ ರೀತಿ ಆದೇಶ ಹೇರುವುದರಿಂದ ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗುತ್ತದೆ. ಜನ ಸಾಮಾನ್ಯರ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳಬಾರದು ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸಾಮರಸ್ಯದಿಂದ ಹಬ್ಬಗಳನ್ನು ಆಚರಣೆ ಮಾಡಲಿ. ಅಗತ್ಯವಿದ್ದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಂಘರ್ಷ ತಪ್ಪಿಸಲು ಮೆರವಣಿಗೆಗಳ ಮೇಲೆ ನಿಯಂತ್ರಣ ಹೇರಬಹುದು ಎಂದು ನ್ಯಾಯಪೀಠ ಹೇಳಿದೆ.

ಇದೇ ಸಂದರ್ಭದಲ್ಲಿ ದುರ್ಗಾ ಮೂರ್ತಿ ಮೆರವಣಿಗೆ ಹಾಗೂ ಮೊಹರಂ ಮೆರವಣಿಗೆಗಳಿಗೆ ಸೂಕ್ತ ರೀತಿಯಲ್ಲಿ ಮಾರ್ಗ ನಿಗದಿಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.

English summary
The Calcutta High Court has revoked the ban order on Durga idol during Muhharam. The court had taken a serious view of this order and had said that this amounted to hindering a citizen’s right to practise religion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X