• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಜಯಲಲಿತಾ ಬದುಕಿದ್ದರೆ ಬಿಜೆಪಿಗೆ ಎಐಎಡಿಎಂಕೆ ಬೆಂಬಲ ಸಿಗುತ್ತಿರಲಿಲ್ಲ'

|

ಕೋಲ್ಕತಾ, ಜುಲೈ 23: 'ಅವಿಶ್ವಾಸ ನಿರ್ಣಯದ ವೇಳೆ ಬಿಜೆಪಿಯು ಎಐಎಡಿಂಕೆ ಬೆಂಬಲ ಪಡೆದಿತ್ತು. ಆದರೆ, ಜಯಲಲಿತಾ ಬದುಕಿದ್ದರೆ ಬಿಜೆಪಿ ಆ ಮತಗಳನ್ನು ಪಡೆದುಕೊಳ್ಳುತ್ತಿರಲಿಲ್ಲ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತಾದಲ್ಲಿ ಭಾನುವಾರ ನಡೆದ ಹುತಾತ್ಮರ ದಿನದ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ಟಿಎಂಸಿಯಿಂದ ಬಿಜೆಪಿ ಹಠಾವೋ ದೇಶ್ ಬಚಾವೋ ಆಂದೋಲನ!

ಕೋಲ್ಕತಾದಲ್ಲಿ ಜನವರಿ 19ರಂದು ಬೃಹತ್ ಸಂಯುಕ್ತ ಒಕ್ಕೂಟದ ಸಮಾವೇಶ ನಡೆಸುವುದಾಗಿ ಮಮತಾ ಘೋಷಿಸಿದರು. ಇದರಲ್ಲಿ ಪಾಲ್ಗೊಳ್ಳುವಂತೆ ಎಲ್ಲ ವಿರೋಧಪಕ್ಷಗಳ ನಾಯಕರನ್ನು ಆಹ್ವಾನಿಸುವುದಾಗಿ ಹೇಳಿದರು.

ಪ್ರಧಾನಿ ಮೋದಿ ಸ್ವಾಗತಿಸಲು ಓಡಿ ಬಂದ ದೀದಿ!

ಮಮತಾ ಬ್ಯಾನರ್ಜಿ ಅವರು ಕೋಲ್ಕತಾದಲ್ಲಿ ಸಮಾವೇಶ ನಡೆಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ, ಅದೇ ಸ್ಥಳದಲ್ಲಿಯೇ ಜನವರಿ 23ರಂದು ಅದಕ್ಕೆ ಪ್ರತಿಯಾದ ಸಮಾವೇಶ ಆಯೋಜಿಸುವುದಾಗಿ ಬಿಜೆಪಿ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದೆ.

ಜಯಲಲಿತಾ ಬದುಕಿದ್ದರೆ...

ಜಯಲಲಿತಾ ಬದುಕಿದ್ದರೆ...

'ಅವಿಶ್ವಾಸ ನಿರ್ಣಯವನ್ನು ಬಿಜೆಪಿ 126 ಮತಗಳಿಗೆ ವಿರುದ್ಧವಾಗಿ 325 ಮತಗಳನ್ನು ಪಡೆದು ಗೆಲ್ಲುವಲ್ಲಿ ಸಫಲವಾಗಿದೆ. ಅವರಿಗೆ ಸದನದೊಳಗೆ ಸಂಖ್ಯಾಬಲವಿದೆ. ಆದರೆ ಅದು 2014ರದ್ದು. 2019 ವೇಳೆ ಈ ಸಂಖ್ಯೆಗಳನ್ನು ಅದು ಕಳೆದುಕೊಳ್ಳಲಿದೆ.

ಅವರು ಎಐಎಡಿಎಂಕೆ ಬೆಂಬಲ ಪಡೆದುಕೊಂಡರು. ಆದರೆ ಜಯಲಲಿತಾ ಬದುಕಿದ್ದರೆ, ಆ ಮತಗಳನ್ನು ಬಿಜೆಪಿ ಪಡೆದುಕೊಳ್ಳುತ್ತಲೇ ಇರಲಿಲ್ಲ. ಅವರು ತಮ್ಮ ಅತ್ಯಂತ ಹಳೆದ ಮಿತ್ರಪಕ್ಷ ಶಿವಸೇನಾವನ್ನು ಕಳೆದುಕೊಂಡಿದ್ದಾರೆ.

ಬಿಜೆಪಿ ವೇಗವಾಗಿ ಸಂಖ್ಯೆಯನ್ನು ಹಾಗೂ ಮಿತ್ರಪಕ್ಷಗಳನ್ನು ಕಳೆದುಕೊಳ್ಳುತ್ತಿದೆ. ಕೆಲವು ಪರಿಚಿತರ ಸಹಾಯದಿಂದ ಅವಿಶ್ವಾಸ ನಿರ್ಣಯ ಗೆದ್ದುಕೊಂಡಿದ್ದಾರೆ' ಎಂದು ಮಮತಾ ಹೇಳಿದ್ದಾರೆ.

ಹಿಂದೂ ತಾಲಿಬಾನಿಗಳು

ಕಳೆದ ಕೆಲವು ತಿಂಗಳಿನಿಂದ ದೇಶದಲ್ಲಿ ಹತ್ಯೆಗಳನ್ನು ನಡೆಸಲು ಬಿಜೆಪಿ ಕುಮ್ಮಕ್ಕು ನೀಡುತ್ತಿದೆ. ಬಿಜೆಪಿ ನಾಯಕತ್ವವು ತಾಲಿಬಾನಿ ಹಿಂದೂಗಳದ್ದಾಗಿದೆ.

ಮೋದಿ ತಮ್ಮನ್ನು ಹಿಟ್ಲರ್ ಮತ್ತು ಮುಸಲೋನಿಗಳಿಗಿಂತ ದೊಡ್ಡ ಸರ್ವಾಧಿಕಾರಿ ಎಂದು ಭಾವಿಸಿದ್ದಾರೆ. ತಮ್ಮ ಕೈಗಳಿಗೆ ಇನ್ನೂ ಗಲಭೆಯ ರಕ್ತಗಳನ್ನು ಅಂಟಿಸಿಕೊಂಡಿರುವ ವ್ಯಕ್ತಿ ನನ್ನ ರಾಜ್ಯಕ್ಕೆ ಬಂದು ಅಸಹಿಷ್ಣುತೆಯ ಉಪದೇಶ ಮಾಡುತ್ತಾರೆ. ನಾನು ಅವರನ್ನು ಸಹಿಸಿಕೊಳ್ಳಬೇಕೇ?

ಪ್ರಜಾಪ್ರಭುತ್ವ ಹಿಂದೆಂದಿಗೂ ಈ ರೀತಿ ಅಪಾಯಕ್ಕೆ ಸಿಲುಕಿರಲಿಲ್ಲ. ಅವರು ರಾಷ್ಟ್ರೀಯ ಮಾಧ್ಯಮಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ. ಜತೆಗೆ ನ್ಯಾಯಾಂಗದಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಮಮತಾ ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆ: ದೀದಿ ಲೆಕ್ಕಾಚಾರ

ಲೋಕಸಭೆ ಚುನಾವಣೆ: ದೀದಿ ಲೆಕ್ಕಾಚಾರ

2019ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ, ಎಐಎಡಿಎಂಕೆಯನ್ನು ಸೋಲಿಸಲಿದೆ. ಉತ್ತರ ಪ್ರದೇಶದಲ್ಲಿ ಎಸ್‌ಪಿಯ ಅಖಿಲೇಶ್ ಯಾದವ್ ಮತ್ತು ಬಿಎಸ್‌ಪಿಯ ಮಾಯಾವತಿ ಜತೆಯಾಗಿ ಕೆಲಸ ಮಾಡಲಿದ್ದು, ಅವರ ಮೈತ್ರಿಕೂಟ 50-80 ಸೀಟುಗಳನ್ನು ಗೆಲ್ಲಲಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಈಗ 28 ಸೀಟುಗಳನ್ನು ಹೊಂದಿದ್ದು, ಮುಂದಿನ ಚುನಾವಣೆಯಲ್ಲಿ ಎಂಟು ಸೀಟುಗಳನ್ನು ಸಹ ಗೆಲ್ಲುವುದಿಲ್ಲ. ರಾಜಸ್ಥಾನದಲ್ಲಿ 25 ಸೀಟುಗಳನ್ನು ಗೆದ್ದಿದ್ದರು. ಮುಂದೆ ಐದು ಸೀಟನ್ನೂ ಗೆಲ್ಲುವುದಿಲ್ಲ.

ಬಿಹಾರದಲ್ಲಿ ಲಾಲೂಜಿ ಎಲ್ಲ ಸೀಟುಗಳನ್ನೂ ಗೆಲ್ಲಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಜನರು ಅವರಿಗೆ ಬಾಗಿಲಿನ ದಿಕ್ಕು ತೋರಿಸಲಿದ್ದಾರೆ. ಒಡಿಶಾದಲ್ಲಿ ನವೀನ್ ಪಟ್ನಾಯಕ್ ಸೀಟುಗಳನ್ನು ಗೆಲ್ಲುತ್ತಾರೆ. ಪಂಜಾಬ್‌ನಲ್ಲಿ ಅಮರಿಂದರ್ ಸಿಂಗ್ ಅವರನ್ನು ಹೊರಗೆ ದಬ್ಬುತ್ತಾರೆ. ಅವರು ಎಲ್ಲಿಂದ ಸೀಟುಗಳನ್ನು ಪಡೆದುಕೊಳ್ಳುತ್ತಾರೆ? ಎಂದು ಮಮತಾ ಪ್ರಶ್ನಿಸಿದರು.

ಬಿಜೆಪಿಗೆ 100 ಸೀಟು

ಬಿಜೆಪಿಗೆ 100 ಸೀಟು

ಎನ್‌ಡಿಎ ಈಗ 325 ಸೀಟುಗಳನ್ನು ಹೊಂದಿದೆ. 2019ರಲ್ಲಿ ಬಿಜೆಪಿ 100 ಸೀಟುಗಳನ್ನು ಪಡೆದುಕೊಳ್ಳುವುದೂ ಅನುಮಾನ. ಹೆಚ್ಚೆಂದರೆ ಅವರು 150 ಸೀಟುಗಳನ್ನು ಪಡೆದುಕೊಳ್ಳಬಹುದು. ಆದರೆ ಅವರು ಬಹುಮತ ಪಡೆದುಕೊಳ್ಳುವುದು ಸಾಧ್ಯವಿಲ್ಲ. ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ ಎಂದರು.

ಬೃಹತ್ ಸಮಾವೇಶ

ಜನವರಿ 19 ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಾವು ಮೆಗಾ ಸಮಾವೇಶ ನಡೆಸಲಿದ್ದೇವೆ. ಆ ಸಮಾವೇಶವು ಬಿಜೆಪಿಯ ಅಂತ್ಯದ ಆರಂಭಕ್ಕೆ ನಾಂದಿ ಹಾಡಲಿದೆ. ನಾನು ಎಲ್ಲ ರಾಜಕೀಯ ಮುಖಂಡರನ್ನು ಆಹ್ವಾನಿಸುತ್ತೇನೆ.

ಇದು ಸಂಯುಕ್ತ ಒಕ್ಕೂಟದ ಆರಂಭವಾಗಲಿದೆ. ಲೋಕಸಭೆ ಚುನಾವಣೆಗೆ ಬಂಗಾಳ ದಾರಿ ತೋರಿಸಲಿದೆ. ಆದರೆ ನಾವು ಕುರ್ಚಿಗಾಗಿ ಕಿತ್ತಾಡುವುದಿಲ್ಲ. ನಾವು ಅಧಿಕಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ವೇದಿಕೆಯನ್ನೇ ಕಟ್ಟಿಕೊಳ್ಳಲಾರದವರು

ಜುಲೈ 16ರಂದು ಮಿಡ್ನಾಪುರ್‌ದಲ್ಲಿ ನಡೆದ ಸಮಾವೇಶದಲ್ಲಿ ಮೋದಿ ಅವರ ಭಾಷಣದ ವೇಳೆ ಟೆಂಟ್ ಕುಸಿದು 90 ಮಂದಿ ಗಾಯಗೊಂಡ ಘಟನೆಯನ್ನು ಮಮತಾ ಲೇವಡಿ ಮಾಡಿದರು.

ಅವರಿಗೆ ಸಾಮಾನ್ಯವಾದದ್ದೊಂದು ವೇದಿಕೆ ಕಟ್ಟಲೂ ಸಾಧ್ಯವಾಗಿಲ್ಲ. ಇನ್ನು ಅವರು ದೇಶವನ್ನು ಕಟ್ಟುವ ಮಾತನ್ನಾಡುತ್ತಿದ್ದಾರೆ ಎಂದು ಅಣಕಿಸಿದರು.

ಬಿಜೆಪಿ ಪ್ರತಿ ಸಮಾವೇಶ

ಬಿಜೆಪಿ ಪ್ರತಿ ಸಮಾವೇಶ

ಮಮತಾ ಬ್ಯಾನರ್ಜಿ ಅವರ ಭಾಷಣ ಕೆಲವೇ ಗಂಟೆಗಳಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ, ಜನವರಿ 23ರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಸಮಾವೇಶ ನಡೆಸುವುದಾಗಿ ಪ್ರಕಟಿಸಿದ್ದಾರೆ.

ಮುಂದಿನ ವರ್ಷದ ಜನವರಿಯಲ್ಲಿ ರಾಜ್ಯದಾದ್ಯಂತ ರಥಯಾತ್ರೆ ನಡೆಸಲು ಬಿಜೆಪಿ ಉದ್ದೇಶಿಸುತ್ತಿದೆ. ಈ ಎಲ್ಲ ರಥಯಾತ್ರೆಗಳ ಅಂತಿಮ ಸಮಾವೇಶವು ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಜನವರಿ 23ರಂದು ನಡೆಯಲಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಹಿಂಸಾಚಾರದ ಸಂಕೇತ?

ಮತ್ತಷ್ಟು ಹಿಂಸಾಚಾರದ ಸಂಕೇತ?

ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಎಲ್ಲ 42 ಸೀಟುಗಳಲ್ಲಿ ತೃಣಮೂಲ ಕಾಂಗ್ರೆಸ್ ಗೆಲ್ಲಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಮಮತಾ ಬ್ಯಾನರ್ಜಿ ನೀಡಿರುವ ಕರೆಯನ್ನು ಇನ್ನಷ್ಟು ಹಿಂಸಾಚಾರ ನಡೆಸುವುದರ ಸುಳಿವಾಗಿದೆ ಎಂದು ಅಲ್ಲಿನ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ವ್ಯಾಖ್ಯಾನಿಸಿದ್ದಾರೆ.

ಪಂಚಾಯತ್ ಚುನಾವಣೆಗೂ ಮುನ್ನ ಶೇ 100ರಷ್ಟು ಗೆಲುವು ಸಿಗಬೇಕು ಎಂದು ಮಮತಾ ತಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದರು. ಚುನಾವಣೆಗೆ ಸಂಬಂಧಿಸಿದಂತೆ ನಡೆದ ಹಿಂಸಾಚಾರದಲ್ಲಿ ಸುಮಾರು 60 ಜನರು ಕೊಲೆಯಾದರು.

ಬಂಗಾಳದಲ್ಲಿ ಬಿಜೆಪಿ ಏಕೆ ಪ್ರಬಲಗೊಳ್ಳುತ್ತಿದೆ ಎಂಬ ಪ್ರಶ್ನೆಯನ್ನು ಮಮತಾ ಸ್ವತಃ ಕೇಳಿಕೊಳ್ಳಬೇಕು. ಮಮತಾರಿಂದಲೇ ಬಿಜೆಪಿ ಅಲ್ಲಿ ಬಲಗೊಳ್ಳುತ್ತಿದೆ ಎಂದು ಚೌಧರಿ ಆರೋಪಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
West Bengal CM Mamata Banerjee on Monday said that the BJP would never have got votes of AIADMK if Jayalalitha is alive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more