• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಐ ಜರಡಿಯಲ್ಲಿ ವಿಜಯ್ ಮಲ್ಯನ 1.5 ಲಕ್ಷ ಈಮೇಲ್

By Sachhidananda Acharya
|
Google Oneindia Kannada News

ಬೆಂಗಳೂರು, ಜನವರಿ 30: ಮದ್ಯದ ದೊರೆ ವಿಜಯ್ ಮಲ್ಯ ಮೇಲೆ ಚಾರ್ಚ್ ಸಲ್ಲಿಕೆ ಮಾಡಿರುವ ಸಿಬಿಐ ಈಗ ಮಲ್ಯರಿಗೆ ಸೇರಿದ 1.5 ಲಕ್ಷ ಈಮೇಲ್ ಗಳನ್ನು ಜಾಲಾಡುತ್ತಿದೆ. ಮೂಲಗಳ ಪ್ರಕಾರ ತನಿಖೆಗೆಯಲ್ಲಿ ಈ ಈಮೇಲ್ ಗಳನ್ನು ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ.

ತನಿಖಾ ಸಂಸ್ಥೆ ದುರ್ಬೀನು ಹಾಕಿಕೊಂಡು ಈ ಮೇಲ್ ಗಳನ್ನು ಜಾಲಾಡುತ್ತಿದ್ದು 6900 ಕೋಟಿ ಸಾಲ ಕೊಡಲು ಯಾರಾದರೂ ಸಹಾಯ ಮಾಡಿದ್ದರಾ ಎಂದು ಹುಡುಕಾಡುತ್ತಿದೆ. ರಾಜಕಾರಣಿಗಳು, ಕಂಪೆನಿಯ ಸಿಬ್ಬಂದಿಗಳು ಮತ್ತು ಬ್ಯಾಂಕು ಅಧಿಕಾರಿಗಳಿಗೆ ಕಳುಹಿಸಲಾದ ಮೇಲ್ಗಳು ಇದರಲ್ಲಿವೆ. ಹೀಗಾಗಿ ಪ್ರಮುಖ ಸಾಕ್ಷಿಗಳು ಸಿಗಬಹುದು ಎಂದುಕೊಳ್ಳಲಾಗಿದೆ.[ಕರ್ನಾಟಕ ಹೈಕೋರ್ಟಿನಿಂದ ವಿಜಯ್ ಮಲ್ಯಗೆ ವಾರಂಟ್]

ಸಿಬಿಐ ಮೂಲಗಳ ಪ್ರಕಾರ, ಒಂದೊಮ್ಮೆ ಮಲ್ಯರಿಗೆ ಯಾರಾದರೂ ಸಹಾಯ ಮಾಡಿದ್ದು ಮೇಲ್ ಗಳಿಂದ ತಿಲಿದು ಬಂದರೆ ಸಿಬಿಐ ಹೆಚ್ಚುವರಿ ಚಾರ್ಜ್ ಶೀಟನ್ನು ಸಲ್ಲಿಸಲಿದೆ.[ಸಿಬಿಐನಿಂದ ಮಲ್ಯ ಸಂಸ್ಥೆಯ ನಾಲ್ವರು ಅಧಿಕಾರಿಗಳ ಬಂಧನ]

ಕಳೆದ ವಾರ ಸಿಬಿಐ ಮೊದಲ ಜಾರ್ಜ್ ಶೀಟ್ ಸಲ್ಲಿಸಿತ್ತು. ಇದರಲ್ಲಿ ಐಡಿಬಿಐ ಬ್ಯಾಂಕಿನಿಂದ ಮಲ್ಯರಿಗೆ ಸಾಲ ಮಂಜೂರು ಮಾಡಲು ಬ್ಯಾಂಕ್ ಅಧಿಕಾರಿಗಳೇ ಕೈಜೋಡಿಸಿದ್ದಾರೆ ಎಂದು ಹೇಳಲಾಗಿದೆ. ಏರ್ ಲೈನಿಗೆ ನೆಗೆಟಿವ್ ರೇಟಿಂಗ್ ಇದ್ದಾಗಲೂ ಸುಮಾರು 900 ಕೋಟಿ ಸಾಲವನ್ನು ಮಲ್ಯ ಐಡಿಬಿಐ ಬ್ಯಾಂಕಿನಿಂದ ಪಡೆದಿದ್ದು. ಇದಕ್ಕೆ ಬ್ಯಾಂಕ್ ಅಧಿಕಾರಿಗಳೇ ಕಾರಣ ಎನ್ನುವ ತೀರ್ಮಾನಕ್ಕೆ ಬಂದಿರುವ ಸಿಬಿಐ ಕೆಲವು ಬ್ಯಾಂಕ್ ಅಧಿಕಾರಿಗಳನ್ನೇ ಆರೋಪಿಗಳಾಗಿ ಹೆಸರಿಸಿದೆ. ಮಲ್ಯ 2006 ರಿಂದ 2009ರ ಮಧ್ಯದಲ್ಲಿ ಹೆಚ್ಚಿನ ಸಾಲಗಳನ್ನು ಪಡೆದುಕೊಂಡಿದ್ದರು.

English summary
The Central Bureau of Investigation which had filed a charge sheet against liquor baron Vijay Mallya is now scanning his 1.5 lakh emails.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X