ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ ಓಲೈಕೆಯ ಪರಮಾವಧಿ: ಯಾಕೂಬ್ ಪತ್ನಿಗೆ ಎಂಪಿ ಟಿಕೆಟ್?

|
Google Oneindia Kannada News

ಮುಂಬೈ, ಆಗಸ್ಟ್ 1: ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಮೆಮನ್ ಅಂತ್ಯಸಂಸ್ಕಾರದ ವೇಳೆ, ಆತನನ್ನು ಮುಂಬೈನ ಕೆಲ ಮತಾಂಧರು ಹುತಾತ್ಮನ ರೀತಿಯಲ್ಲಿ ಬೀಳ್ಕೊಟ್ಟ ದುರಂತ ನಮ್ಮ ಮುಂದಿದೆ.

ಈಗ ಮತಬ್ಯಾಂಕ್ ಓಲೈಕೆಯ ಪರಮಾವಧಿ ಎನ್ನುವಂತೆ ಯಾಕೂಬ್ ಮೆಮನ್ ಪತ್ನಿಗೆ ರಾಜ್ಯಸಭೆಯಲ್ಲಿ ಸ್ಥಾನ ನೀಡುವಂತೆ ಸಮಾಜವಾದಿ ಪಕ್ಷದ ಮುಖಂಡರೊಬ್ಬರು ಒತ್ತಾಯಿಸಿದ್ದಾರೆ.

ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಫಾರೂಕ್ ಘೋಷಿ, ಮೆಮನ್ ಪತ್ನಿ ರಹೀನ್ ಅವರಿಗೆ ಪಕ್ಷದ ಟಿಕೆಟಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಬೇಕೆಂದು ಮುಲಾಯಂ ಸಿಂಗ್ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ.

ಮಾಡದಿದ್ದ ತಪ್ಪಿಗಾಗಿ ಯಾಕೂಬ್ ಮೆಮನ್ ಅವನಿಗೆ ಗಲ್ಲು ಶಿಕ್ಷೆಯಾಗಿದ್ದು, ಇದರಿಂದ ಮೆಮನ್ ಪತ್ನಿಗೆ ಅನ್ಯಾಯವಾಗಿದೆ. ಮೆಮನ್ ಪತ್ನಿಯೂ ಈ ಹಿಂದೆಯೂ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ.

ಟೈಗರ್ ಮೆಮನ್ ಸಹೋದರ ಎನ್ನುವ ಕಾರಣಕ್ಕಾಗಿ ಯಾಕೂಬ್ ಗೆ ಶಿಕ್ಷೆಯಾಗಿದೆ. ಮೆಮನ್ ಪತ್ನಿಗೆ ರಾಜ್ಯಸಭೆ ಸದಸ್ಯತ್ವ ನೀಡಬೇಕೆಂದು ಎಸ್ಪಿ ಮುಖಂಡ ಪತ್ರ ಮುಖೇನ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ ಫಾರೂಕ್ ಹೇಳಿಕೆಗೆ ಎಸ್ಪಿ ಹೆಚ್ಚಿನ ಪ್ರತಿಕ್ರಿಯೆ ನೀಡದೇ ಅಂತರ ಕಾಯ್ದುಕೊಂಡಿದ್ದು, ಫಾರೂಕ್ ಹೇಳಿಕೆ ತಪ್ಪು ಎಂದು ಹೇಳಿ ನುಣುಚಿಕೊಂಡಿದೆ.

ಇದೀಗ ಬಂದ ವರದಿಯ ಪ್ರಕಾರ ಸಮಾಜವಾದಿ ಪಕ್ಷ, ವಿವಾದಕಾರಿ ಪತ್ರ ಬರೆದಿದ್ದ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಫಾರೂಕ್ ಘೋಷಿ ಅವರನ್ನು ಆ ಸ್ಥಾನದಿಂದ ವಜಾಗೊಳಿಸಿದೆ.

ಕಾಂಗ್ರೆಸ್ ಮುಖಂಡರೂ ಏನೂ ಕಮ್ಮಿಯಿಲ್ಲ..

ಕಾಂಗ್ರೆಸ್ ಮುಖಂಡರು

ಕಾಂಗ್ರೆಸ್ ಮುಖಂಡರು

1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್‌ ಮೆಮನ್‌ ನೇಣು ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ್ ಸಿಂಗ್ ಹಾಗೂ ಶಶಿ ತರೂರ್‌ ನೀಡಿರುವ ಹೇಳಿಕೆ ಹೊಸ ವಿವಾದವನ್ನು ಹುಟ್ಟು ಹಾಕಿತ್ತು.

ಶಶಿ ತರೂರ್

ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾಗಿರುವುದು ಎಲ್ಲರ ಧರ್ಮ. ಆದರೆ, ಮರಣದಂಡನೆ ಶಿಕ್ಷೆ ಎಲ್ಲಿಯೂ ಭಯೋತ್ಪಾದನೆಯನ್ನು ತಡೆದಿಲ್ಲ ಎಂದು ಶಸಿ ತರೂರ್ ಅಭಿಪ್ರಾಯ ಪಟ್ಟಿದ್ದಾರೆ.

ದಿಗ್ವಿಜಯ್ ಸಿಂಗ್

ಉಗ್ರ ಕೃತ್ಯದ ಅಪರಾಧಿಯೊಬ್ಬನನ್ನು ಶಿಕ್ಷಿಸುವಲ್ಲಿ ಸರ್ಕಾರ ಹಾಗೂ ನ್ಯಾಯಾಂಗ 'ಮಾದರಿ' ಎನಿಸುವಷ್ಟು ತುರ್ತು ಹಾಗೂ ಬದ್ಧತೆಯನ್ನು ತೋರಿದೆ. ಯಾವುದರ ಹಂಗಿಲ್ಲದೇ ಉಗ್ರ ಕೃತ್ಯದಾ ಎಲ್ಲಾ ಪ್ರಕರಣಗಳಲ್ಲಿ ಸರ್ಕಾರ ಹಾಗೂ ನ್ಯಾಯಾಂಗ ಇದೇ ರೀತಿಯ ಬದ್ಧತೆ ತೋರಲಿದೆ ಎನ್ನುವ ಭರವಸೆ ನನ್ನದು ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದರು.

ತ್ರಿಪುರ ರಾಜ್ಯಪಾಲ

ಯಾಕೂಬ್ ಮೆಮನ್ ಅಂತ್ಯಕ್ರಿಯೆಯಲ್ಲಿ ಹಾಜರಾಗಿದ್ದವರು 'ಸಂಭಾವ್ಯ ಭಯೋತ್ಪಾದಕರು'ಎಂದು ತ್ರಿಪುರ ರಾಜ್ಯಪಾಲ ತಥಾಗತ ರಾಯ್ ಟ್ವೀಟ್ ಮಾಡಿ ಬೇಸರ ವ್ಯಕ್ತ ಪಡಿಸಿದ್ದರು.

ಕೆಂಡಕಾರಿದ ಬಿಜೆಪಿ

ಕೆಂಡಕಾರಿದ ಬಿಜೆಪಿ

ಯಾಕೂಬ್ ಮೆಮನ್ ಗಲ್ಲು ಶಿಕ್ಷೆಯ ಬಗ್ಗೆ ಕಾಂಗ್ರೆಸ್‌ ನಾಯಕರು ನೀಡುತ್ತಿರುವ ಹೇಳಿಕೆ ವಿರುದ್ದ ಬಿಜೆಪಿ ಕಿಡಿಕಾರಿದೆ. ಇದೊಂದು 'ಬೇಜವಾಬ್ದಾರಿಯುತ' ಹೇಳಿಕೆ. ಈ ಸಂಬಂಧ ಸೋನಿಯಾ ಗಾಂಧಿ ದೇಶದ ಎದುರು ಸ್ಪಷ್ಟನೆ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

English summary
Making a desperate attempt to capitalize on a sentiment, a leader of the Samajwadi Party has written to Mulayam Singh Yadav asking him to nominate Yakub Memon's widow to the Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X