ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಕ್ಇನ್ ಇಂಡಿಯಾ: ಉತ್ಪಾದನೆ ಆರಂಭಿಸಿದ ತೈವಾನ್ ಕಂಪನಿ

|
Google Oneindia Kannada News

ನವದೆಹಲಿ, ಜು. 16: ಮೇಕ್ ಇನ್ ಇಂಡಿಯಾ ಅಭಿಯಾನದ ಆರಂಭಿಕ ಹೆಜ್ಜೆ ಭಾರತದಲ್ಲಿ ತೆರೆದುಕೊಂಡಿದೆ. ತೈವಾನ್ ಮೂಲದ ಕಂಪನಿಯೊಂದು ಆಂಧ್ರ ಪ್ರದೇಶದಲ್ಲಿ ಘಟಕವೊಂದನ್ನು ನಿರ್ಮಾಣ ಮಾಡಿ ಚೀನಾ, ಅಮೆರಿಕ ಮೂಲದ ಮೊಬೈಲ್ ಉತ್ಪಾದನೆ ಮಾಡತೊಡಗಿದೆ.

ಪೋಸ್ಕೋನ್ ಟೆಕ್ನಾಲಜಿ ಗ್ರೂಪ್ ಚೀನಾ ಮೂಲದ ಕಂಪನಿ ಜಿಯೋಮಿ ಮೊಬೈಲ್ ಮತ್ತು ಅಮೆರಿಕ ಮೂಲದ ಇನ್ ಫೋಕಸ್ ತಯಾರಿಕೆ ಮತ್ತು ಸಾಗಾಟವನ್ನು ಆರಂಭ ಮಾಡಿದೆ.[ಅಂಬಾನಿ ಬ್ರದರ್ಸ್ ಕೈಕುಲುಕಿಸಿದ ಡಿಜಿಟಲ್ ಇಂಡಿಯಾ!]

india

ಆಂಧ್ರದ ಶ್ರೀ ಸಿಟಿಯ ಏಳು ನೂರು ಏಕರೆ ಜಾಗದಲ್ಲಿ ಘಟಕ ನಿರ್ಮಾಣವಾಗಿದ್ದು ಇಲ್ಲಿಯೇ ಉತ್ಪಾದನೆ ನಡೆಯುತ್ತಿದೆ ಎಂದು ಪೋಸ್ಕೋನ್ ಅಧ್ಯಕ್ಷ ವಿನ್ಸೆಂಟ್ ಥೊಂಗ್ ತಿಳಿಸಿದ್ದಾರೆ.

ಚೀನಾದಲ್ಲಿ ತಯಾರಾಗುವ ಮೊಬೈಲ್ ನಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ಇಲ್ಲಿ ತಯಾರು ಮಾಡುವ ಮೊಬೈಲ್ ನಲ್ಲೂ ಅಳವಡಿಕೆ ಮಾಡಲಾಗುವುದು. ಭಾರತೀಯರಿಗೆ ಮತ್ತೂ ಕಡಿಮೆ ಬೆಲೆಯಲ್ಲಿ ಮೊಬೈಲ್ ಲಭ್ಯವಾಗುತ್ತದೆ ಎಂದು ಹೇಳಿದರು.[ 'ಮೇಕ್ ಇನ್ ಇಂಡಿಯಾ' ಎಂದರೇನು?]

ಈ ಬಗ್ಗೆ ಮಾತನಾಡಿದ ಜಿಯೋಮಿ ಮೊಬೈಲ್ ಕಂಪನಿಯ ಭಾರತದ ಮುಖ್ಯಸ್ಥ ಮನು ಜೈನ್, ಕಂಪನಿ ಉತ್ಪಾದನೆಗೆ ಸಂಬಂಧಿತ ಎಲ್ಲ ವಿಷಯದಲ್ಲಿ ಇನ್ನು ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಸ್ನ್ಯಾಪ್ ಡೀಲ್ ನೊಂದಿಗೂ ಹೊಂದಾಣಿಕೆ ಮಾತುಕತೆ ನಡೆದಿದೆ ಎಂದು ತಿಳಿಸಿದ್ದಾರೆ.

ಐ ಫೋನ್ ಮತ್ತು ಐ ಪ್ಯಾಡ್ ತಯಾರು ಮಾಡಿ ಹೆಸರು ಪಡೆದುಕೊಂಡಿರುವ ಪೋಸ್ಕೋನ್ ಘಟಕದ ಕೆಲಸ ಆರಂಭ ಮಾಡಿದ್ದು ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುವುದರೊಂದಿಗೆ ಭಾರತದ ಸಂಪನ್ಮೂಲಗಳ ಸಂಪೂರ್ಣ ಉಪಯೋಗವಾದಂತೆ ಆಗುತ್ತದೆ ಎಂದು ಹೇಳಲಾಗಿದೆ. 2020 ರ ವೇಳೆಗೆ ಭಾರತದಲ್ಲಿ 10-12 ಉತ್ಪಾದಕ ಘಟಕ ಹೊಂದುವ ಗುರಿ ಹೊಂದಿದ್ದೇವೆ ಎಂದು ಕಂಪನಿ ಅಧ್ಯಕ್ಷ ಟೆರ್ರಿ ಗೂ ತಿಳಿಸಿದ್ದಾರೆ.

English summary
We are all know Prime Minister Narendra Modi ' Make in India' campaign got good support from other nations. Now, A Taiwan origin company Foxconn Technology Group has started making and shipping smartphones for China's Xiaomi and US phone brand InFocus at its new plant in Andhra Pradesh, taking a step forward towards making India its next manufacturing hub.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X