ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BJP ಎಂದರೆ 'ಬೀಜಿಂಗ್ ಜನತಾ ಪಾರ್ಟಿ': ಇದೇನು ಹೊಸ ವ್ಯಾಖ್ಯಾನ?

|
Google Oneindia Kannada News

ನವದೆಹಲಿ, ಫೆಬ್ರವರಿ 4: ಚೀನಾ ಜೊತೆಗಿನ ಭಾರತದ ಸಂಬಂಧ ನಿರ್ವಹಣೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದೆ. ಮೇಕ್ ಇನ್ ಇಂಡಿಯಾ ಎನ್ನುವುದು ಈಗ ಬೈ ಫ್ರಾಮ್ ಚೀನಾ ಆಗಿ ಪರಿವರ್ತನೆ ಆಗುತ್ತಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಉಲ್ಲೇಖಿಸಿದರು. ಬಿಜೆಪಿ ಎನ್ನುವುದು ಭಾರತೀಯ ಜನತಾ ಪಕ್ಷದ ಬದಲಿಗೆ "ಬೀಜಿಂಗ್ ಜನತಾ ಪಾರ್ಟಿ" ಆಗಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಬಣ್ಣಿಸಿದ್ದಾರೆ.

ಬುಧವಾರ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಭಾಷಣದ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಮೋದಿ ಸರ್ಕಾರವು ಅಸಂಘಟಿತ ವಲಯ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಎಂಎಸ್‌ಎಂಇಗಳನ್ನು ನಾಶಪಡಿಸಿದೆ ಎಂದು ಆರೋಪಿಸಿದ್ದರು.

ಭಾರತದಲ್ಲಿ ಸಾಮ್ರಾಜ್ಯಶಾಹಿ ಆಳ್ವಿಕೆ ನಡೆಯಲ್ಲ: ರಾಹುಲ್ ಗಾಂಧಿ ಭಾಷಣದ ಪ್ರಮುಖ ಅಂಶಗಳೇನು?ಭಾರತದಲ್ಲಿ ಸಾಮ್ರಾಜ್ಯಶಾಹಿ ಆಳ್ವಿಕೆ ನಡೆಯಲ್ಲ: ರಾಹುಲ್ ಗಾಂಧಿ ಭಾಷಣದ ಪ್ರಮುಖ ಅಂಶಗಳೇನು?

"ಭಾರತಕ್ಕೆ ಜುಮ್ಲಾ (ಮಾತಿನ ಪದಗುಚ್ಛ), ಚೀನಾಗೆ ಉದ್ಯೋಗ. ಮೋದಿ ಸರ್ಕಾರವು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಅಸಂಘಟಿತ ವಲಯ ಮತ್ತು ಎಂಎಸ್‌ಎಂಇಗಳನ್ನು ನಾಶಪಡಿಸಿದೆ. ಇದರಿಂದಾಗಿ 'ಮೇಕ್ ಇನ್ ಇಂಡಿಯಾ' ಈಗ 'ಬೈ ಫ್ರಾಮ್ ಚೀನಾ (ಚೀನಾದಿಂದ ಖರೀದಿಸಿ)' ಎನ್ನುವ ಹಾಗೆ ಬದಲಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Make In India is Turned as Buy from China; Congress describing BJP as Beijing Janata Party

ಲೋಕಸಭೆಯಲ್ಲಿ ಗುರುವಾರ ತಾವು ಮಾಡಿದ ಭಾಷಣದ ವಿಡಿಯೋವನ್ನೂ ತಮ್ಮ ಟ್ವೀಟ್ ಜೊತೆ ಹಂಚಿಕೊಂಡಿದ್ದಾರೆ.

ಅತಿಹೆಚ್ಚು ಆಮದು ಮಾಡಿಕೊಂಡಿರುವ ದಾಖಲೆ

ಅತಿಹೆಚ್ಚು ಆಮದು ಮಾಡಿಕೊಂಡಿರುವ ದಾಖಲೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾದ ಭರವಸೆ ನೀಡಿದ್ದರು, ಆದರೆ ಆಗಿದ್ದೇ ಬೇರೆ. ದೇಶದಲ್ಲಿ ಈಗ ಮೇಕ್ ಇನ್ ಇಂಡಿಯಾ ಹೋಗಿ ಬೈ ಫ್ರಾಮ್ ಚೀನಾ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 2021ರಲ್ಲಿ ಅತಿಹೆಚ್ಚು ಸರಕುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ. ಶೇ.46ರಷ್ಟು ಆಮದು ಮಾಡಿಕೊಂಡಿರುವುದು ಇದುವರೆಗಿನ ಹೊಸ ದಾಖಲೆ ಆಗಿದೆ. ದೇಶದಲ್ಲಿ ನಿರುದ್ಯೋಗವು ಈವರೆಗಿನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಚೀನಾವು ಭಾರತದ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದ್ದರೆ, ಮೋದಿ ಸರ್ಕಾರವು ಚೀನಾದ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ದೇಶದ ಭೂಮಿ ಜೊತೆಗೆ ಆರ್ಥಿಕತೆಯೂ ಚೀನಾದ ಪಾಲು

ದೇಶದ ಭೂಮಿ ಜೊತೆಗೆ ಆರ್ಥಿಕತೆಯೂ ಚೀನಾದ ಪಾಲು

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾಷಣದ ಟ್ವೀಟ್ ಅನ್ನು ಶೇರ್ ಮಾಡಿರುವ ಹಿರಿಯ ಸಂಸದ ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರ ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷದ ವಿರುದ್ಧ ಹರಿ ಹಾಯ್ದಿದ್ದಾರೆ. ಬಿಜೆಪಿ ಎನ್ನುವುದು ಬೀಜಿಂಗ್ ಜನತಾ ಪಾರ್ಟಿ ಆಗಿದೆ. ಈ ಬೀಜಿಂಗ್ ಜನತಾ ಪಾರ್ಟಿಯು ನಮ್ಮ ಭೂಮಿಯನ್ನಷ್ಟೇ ಚೀನಾ ಪಾಲಿಗೆ ಒಪ್ಪಿಸದೇ ದೇಶದ ಆರ್ಥಿಕತೆಯನ್ನೂ ಚೀನಾ ವಶಕ್ಕೆ ನೀಡುತ್ತಿದೆ," ಎಂದು ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದ್ದಾರೆ.

ದೇಶದಲ್ಲಿ ಬಡವರ ಮನೆ ಮೇಲೆ ಬುಲ್ಡೋಜರ್

ದೇಶದಲ್ಲಿ ಬಡವರ ಮನೆ ಮೇಲೆ ಬುಲ್ಡೋಜರ್

ಭಾರತದಲ್ಲಿ ಒಂದು ಕಡೆ ಬಡವರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಲಾಗುತ್ತಿದೆ. ಇನ್ನೊಂದು ಕಡೆ ಭಾರತದ ಪ್ರದೇಶದಲ್ಲಿ ಚೀನೀಯರು ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ. ಇದು ಯಾವ ರೀತಿಯ ರಾಷ್ಟ್ರೀಯವಾದ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.

Recommended Video

ಅಧಿಕ ಮೊತ್ತಕ್ಕೆ ಸೇಲ್ ಆಗೋ ವಿಕೆಟ್ ಕೀಪರ್ ಯಾರು? | Oneindia Kannada
ಚೀನಾ-ಪಾಕ್ ಒಂದುಗೂಡಿಸಿದ್ದೇ ಕೇಂದ್ರ ಸರ್ಕಾರ

ಚೀನಾ-ಪಾಕ್ ಒಂದುಗೂಡಿಸಿದ್ದೇ ಕೇಂದ್ರ ಸರ್ಕಾರ

ನನ್ನ ದೇಶವು ಎಲ್ಲಿ ನಿಂತಿದೆ ಎಂಬುದರ ಬಗ್ಗೆ ನನಗೆ ತುಂಬಾ ಚಿಂತೆಯಾಗಿದೆ. ನೀವು ಈ ರಾಷ್ಟ್ರ ಮತ್ತು ಜನರನ್ನು ದೊಡ್ಡ ಅಪಾಯಕ್ಕೆ ಸಿಲುಕಿಸುತ್ತಿದ್ದೀರಿ. ನಿಮ್ಮ ಸರ್ಕಾರದಿಂದ ಚೀನಾ ಮತ್ತು ಪಾಕಿಸ್ತಾನವು ಒಂದಾಗುವಂತೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಕಾರ್ಯತಂತ್ರಗಳ ಹೆಸರಿನಲ್ಲಿ ದೊಡ್ಡ ತಪ್ಪುಗಳನ್ನು ಮಾಡಿದ್ದೀರಿ. ಇದರಿಂದ ಭಾರತದ ವಿರುದ್ಧ ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳು ಒಂದಾಗಿ ಕೆಲಸ ಮಾಡುವಂತಾ ಪರಿಸ್ಥಿತಿಯನ್ನು ಸೃಷ್ಟಿಸಿದ್ದೀರಿ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

English summary
'Make In India' is Turned as 'Buy from China'; Congress Leader Mallikarjun Kharge describing BJP as "Beijing Janata Party".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X