ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾಂತಿ ವಿಶೇಷ: ಇದು ಕಿಚಡಿ ಬರೆದ ಗಿನ್ನಿಸ್ ದಾಖಲೆ ಸರ್ಕಾರ!

|
Google Oneindia Kannada News

ಶಿಮ್ಲಾ, ಜನವರಿ.14: ಸಂಕ್ರಾಂತಿ ಹಬ್ಬದ ಹಿನ್ನೆಲೆ ಕಿಚಡಿ ತಯಾರಿಸಿದ ಹಿಮಾಚಲ ಪ್ರದೇಶ ಸರ್ಕಾರ ಗಿನ್ನಿಸ್ ದಾಖಲೆ ಬರೆದಿದೆ. ಒಂದೇ ದಿನ ಒಂದೇ ಪಾತ್ರೆಯಲ್ಲಿ ಬರೋಬ್ಬರಿ 1,995 ಕೆಜಿ ಕಿಚಡಿಯನ್ನು ತಯಾರಿಸಿ ಹಂಚಿದ್ದು ಹೊಸ ಇತಿಹಾಸ ಸೃಷ್ಟಿಸಿದೆ.

ಹಿಮಾಚಲ ಪ್ರದೇಶ ಪ್ರವಾಸಿ ಅಭಿವೃದ್ಧಿ ನಿಗಮವು ಗಿನ್ನಿಸ್ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ತಟ್ಟಪಾಣಿ ಎಂಬಲ್ಲಿ ಜಿಲ್ಲಾ ಮಟ್ಟದ ಪ್ರವಾಸಿ ಹಬ್ಬವನ್ನು ಆಯೋಜನೆ ಮಾಡಲಾಗಿತ್ತು.

ವಿತ್ತ ಸಚಿವರಾಗಿ ಅರುಣ್ ಜೇಟ್ಲಿ ಗಿನ್ನಿಸ್ ದಾಖಲೆ, ಟಾಪ್ 5 ಸಾಧನೆಗಳು ವಿತ್ತ ಸಚಿವರಾಗಿ ಅರುಣ್ ಜೇಟ್ಲಿ ಗಿನ್ನಿಸ್ ದಾಖಲೆ, ಟಾಪ್ 5 ಸಾಧನೆಗಳು

ನಾಲ್ಕು ಅಡಿ ಎತ್ತರ ಒಂದೇ ಒಂದು ಪಾತ್ರೆಯಲ್ಲಿ ಬರೋಬ್ಬರಿ 1995 ಕೆಜಿ ತೂಕದ ಕಿಚಡಿಯನ್ನು ಸಿದ್ಧುಪಡಿಸಿದ್ದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಈ ಹಿಂದೆ ಒಂದೇ ಪಾತ್ರೆಯಲ್ಲಿ 918.8 ಕೆಜಿ ಕಿಚಡಿ ತಯಾರಿಸಿದ್ದೇ ದಾಖಲೆಯಾಗಿತ್ತು.

ಮುಖ್ಯಮಂತ್ರಿ ಎದುರಿನಲ್ಲೇ ಪ್ರಮಾಣಪತ್ರ ವಿತರಣೆ

ಮುಖ್ಯಮಂತ್ರಿ ಎದುರಿನಲ್ಲೇ ಪ್ರಮಾಣಪತ್ರ ವಿತರಣೆ

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಎದುರಿನಲ್ಲಿ ಅಧಿಕೃತವಾಗಿ ಗಿನ್ನಿಸ್ ದಾಖಲೆ ಬಗ್ಗೆ ಘೋಷಣೆ ಮಾಡಲಾಯಿತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ತಯಾರಿಸಿದ 1,995 ಕಿಚಡಿ ತಯಾರಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯ ಪ್ರತಿನಿಧಿ ರಿಶಿ ನಾಥ್ ಪ್ರಮಾಣಪತ್ರವನ್ನು ನೀಡಿದರು.

1995 ಕೆಜಿ ಕಿಚಡಿ ತಯಾರಿಕೆಗೆ ಐದೇ ಗಂಟೆ

1995 ಕೆಜಿ ಕಿಚಡಿ ತಯಾರಿಕೆಗೆ ಐದೇ ಗಂಟೆ

ಹಿಮಾಚಲ ಪ್ರದೇಶದ ತಟ್ಟಪಾಣಿ ಎಂಬಲ್ಲಿ ಜಿಲ್ಲಾ ಮಟ್ಟದ ಪ್ರವಾಸಿ ಹಬ್ಬವನ್ನು ಆಯೋಜಿಸಲಾಗಿತ್ತು. ಈ ವೇಳೆ 25 ಮಂದಿ ಬಾಣಸಿಗರು ಸೇರಿಕೊಂಡು ಕೇವಲ ಐದೇ ಐದು ಗಂಟೆಗಳಲ್ಲಿ ಬರೋಬ್ಬರಿ 1,995 ಕೆಜಿ ಕಿಚಡಿಯನ್ನು ಸಿದ್ಧಪಡಿಸಲಾಯಿತು.

ಕಿಚಡಿಗೆ ಬಳಸಿದ ಸಾಮಗ್ರಿಗಳು ಯಾವುವು?

ಕಿಚಡಿಗೆ ಬಳಸಿದ ಸಾಮಗ್ರಿಗಳು ಯಾವುವು?

ಇನ್ನು, 405 ಕೆಜಿ ಅಕ್ಕಿ, 190 ಕೆಜಿ ಬೇಳೆ, 90 ಕೆಜಿ ತುಪ್ಪ, 55 ಕೆಜಿ ಮಸಾಲೆ ಸಾಮಗ್ರಿಗಳು ಹಾಗೂ ಬರೋಬ್ಬರಿ 1,100 ಲೀಟರ್ ನೀರನ್ನು ಬಳಸಿಕೊಂಡು ಕಿಚಡಿಯನ್ನು ತಯಾರಿ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಸಂಕ್ರಾಂತಿ ಪ್ರಮುಖ ಆಕರ್ಷಣೆಯೇ ತಟ್ಟಪಾಣಿ ಕಿಚಡಿ

ಸಂಕ್ರಾಂತಿ ಪ್ರಮುಖ ಆಕರ್ಷಣೆಯೇ ತಟ್ಟಪಾಣಿ ಕಿಚಡಿ

ಹಿಮಾಚಲ ಪ್ರದೇಶದಲ್ಲಿ ತಟ್ಟಪಾಣಿಯ ಕಿಚಡಿಗೆ ಹೆಚ್ಚಿನ ಬೇಡಿಕೆಯಿದೆ. ಅದರಲ್ಲೂ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಈ ಜಿಲ್ಲೆಯಲ್ಲಿ ತಯಾರಿಸುವ ಕಿಚಡಿಯೇ ಪ್ರಮುಖ ಆಕರ್ಷಣೆ ಆಗಿದೆ ಎಂದು ಹೇಳಲಾಗುತ್ತಿದೆ.

English summary
Makara Sankranti Special: 1995 KG Kichadi Creates A Guinness Book of World Records.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X