ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಸ್ವಾತಂತ್ರ್ಯೋತ್ಸವದ ಮೇಲೆ ಉಗ್ರರ ಕರಿನೆರಳು

|
Google Oneindia Kannada News

ನವದೆಹಲಿ, ಆ. 05: ರಾಜಧಾನಿ ದೆಹಲಿಗೆ ಉಗ್ರರ ಕರಿನೆರಳು ಚಾಚಿದ್ದು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವಕ್ಕೆ ಉಗ್ರರು ದುಷ್ಕೃತ್ಯ ಎಸಗಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ.

ಒಂಭತ್ತು ಜನ ಉಗ್ರರು ದೆಹಲಿಯ ಒಳಕ್ಕೆ ನುಸುಳಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಒಳನುಸುಳಿರುವ ಉಗ್ರರು ತಮ್ಮೊಂದಿಗೆ ಸ್ಫೋಟಕ ಸಾಮಗ್ರಿಗಳನ್ನು ಹೊತ್ತು ತಂದಿದ್ದಾರೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರ ಸಹ ಭದ್ರತೆಯ ಬಗ್ಗೆ ಒತ್ತು ನೀಡಿದ್ದು ಸುರಕ್ಷತಾ ಕ್ಷಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.[ಕಾಶ್ಮೀರದಲ್ಲಿ ಉಗ್ರರ ದಾಳಿ, ಜೀವಂತವಾಗಿ ಸೆರೆ ಸಿಕ್ಕ ಉಗ್ರ]

Major terror attack: High alert sounded, terrorists enter Delhi

ಸೇನೆಯ ನೇತೃತ್ವದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇನ್ನು ಹೆಚ್ಚಿನ ಸಿಬ್ಬಂದಿ ಅಥವಾ ಸಲಕರಣೆಗಳ ಅಗತ್ಯವಿದ್ದರೆ ಅದನ್ನು ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಆಗಸ್ಟ್ 5 ರ ಮುಂಜಾನೆ ಗಡಿಯಲ್ಲಿ ಪಾಕಿಸ್ತಾನದ ಉಗ್ರರು ಸೇನಾ ಪಡೆಗಳ ಮೇಲೆ ದಾಳಿ ಮಾಡಿದ್ದು ಮತ್ತಷ್ಟು ಮುಂಜಾಗೃತೆ ತೆಗೆದುಕೊಳ್ಳಲು ಕಾರಣವಾಗಿದೆ. ಲಷ್ಕರ್ ಇ ತೊಯ್ಬಾ, ಹಿಜ್ ಬುಲ್ ಮುಜಾಹಿದ್ದೀನ್ ಸಂಘಟನೆಗಳು ಪಾಕಿಸ್ತಾನದ ಸೈನ್ಯ ಮತ್ತು ಐಎಸ್ಐ ನೆರವಿನಲ್ಲೇ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ತಯಾರಿ ನಡೆಸಿವೆ ಎಂದು ಗುಪ್ತವರ ದಳ ತಿಳಿಸಿದೆ.[ಐಎಸ್ಐಎಸ್ ಸೇರಿದ ಕೇರಳದ ಪತ್ರಕರ್ತ?]

ಮೂರು ತಿಂಗಳ ಹಿಂದೆ ರಾಜಧಾನಿಗೆ ಉಗ್ರರ ಉಪಟಳದ ಆತಂಕ ಎದುರಾಗಿತ್ತು. ಸೇನಾ ಪಡೆ ಮತ್ತು ಗುಪ್ತಚರದಳ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದವು.(ಒನ್ ಇಂಡಿಯಾ ನ್ಯೂಸ್)

English summary
Security has been beefed up across Delhi following a major terror threat alert ahead of Independence Day on Aug 15. It has been reported that nine terrorists were suspected to have entered the national capital. According to inputs from Intelligence Bureau (IB), terrorists entered the city and they have brought a huge cache of explosives, including RDX and detonators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X