ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಣ್ಣೆ ಅಂಗಡಿ ಮುಂದೆ ಕ್ಯೂ ಯಾಕೆ; ಇನ್ಮುಂದೆ ಮನೆ ಬಾಗಿಲಿಗೆ ಮದ್ಯ!

|
Google Oneindia Kannada News

ನವದೆಹಲಿ, ಮೇ.08: ಭಾರತ ಲಾಕ್ ಡೌನ್ ನಡುವೆಯೇ ಮನೆ ಬಾಗಿಲಿಗೆ ಮದ್ಯ ಪೂರೈಕೆ ಆಗಲಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಹೋಮ್ ಡೆಲಿವರಿ ಮೂಲಕ ಮದ್ಯ ಪೂರೈಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಜಾರಿಗೊಳಿಸಲು ಚಿಂತಿಸಲಾಗುತ್ತಿದೆ.

Recommended Video

ಬೆಂಗಳೂರು ಪೊಲೀಸರೊಂದಿಗೆ ಕೈ ಜೋಡಿಸಿ ಎಂದ ನಾರಾಯಣ ಮೂರ್ತಿ ದಂಪತಿಗಳು | Infosys | Narayan & Sudha Murthy

ಪಂಜಾಬ್ ಸರ್ಕಾರ ಈಗಾಗ್ಲೇ ಆನ್ ಲೈನ್ ಮೂಲಕ ಬುಕ್ ಮಾಡಿದ ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಶುರು ಮಾಡಿದೆ. ಇನ್ನು, ಕೆಲವು ರಾಜ್ಯಗಳಲ್ಲಿ ಇಷ್ಟರಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿವೆ ಎಂದು ಇಂಡಸ್ಟ್ರಿ ಲೈಸಿಂಗ್ ಬಾಡಿ ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಶನ್ ಆಫ್ ಇಂಡಿಯಾ(ISWAI)ದ ಚೇರ್ ಮನ್ ಅಮ್ರಿತ್ ಕಿರಣ್ ಸಿಂಗ್ ತಿಳಿಸಿದ್ದಾರೆ.

ಆಲ್ಕೋಹಾಲ್ ಹೋಂ ಡೆಲಿವರಿ ಬಗ್ಗೆ ಪರಿಗಣಿಸಿ: ಸುಪ್ರೀಂಕೋರ್ಟ್ ಆಲ್ಕೋಹಾಲ್ ಹೋಂ ಡೆಲಿವರಿ ಬಗ್ಗೆ ಪರಿಗಣಿಸಿ: ಸುಪ್ರೀಂಕೋರ್ಟ್

ಆನ್ ಲೈನ್ ಮೂಲಕ ಮದ್ಯ ಖರೀದಿಸುವ ಯೋಜನೆ ಜಾರಿಗೊಳಿಸುವ ಬಗ್ಗೆ ಚರ್ಚಿಸಲು ಎಲ್ಲ ರಾಜ್ಯಗಳಿಗೆ ISWAI ಪ್ರತಿನಿಧಿಗಳನ್ನು ಕಳುಹಿಸಿ ಕೊಡಲಾಗಿದೆ. ಭಾರತದಲ್ಲಿ ಮಾರಾಟವಾಗುವ ಮದ್ಯ ಮತ್ತು ವೈನ್ ಮಾರಾಟ ಮಾಡುವ ಶೇ.80ರಷ್ಟು ಕಂಪನಿಗಳು ISWAI ಸದಸ್ಯ ಕಂಪನಿಗಳಾಗಿವೆ. ಡಿಯಾಜಿಲೋ, ಬಕಾರ್ಡಿ, ಪರ್ನಾಡ್ ರಿಚರ್ಡ್ ಮತ್ತು ಎಲ್ ವಿಎಂಎಚ್ ಕಂಪನಿಗಳೆಲ್ಲ ISWAI ಸದಸ್ಯ ಕಂಪನಿಗಳೆಂದು ಅಮ್ರಿತ್ ಕಿರಣ್ ಸಿಂಗ್ ಹೇಳಿದ್ದಾರೆ.

ಜನರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ

ಜನರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ

ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸದಸ್ಯ ಕಂಪನಿಗಳು ಮದ್ಯವನ್ನು ಹೋಮ್ ಡೆಲಿವರಿ ನೀಡುವುದಕ್ಕೆ ಸಿದ್ಧವಾಗಿವೆ. ಆದರೆ ಯಾವುದೇ ವಿನಾಯಿತಿ ಇಲ್ಲದೇ ಮದ್ಯ ಮಾರಾಟ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಂತೆ ಆಗುತ್ತದೆ. ಜೊತೆಗೆ ಸರ್ಕಾರಕ್ಕೆ ಎಂದಿನಂತೆ ಆದಾಯವೂ ಸಿಗುತ್ತದೆ ಎನ್ನುವುದು ಅಮ್ರತ್ ಕಿರಣ್ ಸಿಂಗ್ ಅವರ ಮಾತು.

ಪಂಜಾಬ್ ಮತ್ತು ಮಶ್ಚಿಮ ಬಂಗಾಳದಲ್ಲಿ ಘೋಷಣೆ

ಪಂಜಾಬ್ ಮತ್ತು ಮಶ್ಚಿಮ ಬಂಗಾಳದಲ್ಲಿ ಘೋಷಣೆ

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಮನೆ ಬಾಗಿಲಿಗೆ ಮದ್ಯ ಮಾರಾಟ ಎಂಬ ಯೋಜನೆಯನ್ನು ಅಸ್ಸಾಂನಿಂದ ಹಿಡಿದು ಕೇರಳದವರೆಗೂ ಎಲ್ಲ ರಾಜ್ಯಗಳು ಜಾರಿಗೊಳಿಸುವ ಬಗ್ಗೆ ಪ್ರಸ್ತಾವನೆ ಇಡಲಾಗಿದೆ. ಪಶ್ಚಿಮ ಬಂಗಾಳ ಮತ್ತು ಪಂಜಾಬ್ ನಲ್ಲಿ ಈಗಾಗಲೇ ಹೋಮ್ ಡೆಲಿವರಿ ಸೇವೆ ಆರಂಭಿಸುವ ಬಗ್ಗೆ ಘೋಷಣೆಯಾಗಿದೆ. ಉಳಿದ ಕೆಲವು ಪ್ರಮುಖ ರಾಜ್ಯಗಳಲ್ಲಿ ಈ ಪ್ರಸ್ತಾವನೆ ಬಗ್ಗೆ ಮರು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಮ್ರತ್ ಕಿರಣ್ ಸಿಂಗ್ ತಿಳಿಸಿದ್ದಾರೆ.

"ಹಳೆಯ ಪದ್ಧತಿಯಿಂದ ಇಂದಿಗೂ ಹೊರ ಬಂದಿಲ್ಲ"

ಭಾರತವು ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಂಥ ದೇಶದಲ್ಲಿ ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿ ನೋಡಿದರೆ ಮದ್ಯ ಮಾರಾಟ ಮಾಡುವ ಪದ್ಧತಿಯು ಅತ್ಯಂತ ಪುರಾನತವಾಗಿದೆ. ಚಿಲ್ಲರೆ ಮದ್ಯ ಖರೀದಿಗೆ ಜನರು ಕ್ಯೂನಲ್ಲಿ ನಿಲ್ಲುವಂತಾ ಪರಿಸ್ಥಿತಿಯಿದೆ. ಇದನ್ನು ಹೋಗಲಾಡಿಸಲು ಹೋಮ್ ಡೆಲಿವರಿ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಅಮ್ರತ್ ಕಿರಣ್ ಸಿಂಗ್ ಪ್ರಸ್ತಾಪಿಸಿದ್ದಾರೆ.

ಮದ್ಯ ಮಾರಾಟದಿಂದಲೇ ಅತಿಹೆಚ್ಚು ಆದಾಯ ಸಂಗ್ರಹ

ಮದ್ಯ ಮಾರಾಟದಿಂದಲೇ ಅತಿಹೆಚ್ಚು ಆದಾಯ ಸಂಗ್ರಹ

ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದು ಅತ್ಯಂತ ಪುರಾತನ ಪದ್ಧತಿಯೇ ಭಾರತದಲ್ಲಿ ಇಂದಿಗೂ ಜಾರಿಯಲ್ಲಿದೆ. ಇದರ ಮಧ್ಯೆ ಕಳೆದ ಎರಡು ದಶಕಗಳಿಂದ ಕೆಲವು ರಾಜ್ಯಗಳಲ್ಲಿ ಒಂದೇ ಒಂದು ಅಂಗಡಿಗಳಿಗೆ ಪರವಾನಗಿ ನೀಡಿಲ್ಲ. ಭಾರತ ಲಾಕ್ ಡೌನ್ ನಂತರ ದೇಶದ ಆದಾಯಕ್ಕೆ ಪೆಟ್ಟು ಬೀಳುತ್ತಿದ್ದಂತೆ ದೇಶದಲ್ಲಿ ಮದ್ಯ ಮಾರಾಟದಿಂದಲೇ ಅತಿಹೆಚ್ಚು ಆದಾಯ ಸಂಗ್ರಹವಾಗುತ್ತದೆ ಎಂಬುದು ಗೊತ್ತಾಗಿದೆ.

ಭಾರತದಲ್ಲಿ ಮದ್ಯ ಮಾರಾಟದಿಂದಲೇ ಶೇ.40ರಷ್ಟು ಆದಾಯ

ಭಾರತದಲ್ಲಿ ಮದ್ಯ ಮಾರಾಟದಿಂದಲೇ ಶೇ.40ರಷ್ಟು ಆದಾಯ

ಭಾರತ ಲಾಕ್ ಡೌನ್ ಗಿಂತಲೂ ಮೊದಲು ದೇಶದ ಆದಾಯದಲ್ಲಿ ಶೇ.25ರಷ್ಟು ಆದಾಯವು ಮದ್ಯ ಮಾರಾಟದಿಂದಲೇ ಬರುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜಿಎಸ್ ಟಿ ಮೂಲಕ ದೇಶಕ್ಕೆ ಶೇ.40ರಷ್ಟು ಆದಾಯ ಮದ್ಯ ಮಾರಾಟ ಮೂಲದಿಂದಲೇ ಸಂಗ್ರಹವಾಗುತ್ತಿದೆ.

ರಾಜ್ಯ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರತಿನಿಧಿಗಳ ರವಾನೆ

ರಾಜ್ಯ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರತಿನಿಧಿಗಳ ರವಾನೆ

ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯಗಳಿಗೆ ISWAI ಪ್ರತ್ಯೇಕ ಪ್ರತಿನಿಧಿಗಳನ್ನು ಕಳುಹಿಸಿ ಕೊಟ್ಟಿದೆ. ಆಯಾ ರಾಜ್ಯಗಳಲ್ಲಿ ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸಲು ಯಾವುದೇ ಸ್ಥಳೀಯ ಹೋಮ್ ಡೆಲಿವರಿ ಕಂಪನಿಗಳ ಜೊತೆಗಾದರೂ ಒಪ್ಪಂದ ಮಾಡಿಕೊಳ್ಳಲಿ. ಕೇವಲ ಝೋಮ್ಯಾಟೋ ಅಷ್ಟೇ ಅಲ್ಲ, ಸ್ವಿಗ್ಗಿ, ಹಿಪ್ ಬಾರ್ ಕಂಪನಿಗಳ ಮೂಲಕ ಮದ್ಯವನ್ನು ಹೋಮ್ ಡೆಲಿವರಿಗೆ ಬಳಸಿಕೊಳ್ಳಬಹುದು. ಈ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ಬಿಡಲಾಗಿದೆ. ಯಾವುದೇ ಹೋಮ್ ಡೆಲಿವರಿ ಕಂಪನಿಯಾದರೂ ISWAI ಸದಸ್ಯ ಕಂಪನಿಗಳ ಅಭ್ಯಂತರವಿಲ್ಲ ಎಂದು ಅಮ್ರತ್ ಕಿರಣ್ ಸಿಂಗ್ ತಿಳಿಸಿದ್ದಾರೆ.

English summary
Major States Start Implementing Home Delivery Options For Liquor- ISWAI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X