ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾರಿ ಬದಲಾವಣೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಮೇಜರ್ ಆಪರೇಷನ್ ಮಾಡಿದ್ದಾರೆ. ತಮಗೆ ನಿಷ್ಠರಾಗಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಗುಲಾಂ ನಬಿ ಆಜಾದ್ ಅವರಿಗೆ ಉನ್ನತ ಸ್ಥಾನಗಳಿಂದ ಗೇಟ್ ಪಾಸ್ ನೀಡಿದ್ದಾರೆ.

ಇದು ಇತ್ತೀಚಿನ ದಿನಗಳಲ್ಲಿಯೇ ಕಾಂಗ್ರೆಸ್‌ನಲ್ಲಿ ಮಾಡಲಾಗಿರುವ ಅತಿ ದೊಡ್ಡ ಬದಲಾವಣೆಯಾಗಿದೆ. ಮಾಜಿ ಸಚಿವ ತಾರೀಖ್ ಅನ್ವರ್ ಅವರಿಗೆ ದುಪ್ಪಟ್ಟು ಬಡ್ತಿ ನೀಡಲಾಗಿದೆ. ಶರದ್ ಪವಾರ್ ಮತ್ತು ಪಿಎ ಸಂಗ್ಮಾ ಅವರೊಂದಿಗೆ ಕಾಂಗ್ರೆಸ್ ತೊರೆದು ಎನ್‌ಸಿಪಿ ಸ್ಥಾಪಿಸಿದ್ದ ತಾರೀಖ್ ಅನ್ವರ್, 2019ರ ಲೋಕಸಭೆ ಚುನಾವಣೆಗೆ ಮುನ್ನವಷ್ಟೇ ಕಾಂಗ್ರೆಸ್‌ಗೆ ಮರಳಿದ್ದರು. ಅನ್ವರ್ ಅವರನ್ನು ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಲಿರುವ ಕೇರಳದ ಉಸ್ತುವಾರಿ ಪ್ರಧಾನಿ ಕಾರ್ಯದರ್ಶಿಯನ್ನಾಗಿ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ರಾಜ್ಯಸಭೆ ಉಪಾಧ್ಯಕ್ಷ ಸ್ಥಾನ, ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪಣ ರಾಜ್ಯಸಭೆ ಉಪಾಧ್ಯಕ್ಷ ಸ್ಥಾನ, ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪಣ

ರಾಹುಲ್ ಗಾಂಧಿ ಅವರ ಆಪ್ತರಾಗಿರುವ ವೇಣುಗೋಪಾಲ್ ಹಾಗೂ ಸುರ್ಜೇವಾಲ ಎಲ್ಲ ಪ್ರಮುಖ ಸಮಿತಿಗಳೂ ನಾಮನಿರ್ದೇಶಿತಗೊಂಡಿದ್ದಾರೆ. ಕರ್ನಾಟಕದ ಉಸ್ತುವಾರಿಯಾಗಿದ್ದ ವೇಣುಗೋಪಾಲ್ ಅವರನ್ನು ಬದಲಿಸಿ, ರಣದೀಪ್ ಸುರ್ಜೇವಾಲ ಅವರಿಗೆ ಆ ಜವಾಬ್ದಾರಿ ನೀಡಲಾಗಿದೆ. ಮುಂದೆ ಓದಿ.

ಮುಕುಲ್ ವಾಸ್ನಿಕ್‌ಗೆ ವಿನಾಯಿತಿ

ಮುಕುಲ್ ವಾಸ್ನಿಕ್‌ಗೆ ವಿನಾಯಿತಿ

ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಕಾಯಂ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ನಡೆಸುವಂತೆ ಆಗ್ರಹಿಸಿ ಪತ್ರ ಬರೆದಿದ್ದ 23 ಮುಖಂಡರ ಪೈಕಿ ಮುಕುಲ್ ವಾಸ್ನಿಕ್ ಮಾತ್ರ ಪ್ರಧಾನ ಕಾರ್ಯದರ್ಶಿಯ ಸ್ಥಾನ ಪಡೆದುಕೊಂಡಿದ್ದಾರೆ. ಜತೆಗೆ ಪಕ್ಷದ ಚಟುವಟಿಕೆಗಳನ್ನು ನಡೆಸಲು ಅಧ್ಯಕ್ಷರಿಗೆ ಸಹಾಯ ಮಾಡುವ ಆರು ಸದಸ್ಯರ ಸಮಿತಿಯಲ್ಲಿಯೂ ಇದ್ದಾರೆ. ಉಳಿದಂತೆ ಸೋನಿಯಾ ನಿಷ್ಠರಾದ ಎ.ಕೆ. ಆಂಟೊನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಸಮಿತಿಯಲ್ಲಿದ್ದಾರೆ.

ಗುಲಾಂ ನಬಿ ಆಜಾದ್

ಗುಲಾಂ ನಬಿ ಆಜಾದ್

ಕಾರ್ಯಕಾರಿ ಸಮಿತಿಯ ಪುನರ್ರಚನೆ ಹಾಗೂ ಗುಲಾಂ ನಬಿ ಆಜಾದ್ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಿರುವುದು ಮಹತ್ವದ ಬೆಳವಣಿಗೆಯಾಗಿದೆ. ಏಕೆಂದರೆ ಪಕ್ಷಕ್ಕೆ ಕಾಯಂ ಅಧ್ಯಕ್ಷರ ನೇಮಕದ ಜತೆಗೆ, ಪಕ್ಷದೊಳಗೆ ಆಮೂಲಾಗ್ರ ಬದಲಾವಣೆಯಾಗಬೇಕು ಎಂದು ಒತ್ತಾಯಿಸಿ ಪತ್ರಬರೆದಿದ್ದವರಲ್ಲಿ ಆಜಾದ ಪ್ರಮುಖರಾಗಿದ್ದರು.

ಸೋನಿಯರಿಂದ ಅಚ್ಚರಿಯ ನಡೆ, ಬಂಗಾಳಕ್ಕೆ ಅಧೀರ ಅಧ್ಯಕ್ಷರಾಗಿದ್ದು ಹೇಗೆ?ಸೋನಿಯರಿಂದ ಅಚ್ಚರಿಯ ನಡೆ, ಬಂಗಾಳಕ್ಕೆ ಅಧೀರ ಅಧ್ಯಕ್ಷರಾಗಿದ್ದು ಹೇಗೆ?

ಖರ್ಗೆಗೂ ಕೊಕ್

ಖರ್ಗೆಗೂ ಕೊಕ್

ಆಜಾದ್ ಅವರಲ್ಲದೆ ಮಲ್ಲಿಕಾರ್ಜುನ ಖರ್ಗೆ, ಮೋತಿಲಾಲ್ ವೋರಾ, ಅಂಬಿಕಾ ಸೋನಿ ಮತ್ತು ಲ್ಯೂಜಿನ್ಹೋ ಫಲೀರೊ ಅವರನ್ನು ಕೂಡ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಂದ ತೆಗೆದುಹಾಕಲಾಗಿದೆ. ಇವರಲ್ಲಿ ವೋರಾ ಮತ್ತು ಫೆಲೀರೋ ಅವರನ್ನು ಕಾರ್ಯಕಾರಿ ಸಮಿತಿಯ ಪಟ್ಟಿಯಿಂದಲೂ ಕೈಬಿಡಲಾಗಿದೆ.

ಪ್ರಧಾನ ಕಾರ್ಯದರ್ಶಿಗಳು

ಪ್ರಧಾನ ಕಾರ್ಯದರ್ಶಿಗಳು

ಮುಕುಲ್ ವಾಸ್ನಿಕ್, ಹರೀಶ್ ರಾವತ್, ಊಮ್ಮನ್ ಚಾಂಡಿ, ತಾರೀಖ್ ಅನ್ವರ್, ಪ್ರಿಯಾಂಕಾಗಾಂಧಿ ವಾದ್ರಾ, ರಣದೀಪ್ ಸಿಂಗ್ ಸುರ್ಜೇವಾಲ, ಜಿತೇಂದ್ರ ಸಿಂಗ್, ಅಜಯ್ ಮಾಕೆನ್ ಮತ್ತು ಕೆ.ಸಿ. ವೇಣುಗೋಪಾಲ್.

English summary
Congress in a major reshuffle in the party has dropped leaders including Ghulam Nabi Azad, Mallikarjun Kharge from the list of its general secretaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X