ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಾಯುಪಡೆಗೆ ಗಜಬಲ: ಬತ್ತಳಿಕೆಗೆ ಸೇರಿದ ಅಪಾಚೆ ಹೆಲಿಕಾಪ್ಟರ್

|
Google Oneindia Kannada News

ಪಠಾಣಕೋಟ್, ಸೆ 3: ಗಂಟೆಗೆ 365 ಕಿ.ಮೀ ವೇಗ, ಭೂಮಿಯಿಂದ ಸುಮಾರು 2,500 ಅಡಿ ಎತ್ತರದಲ್ಲಿ ಕಾದಾಡುವ ಸಾಮರ್ಥ್ಯ, ಜತೆಗೆ 30 ಎಂಎಂ ಚೈನ್ ಗನ್, AIM-92 ಕ್ಷಿಪಣಿ, ಹೈಡ್ರಾ 70 ಎಂಎಂ ರಾಕೆಟ್ ಮತ್ತು ಸ್ಪೈಕ್ ಕ್ಷಿಪಣಿ... ಇದು ಮಂಗಳವಾರ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿರುವ ಅಮೆರಿಕಾ ನಿರ್ಮಿತ ಎಎಚ್‌- 64ಇ ಅಪಾಚೆ ಹೆಲಿಕಾಪ್ಟರ್‌ಗಳ ಪುಟ್ಟ ಪರಿಚಯ.

ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಅಶಾಂತಿಯ ವಾತಾವರಣದ ನಡುವೆ, ಇಂತಹ ಎಂಟು ಅಪಾಚೆ ಎಎಚ್ 64ಇ ಹೆಲಿಕಾಪ್ಟರ್‌ಗಳು ಭಾರತದ ವಾಯುಸೇನೆಯ ಬತ್ತಳಿಕೆಗೆ ಸೇರಿರುವುದು ಮಹತ್ವವನ್ನು ಪಡೆದುಕೊಂಡಿದೆ.

ಈವರೆಗೆ ಅಮೆರಿಕಾದ ಸೈನ್ಯದಲ್ಲಿದ್ದ ಎಹೆಚ್ -64E ಅಪಾಚೆ ವಿಶ್ವದ ಅತ್ಯಾಧುನಿಕ ಬಹು ಉದ್ದೇಶಿತ ಹೆಲಿಕಾಪ್ಟರ್ಗಳು ವಾಯು ಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ . ಎಸ್. ಧನೋವಾ ಸಮ್ಮುಖದಲ್ಲಿ ಭಾರತದ ವಾಯುಪಡೆಗೆ ಸೇರ್ಪಡೆಯಾಗಿದೆ.

ಕರ್ತವ್ಯಕ್ಕೆ ವಾಪಸಾದ ಮೇಲೆ ಮೊದಲ ಬಾರಿ MiG- 21 ಕಾಕ್ ಪಿಟ್ ನಲ್ಲಿ ಅಭಿನಂದನ್ಕರ್ತವ್ಯಕ್ಕೆ ವಾಪಸಾದ ಮೇಲೆ ಮೊದಲ ಬಾರಿ MiG- 21 ಕಾಕ್ ಪಿಟ್ ನಲ್ಲಿ ಅಭಿನಂದನ್

ಸೆಪ್ಟಂಬರ್ 2015ರಲ್ಲಿ 22 ಅಪಾಚೆ ಯುದ್ದ ಹೆಲಿಕಾಪ್ಟರ್ ಖರೀದಿ ಸಂಬಂಧ ಭಾರತ ಮತ್ತು ಅಮೆರಿಕಾದ ನಡುವೆ ಬಹುಕೋಟಿ ಡಾಲರ್ ಒಪ್ಪಂದ ನಡೆದಿತ್ತು. ಇದರಂತೇ, ಮೊದಲ ಕಂತಿನಲ್ಲಿ ನಾಲ್ಕು ಮತ್ತು ಸೆ. 3ರಂದು ಎಂಟು ಹೆಲಿಕಾಪ್ಟರ್‌ಗಳನ್ನು ಅಮೆರಿಕ, ಭಾರತಕ್ಕೆ ಹಸ್ತಾಂತರಿಸಿದೆ. ಈ ಅತ್ಯಾಧುನಿಕ ಯುದ್ದ ಹೆಲಿಕಾಪ್ಟರಿನ ವಿಶೇಷ ಮತ್ತು ಇದನ್ನು ಹೊಂದಿರುವ ರಾಷ್ಟ್ರಗಳು ಯಾವವು? ವಿವರ ಇಲ್ಲಿದೆ.

ಹೆಲಿಕಾಪ್ಟರ್‌ಗಳನ್ನು ಅಮೆರಿಕಾ, ಭಾರತಕ್ಕೆ ಹಸ್ತಾಂತರಿಸಬೇಕಿದೆ

ಹೆಲಿಕಾಪ್ಟರ್‌ಗಳನ್ನು ಅಮೆರಿಕಾ, ಭಾರತಕ್ಕೆ ಹಸ್ತಾಂತರಿಸಬೇಕಿದೆ

ಎರಡು ದೇಶಗಳ ನಡುವೆ ಒಪ್ಪಂದ ನಡೆದ ನಾಲ್ಕು ವರ್ಷಗಳ ನಂತರ, ಅಮೆರಿಕ, ಮೊದಲ ಕಂತಿನಲ್ಲಿ ಹೆಲಿಕಾಪ್ಟರ್ಗಳನ್ನು ಹಸ್ತಾಂತರಿಸಿತ್ತು. 2017ರಲ್ಲಿ ಮತ್ತೆ ಆರು ಹೆಲಿಕಾಪ್ಟರ್ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು. ಯುದ್ದ ಸಾಮಗ್ರಿಯೂ ಸೇರಿದಂತೆ, ಈ ಒಪ್ಪಂದದ ಒಟ್ಟು ಮೊತ್ತ 4,168 ಕೋಟಿ ರೂಪಾಯಿಗಳು. 2020ರೊಳಗೆ ಒಪ್ಪಂದದ ಪ್ರಕಾರ, ಎಲ್ಲಾ ಹೆಲಿಕಾಪ್ಟರ್‌ಗಳನ್ನು ಅಮೆರಿಕಾ, ಭಾರತಕ್ಕೆ ಹಸ್ತಾಂತರಿಸಬೇಕಿದೆ.

ಅಮೆರಿಕಾ ಮೂಲದ ಅಪಾಚೆ ಕಂಪನಿ

ಅಮೆರಿಕಾ ಮೂಲದ ಅಪಾಚೆ ಕಂಪನಿ

ಅಮೆರಿಕಾ ಮೂಲದ ಅಪಾಚೆ ಕಂಪನಿ ಇದುವರೆಗೆ 2,200 ಹೆಲಿಕಾಪ್ಟರ್‌ಗಳನ್ನು ವಿವಿಧ ದೇಶಗಳಿಗೆ ಈಗಾಗಲೇ ಹಸ್ತಾಂತರಿಸಿದೆ. ಈ ಅತ್ಯಾಧುನಿಕ ಹೆಲಿಕಾಪ್ಟರ್ ಭಾರತ ಖರೀದಿಸುವ ಮೊದಲು, ಈಗಾಗಲೇ ಹದಿನೈದು ದೇಶಗಳು ಈ ಹೆಲಿಕಾಪ್ಟರ್ಗಳನ್ನು ಹೊಂದಿದೆ. "ಶತ್ರುಗಳ ವಿಮಾನವನ್ನು ಹೊಡೆದುರುಳಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಅಪಾಚೆ ಹೆಲಿಕಾಪ್ಟರ್ ಹೊಂದಿದೆ," ಎಂದು ವಾಯುಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿ

ಎಂತದ್ದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಕಾಂಬ್ಯಾಟ್ ಹೆಲಿಕಾಪ್ಟರ್

ಎಂತದ್ದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಕಾಂಬ್ಯಾಟ್ ಹೆಲಿಕಾಪ್ಟರ್

"ಎಂತದ್ದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಕಾಂಬ್ಯಾಟ್ ಹೆಲಿಕಾಪ್ಟರ್ ಇದಾಗಿದ್ದು, ಜಂಟಿ ಡಿಜಿಟಲ್ ಕಾರ್ಯಾಚರಣೆಯ ಸೌಲಭ್ಯವನ್ನೂ ಹೊಂದಿದೆ. ವಿಂಗ್ ಕಮಾಂಡರ್ ಗಳ ಅವಶ್ಯಕತೆಗೆ ತಕ್ಕಂತೆ, ಇದನ್ನು ತಯಾರಿಸಲಾಗಿದೆ. ಯಾವುದೇ ಭೌಗೋಳಿಕ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಬಹುದಾದ ಯುದ್ದ ಹೆಲಿಕಾಪ್ಟರ್ ಇದು" ಎಂದು ವಾಯುಪಡೆಯ ಅಧಿಕಾರಿಗಳು, ಅಪಾಚೆ ಎಎಚ್ 64E ಬಗ್ಗೆ ವಿವರಣೆಯನ್ನು ನೀಡಿದ್ದಾರೆ. (ಚಿತ್ರದಲ್ಲಿ: ಭಾರತೀಯ ವಾಯುಪಡೆಯ ಮುಖ್ಯಸ್ಥ)

ಕಾಕ್ ಪಿಟ್ ನಲ್ಲಿ ಇಬ್ಬರು ಕುಳಿತುಕೊಳ್ಳುವ ವ್ಯವಸ್ಥೆ

ಕಾಕ್ ಪಿಟ್ ನಲ್ಲಿ ಇಬ್ಬರು ಕುಳಿತುಕೊಳ್ಳುವ ವ್ಯವಸ್ಥೆ

ಬೋಯಿಂಗ್ ಎಹೆಚ್ -64 ಅಪಾಚೆ ಅಮೆರಿಕಾದ twin-turboshaft attack ಹೆಲಿಕಾಪ್ಟರ್ ಆಗಿದ್ದು, ವಿಶೇಷ ಲ್ಯಾಂಡಿಂಗ್ ಗೇರ್ ವ್ಯವಸ್ಥೆಯನ್ನು ಹೊಂದಿದ್ದು, ಕಾಕ್ ಪಿಟ್ ನಲ್ಲಿ ಇಬ್ಬರು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಹೊಂದಿದೆ. 58.17 ಅಡಿ ಉದ್ದ ಹೊಂದಿರುವ ಈ ಹೆಲಿಕಾಪ್ಟರ್, 12.7 ಎತ್ತರವನ್ನು ಹೊಂದಿದೆ. ಗಂಟೆಗೆ 365 ಕಿ.ಮೀ ವೇಗವಾಗಿ ಮತ್ತು 2,500 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. 30 ಎಂಎಂ ಚೈನ್ ಗನ್, AIM-92 ಕ್ಷಿಪಣಿ, ಹೈಡ್ರಾ 70 ಎಂಎಂ ರಾಕೆಟ್ ಮತ್ತು ಸ್ಪೈಕ್ ಕ್ಷಿಪಣೆಯನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ.

ಈಜಿಪ್ಟ್, ಗ್ರೀಸ್, ಭಾರತ, ಇಂಡೋನೇಶಿಯಾ ಸೇರಿದಂತೆ ಹದಿನೈದು ದೇಶಗಳು

ಈಜಿಪ್ಟ್, ಗ್ರೀಸ್, ಭಾರತ, ಇಂಡೋನೇಶಿಯಾ ಸೇರಿದಂತೆ ಹದಿನೈದು ದೇಶಗಳು

ಈ ಅತ್ಯಾಧುನಿಕ ಅಪಾಚೆ - ಎಎಚ್ 64E ಯುದ್ದ ಹೆಲಿಕಾಪ್ಟರ್ ಅನ್ನು ಹೊಂದಿರುವ ರಾಷ್ಟ್ರಗಳೆಂದರೆ, ಈಜಿಪ್ಟ್, ಗ್ರೀಸ್, ಭಾರತ, ಇಂಡೋನೇಶಿಯಾ, ಇಸ್ರೇಲ್, ಜಪಾನ್, ಕುವೈಟ್, ನೆದರ್ಲ್ಯಾಂಡ್, ಕತಾರ್, ಸೌದಿ ಅರೆಬಿಯಾ, ಸಿಂಗಾಪುರ, ದಕ್ಷಿಣ ಕೊರಿಯಾ, ತೈವಾನ್, ಅರಬ್ ಗಣರಾಜ್ಯ, ಯುನೈಟೆಡ್ ಕಿಂಗ್ಡಮ್, ಅಮೆರಿಕ.

English summary
In a major boost to the Indian Air Force's combat capabilities, eight US-made Apache AH-64E attack helicopters were inducted into the IAF on September 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X