ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಾದ್ಯಂತ ಬಿರುಗಾಳಿ ಎಬ್ಬಿಸಿರುವ ಮೋದಿಯವರ 'ಮೈ ಭಿ ಚೌಕಿದಾರ್'

|
Google Oneindia Kannada News

Recommended Video

Lok Sabha Elections 2019:ದೇಶದಾದ್ಯಂತ ಬಿರುಗಾಳಿ ಎಬ್ಬಿಸಿರುವ ಮೋದಿಯವರ 'ಮೈ ಭಿ ಚೌಕಿದಾರ್'..!|Oneindia kannada

ಬೆಂಗಳೂರು, ಮಾರ್ಚ್ 16 : 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆ ಬಿರುಗಾಳಿ ಎಬ್ಬಿಸಿದ್ದರೆ, 2019ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಆರಂಭಿಸಿರುವ 'ಮೈ ಭಿ ಚೌಕಿದಾರ್' (ನಾನು ಕೂಡ ಕಾವಲುಗಾರ) ಚಳವಳಿ ಸುಂಟರಗಾಳಿ ಎಬ್ಬಿಸಿದೆ.

ಮುಂದಿನ ತಿಂಗಳು ಏಪ್ರಿಲ್ 11ರಂದು ಲೋಕಸಭೆ ಚುನಾವಣೆ ಮತದಾನದ ಪರ್ವ ಆರಂಭವಾಗಲಿದ್ದು, ಮತ್ತೊಮ್ಮೆ ಜಯಭೇರಿ ಬಾರಿಸಲು ಭಾರತೀಯ ಜನತಾ ಪಕ್ಷ ಉತ್ಸಾಹದಿಂದ ಪ್ರಚಾರ ಆರಂಭಿಸಿದೆ. ಮತ್ತೆ 272 ಕನಿಷ್ಠ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ನರೇಂದ್ರ ಮೋದಿಯವರು ರಣಕಹಳೆಯೂದಿದ್ದಾರೆ.

"ನಿಮ್ಮ ಚೌಕಿದಾರ (ಕಾವಲುಗಾರ) ಅತ್ಯಂತ ಸದೃಢವಾಗಿ ನಿಂತಿದ್ದಾನೆ ಮತ್ತು ದೇಶದ ಸೇವೆ ಮಾಡುತ್ತಿದ್ದಾನೆ. ಆದರೆ, ಈ ಅಭಿಯಾನದಲ್ಲಿ ನಾನು ಏಕಾಂಗಿಯಲ್ಲ. ಭ್ರಷ್ಟಾಚಾರದ ವಿರುದ್ಧ, ಕೊಳಕಿನ ವಿರುದ್ಧ, ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಪ್ರತಿಯೊಬ್ಬರೂ ಚೌಕಿದಾರರೇ. ದೇಶದ ಪ್ರಗತಿಯಾಗಿ ಕಷ್ಟಪಟ್ಟು ದುಡಿಯುತ್ತಿರುವ ಪ್ರತಿಯೊಬ್ಬರೂ ಚೌಕಿದಾರರೇ. ಇಂದು ಪ್ರತಿ ಭಾರತೀಯ ಹೇಳುತ್ತಿದ್ದಾನೆ #MainBhiChowkidar" ಎಂದು ಅವರು ಮಾಡಿರುವ ಟ್ವೀಟ್ ದೇಶದಾದ್ಯಂತ ಅಕ್ಷರಶಃ ಉತ್ಸಾಹ ಮತ್ತು ಆಕ್ರೋಶದ ಕಿಡಿಯನ್ನೆಬ್ಬಿಸಿದೆ.

ಲೋಕ ಕದನಕ್ಕೆ ಮೋದಿ ರೆಡಿ... ಎಲ್ಲೆಲ್ಲೂ 'ಚೌಕಿದಾರಂದೇ' ಹವಾ!ಲೋಕ ಕದನಕ್ಕೆ ಮೋದಿ ರೆಡಿ... ಎಲ್ಲೆಲ್ಲೂ 'ಚೌಕಿದಾರಂದೇ' ಹವಾ!

ಬಿಜೆಪಿ ಬೆಂಬಲಿಗರು, ಸಂಸದರು 'ನಾನು ಕೂಡ ಕಾವಲುಗಾರ' ಅಭಿಯಾನವನ್ನು ಹೆಮ್ಮೆಯಿಂದ ಪ್ರಚಾರ ಮಾಡುತ್ತಿದ್ದರೆ, ವಿರೋಧಿಗಳ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ. #MainBhiChowkidar ಇಂದು ಟಾಪ್ ಟ್ರೆಂಡಿಂಗ್ ನಲ್ಲಿದ್ದು, ಹಲವಾರು ಟ್ವಿಟ್ಟಿಗರು ತಮ್ಮ ಟ್ವಿಟ್ಟರ್ ಖಾತೆಯನ್ನೇ ಬದಲಿಸಿ, ತಮ್ಮ ಖಾತೆಯ ಹೆಸರಿನ ಹಿಂದೆ 'ಚೌಕಿದಾರ್' ಎಂದು ಸೇರಿಸಿ, ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Array

ಬಲಿಷ್ಠ ಭಾರತಕ್ಕಾಗಿ ಸ್ಮೃತಿ ಇರಾನಿ

ನಾನು ಕೂಡ ಕಾವಲುಗಾರ ಅಭಿಯಾನದ ಬಗ್ಗೆ ನನಗೆ ಹೆಮ್ಮೆಯಿದೆ. ಭಾರತವನ್ನು ಪ್ರೀತಿಸುವ ಓರ್ವ ನಾಗರಿಕಳಾಗಿ ನಾನು ಭ್ರಷ್ಟಾಚಾರ, ಕೊಳಕು, ಬಡತನ ಮತ್ತು ಭಯೋತ್ಪಾದನೆಯನ್ನು ಸೋಲಿಸಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ಮತ್ತು ಬಲಿಷ್ಠವಾದ, ಭದ್ರವಾದ ಮತ್ತು ಸಂಪದ್ಭರಿತವಾದ ಹೊಸ ಭಾರತವನ್ನು ನಿರ್ಮಿಸಲು ಸಹಾಯ ಮಾಡುತ್ತೇನೆ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಟ್ವೀಟ್ ಮಾಡಿದ್ದಾರೆ.

NewsX Polstrat poll: ನರೇಂದ್ರ ಮೋದಿಯೇ ಅತ್ಯುತ್ತಮ ಪ್ರಧಾನಿNewsX Polstrat poll: ನರೇಂದ್ರ ಮೋದಿಯೇ ಅತ್ಯುತ್ತಮ ಪ್ರಧಾನಿ

Array

ದೇಶದ ಕನಸು ನನಸಾಗಿಸೋಣ : ಪೂನಂ ಮಹಾಜನ್

ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 'ಮೈ ಭೀ ಚೌಕಿದಾರ್' ಅಭಿಯಾನದಲ್ಲಿ ಪಾಲ್ಗೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ನಮ್ಮೆಲ್ಲರ ಸಾಂಘಿಕ ಕನಸಾದ ಸ್ವಚ್ಛ ಭಾರತ, ಬಲಿಷ್ಠ, ಸುಭದ್ರ ಮತ್ತು ಸಂಪದ್ಭರಿತ ಹೊಸ ಭಾರತದ ಕನಸನ್ನು ನನಸಾಗಿಸಲು ಅವರೊಂದಿಗೆ ಕೈಜೋಡಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಭಾರತದ ಯುವಕರು ದೊಡ್ಡ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡುತ್ತೇನೆ ಎಂದು ಹೇಳಿದ್ದಾರೆ ಮುಂಬೈ ಉತ್ತರ-ಕೇಂದ್ರ ಕ್ಷೇತ್ರದ ಸಂಸದೆ ಪೂನಂ ಮಹಾಜನ್.

ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ಏಪ್ರಿಲ್ 12ಕ್ಕೆ ತೆರೆಗೆನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ಏಪ್ರಿಲ್ 12ಕ್ಕೆ ತೆರೆಗೆ

ಕಳ್ಳರೆಲ್ಲಾ ಪೊಲೀಸರಾಗುತ್ತಿದ್ದಾರೆ ಎಂದ ಸಿದ್ದರಾಮಯ್ಯ

ಕಳ್ಳನೇ ಪೊಲೀಸ್ ಆಗಿ ಪೊಲೀಸರ ಗೌರವ ಕಳೆಯುತ್ತಿರುವುದು ಈ ದೇಶದ ದುರಂತ. ಈ ಸೋಂಕು ಊರೆಲ್ಲಾ ಹರಡಿ ದೇಶದ ಕಳ್ಳರೆಲ್ಲಾ ಪೊಲೀಸ್ ಆಗಲು (#MeinBhichowkidar) ಹೊರಟವ್ರೆ. #chorhichwokidhar ಎಂದು ಕಾಂಗ್ರೆಸ್ಸಿನ ಹ್ಯಾಂಡಲ್ ಹಾಕಿ ಟ್ವೀಟ್ ಮಾಡಿದ್ದಾರೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಈ ಟ್ವೀಟಿಗೆ ಭಾರೀ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿವೆ.

ರಾಹುಲ್ ಸೆಲ್ಫ್ ಗೋಲ್ : ಶೆಹಜಾದ್ ಜೈ ಹಿಂದ್

ಕಳೆದ ಬಾರಿ ರಾಹುಲ್ ಗಾಂಧಿ ಅವರ ಅಂಕಲ್ ಮಣಿ ಶಂಕರ್ ಅಯ್ಯರ್ ಅವರು, ನರೇಂದ್ರ ಮೋದಿಯವರು ಚಾಯ್ ವಾಲಾ ಎಂದು ಅವರ ಮೇಲೆ ದಾಳಿ ಮಾಡಿದ್ದರು. ಈ ಬಾರಿ ರಾಹುಲ್ ಗಾಂಧಿ ಅವರೇ, #MainBhiChowkidar ಎಂಬ ಅಭಿಯಾನವನ್ನು ಆರಂಭಿಸಲು ನರೇಂದ್ರ ಮೋದಿಯವರಿಗೆ ಚಿನ್ನದಂಥ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಎಂಥ ಅದ್ಭುತ ಸೆಲ್ಫ್ ಗೋಲ್ ಎಂದು ಕಾಂಗ್ರೆಸ್ ತೊರೆದಿರುವ ಮುಂಬೈ ಧುರೀಣ ಶೆಹಜಾದ್ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗೆ ಟಾಂಗ್ ನೀಡಿದ್ದಾರೆ.

ಮಾಧವಿ ಚೌಧರಿ ಅಗರವಾಲ್

ನಿಜವಾದ ನಾಯಕ ದೇಶದ ಜನರಿಗಾಗಿ ಏನಾದರೂ ಸಾಧನೆ ಮಾಡಲು, ಜನರನ್ನು ಖುಷಿಯಿಂದ ಇಡಲು ಸ್ವಯಂ ಪ್ರೇರೇಪಣೆಗೊಳ್ಳುತ್ತಾನೆ. ಯಾರನ್ನಾದರೂ ಸೋಲಿಸಲೆಂದು ಆತ ಸ್ವಯಂ ಸ್ಫೂರ್ತಿಗೊಳ್ಳುವುದಿಲ್ಲ. ನಾನು ಕೂಡ ಕಾವಲುಗಾರ ಅಭಿಯಾನವನ್ನು ಬೆಂಬಲಿಸುತ್ತೇನೆ ಎಂದು ಮಾಧವಿ ಚೌಧರಿ ಅಗರವಾಲ್ ಅವರು ನರೇಂದ್ರ ಮೋದಿಯವರ ನಾಯಕತ್ವವನ್ನು ಹೊಗಳಿದ್ದಾರೆ.

ಎಲ್ಲರೂ ಪ್ರಮಾಣ ಮಾಡಿ : ಜಾಹ್ನವಿ ಜೈನ್

ಗುಜರಾತ್ ಬಿಜೆಪಿ ಐಟಿ ಸೆಲ್ ಸಂಚಾಲಕಿಯಾಗಿರುವ ಜಾಹ್ನವಿ ಜೈನ್ ಅವರು, ಅವಶ್ಯಕತೆ ಇರುವವರಿಗೆ ಸಹಾಯ ಮಾಡಲು, ಆಹಾರ ದುರ್ಬಳಕೆ ಮಾಡದಿರಲು, ನೀರು ವ್ಯಯ ಮಾಡದಿರಲು, ವಿದ್ಯುತ್ ಉಳಿಸಲು, ಭಾರತೀಯ ಕಂಪನಿಗೆ ಬೆಂಬಲ ನೀಡಲು, ತೆರಿಗೆ ಕಟ್ಟಲು, ರಕ್ಷಣಾ ಇಲಾಖೆಯನ್ನು ಬೆಂಬಲಿಸಲು, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು, ಬಲಿಷ್ಠ ಭಾರತವನ್ನು ಕಟ್ಟಲು ಪ್ರತಿ ಭಾರತೀಯರೆಲ್ಲರೂ ಪ್ರಮಾಣ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಅಭಿಯಾನ ಬೆಂಬಲಿಸಬೇಡಿ : ಮೊಹಮ್ಮದ್ ಸಲೀಂ ಶೇಖ್

ನಿಮಗೆ ಪೊಲೀಸ್ ಇಲಾಖೆಯಲ್ಲಿ, ಆಡಳಿತದಲ್ಲಿ, ನ್ಯಾಯಾಂಗ ವ್ಯವಸ್ಥೆಯಲ್ಲಿ, ಚುನಾವಣಾ ವ್ಯವಸ್ಥೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಬೇಕಿದ್ದರೆ, ಒಂದೇ ಬಗೆಯ ಶಿಕ್ಷಣ ಬೇಕಿದ್ದರೆ, ಯುನಿಫಾರ್ಮ್ ಸಿವಿಲ್ ಕೋಡ್, ಆರೋಗ್ಯ ಕ್ಷೇತ್ರದಲ್ಲಿ, ಮತಾಂತರ ವಿರೋಧಿ ಕಾನೂನು, ಜನಸಂಖ್ಯೆ ನಿಯಂತ್ರಣ ಕಾನೂನು, ಒಂದೇ ಬಾವುಟ ಒಂದೇ ಸಂವಿಧಾನ ಬೇಕಿದ್ದರೆ 'ನಾನು ಕೂಡ ಕಾವಲುಗಾರು' ಅಭಿಯಾನ ಬೆಂಬಲಿಸಬೇಡಿ ಎಂದು ಮೊಹಮ್ಮದ್ ಸಲೀಂ ಶೇಖ್ ಎಂಬ ಅಲಿಘಡ ಮುಸ್ಲಿಂ ಯುನಿವರ್ಸಿಟಿಯ ರಾಜಕೀಯ ವಿಜ್ಞಾನದ ವಿದ್ಯಾರ್ಥಿ ಟ್ವೀಟ್ ಮಾಡಿದ್ದಾನೆ.

English summary
Main Bhi Chowkidar campaign by Narendra Modi, ahead of Lok Sabha Elections 2019, has created storm all over India. Many are appreciating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X