ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರಲ್ಲಿ ಸರ್ವಸಂಗ ಪರಿತ್ಯಾಗಿ ಮಹಾವೀರನ ಜಯಂತಿ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 29: ಲೋಕಕಲ್ಯಾಣಕ್ಕಾಗಿ ಸರ್ವಸಂಗ ಪರಿತ್ಯಾಗ ಮಾಡಿದ ದಿಗಂಬರ ಮಹಾಮುನಿ, 24ನೇ ಜೈನ ತೀರ್ಥಂಕರ ಮಹಾವೀರನ ಜಯಂತಿಯನ್ನು ಇಂದು ಶ್ರದ್ಧಾ, ಭಕ್ತಿಯಿಂದ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ.

ಚೈತ್ರಮಾಸದ ಶುಕ್ಲ ತ್ರಯೋದಿನದಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ. ಗೋರಕ್ಷಣೆಗಾಗಿ ಚಂದಾ ಎತ್ತುತ್ತಾರೆ.

ಅಹಿಂಸೋ ಪರಮೋ ಧರ್ಮ:, ವ್ಯಕ್ತಿ ತನ್ನನ್ನು ತಾನು ಅರಿಯದ ಹೊರತೂ, ಬೇರೆಯವರನ್ನು ಅರಿಯಲಾರನು, ತನ್ನ ಅರಿವಿನಿಂದಲೇ ಲೋಕ ಕಲ್ಯಾಣ ಎಂದ ಮಹಾವೀರನನ್ನು ಇಂದು ಸ್ತುತಿಸಲಾಗುತ್ತದೆ.

ಮಹಾವೀರ ಜಯಂತಿಯ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು, ರಾಜಕಾರಣಿಗಳು ಹಾಗೂ ಸಾರ್ವಜನಿಕರು, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ.

ಸರ್ವಸಂಗ ಪರಿತ್ಯಾಗಿ ಮಹಾವೀರನ ಜಯಂತಿ

ಸರ್ವಸಂಗ ಪರಿತ್ಯಾಗಿ ಮಹಾವೀರನ ಜಯಂತಿ

ಚೈತ್ರಮಾಸದ ಶುಕ್ಲ ತ್ರಯೋದಿನದಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ. ಗೋರಕ್ಷಣೆಗಾಗಿ ಚಂದಾ ಎತ್ತುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶುಭಹಾರೈಕೆ

ನಾಡಿನ ಜನತೆಗೆ ಮಹಾವೀರ ಜಯಂತಿಯ ಶುಭಾಶಯಗಳು.- ಎಂದು ಶುಭಹಾರೈಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯಯ್ಯ.

ಯಡಿಯೂರಪ್ಪರಿಂದ ಶುಭಕೋರಿಕೆ

ಸರ್ವರಿಗೂ ವರ್ಧಮಾನ ಮಹಾವೀರ ಜಯಂತಿಯ ಶುಭಾಶಯಗಳು. ಅಹಿಂಸಾ ಪರಮೋ ಧರ್ಮಃ ಎಂದು ಜಗತ್ತಿಗೆ ಶಾಂತಿ ಸಾರಿದ ಜೈನಧರ್ಮದ ತೀರ್ಥಂಕರರ ಚಿಂತನೆಗಳು ಎಲ್ಲರಿಗೂ ದಾರಿದೀಪ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್

ತ್ಯಾಗ, ಅಹಿಂಸೆ, ಶಾಂತಿ, ಸೌಹಾರ್ದತೆಯನ್ನು ಬೋಧಿಸಿದ ಭಗವಾನ್ ಮಹಾವೀರ ನಮೆಗಲ್ಲ ಆದರ್ಶ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ರಾಮ್ ನಾಥ್ ಕೋವಿಂದ್

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಹಾವೀರ ಜಯಂತಿಗೆ ಶುಭಕೋರಿ, ಮಹಾವೀರರ ಸಂದೇಶಗಳು ವಿಶ್ವಕ್ಕೆ ಸ್ಫೂರ್ತಿದಾಯಕ ಎಂದಿದ್ದಾರೆ.

English summary
Mahavir Jayanti being celebrated today (Mar 29) all across India. Here are the twitter reactions, wishes from celebrities, politician and others
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X