ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ, ಹರಿಯಾಣ ಫಲಿತಾಂಶ: ಎಕ್ಸಿಟ್ ಪೋಲ್ ಧೂಳೀಪಟ

|
Google Oneindia Kannada News

ಮತದಾನ ಮಾಡಿ ಹೊರಬರುವ ಮತದಾರನ ಚಿತ್ತ, ಯಾವ ಪಕ್ಷದತ್ತ ಎನ್ನುವ ಅಂಶವನ್ನು ಇಟ್ಟುಕೊಂಡು ನಡೆಸಲಾಗುವ ಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ) ಇತ್ತೀಚಿನ ದಿನಗಳಲ್ಲಿ, ಫಲಿತಾಂಶಕ್ಕೆ ಹತ್ತಿರವಾದ ಸಮೀಕ್ಷೆ ನೀಡುವಲ್ಲಿ ವಿಫಲವಾಗುತ್ತಿದೆಯಾ?

ಮಹಾರಾಷ್ಟ್ರ ಮತ್ತು ಹರಿಯಾಣದ ಅಸೆಂಬ್ಲಿ ಚುನಾವಣೆಯ ಬಗ್ಗೆ ವಿವಿಧ ವಾಹಿನಿಗಳು ಜಂಟಿಯಾಗಿ ನಡೆಸಿದ್ದ ಸಮೀಕ್ಷೆ ಮತ್ತು ಚುನಾವಣಾ ಫಲಿತಾಂಶವನ್ನು ಒಂದಕ್ಕೊಂದು ತಾಳೆ ಹಾಕಿದರೆ, ಬಹುತೇಕ ಎಲ್ಲಾ ವಾಹಿನಿಗಳು, ಕರಾರುವಕ್ಕಾದ ರಿಸಲ್ಟ್ ನೀಡುವಲ್ಲಿ ವಿಫಲವಾಗಿದೆ.

ಎರಡೂ ರಾಜ್ಯಗಳೂ ಬಿಜೆಪಿಗೆ ಸುಲಭದ ತುತ್ತು ಎಂದಿದ್ದ ಸಮೀಕ್ಷಾ ಫಲಿತಾಂಶ ಉಲ್ಟಾ ಹೊಡೆದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಬೆಂಬಲವಿಲ್ಲದೇ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿತ್ತು.

Exit Poll of Polls: ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಗೆಲುವುExit Poll of Polls: ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಇನ್ನು, ಹರಿಯಾಣದಲ್ಲಂತೂ, ಕಾಂಗ್ರೆಸ್ ಡಬಲ್ ಡಿಜಿಟ್ ಕ್ರಾಸ್ ಮಾಡುವುದು ಕಷ್ಟ ಎಂದು ಹೇಳಲಾಗಿತ್ತು. ಇಲ್ಲೂ, ಮತಗಟ್ಟೆ ಸಮೀಕ್ಷೆ ತಲೆಕೆಳಗಾಗಿದೆ. ಹಾಗಿದ್ದರೆ, ಸಮೀಕ್ಷೆ ಹೇಳಿದ್ದೇನು, ನೈಜ ಫಲಿತಾಂಶ ಬಂದಿದ್ದೇನು? ಒಂದು ನೋಟ..

ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ

ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ

ಮಹಾರಾಷ್ಟ್ರ ಚುನಾವಣಾ ಫಲಿತಾಂಶ
ಒಟ್ಟು ಸ್ಥಾನಗಳು: 288
ಬಿಜೆಪಿ: 105
ಶಿವಸೇನೆ: 56
ಕಾಂಗ್ರೆಸ್: 44
ಎನ್ಸಿಪಿ: 54
ಇತರರು: 29

ಹರ್ಯಾಣ ಅಸೆಂಬ್ಲಿ ಚುನಾವಣೆ

ಹರ್ಯಾಣ ಅಸೆಂಬ್ಲಿ ಚುನಾವಣೆ

ಹರ್ಯಾಣ ಅಸೆಂಬ್ಲಿ ಚುನಾವಣೆ
ಒಟ್ಟು ಸ್ಥಾನಗಳು: 90
ಬಿಜೆಪಿ: 40
ಕಾಂಗ್ರೆಸ್: 31
ಜೆಜೆಪಿ: 10
ಇತರರು: 09

ಉಚ್ಚಾಟಿಸಿದ ಪಕ್ಷವನ್ನೇ ಮುಗಿಸಿದ ಪ್ರಳಯಾಂತಕ ಯುವ ರಾಜಕಾರಣಿಉಚ್ಚಾಟಿಸಿದ ಪಕ್ಷವನ್ನೇ ಮುಗಿಸಿದ ಪ್ರಳಯಾಂತಕ ಯುವ ರಾಜಕಾರಣಿ

ಮತಗಟ್ಟೆ ಸಮೀಕ್ಷೆ - ಮಹಾರಾಷ್ಟ್ರ - 1

ಮತಗಟ್ಟೆ ಸಮೀಕ್ಷೆ - ಮಹಾರಾಷ್ಟ್ರ - 1

ಮತಗಟ್ಟೆ ಸಮೀಕ್ಷೆ - ಮಹಾರಾಷ್ಟ್ರ
ಇಂಡಿಯಾ ಟುಡೇ-ಏಕ್ಸಿಸ್ - ಮೈ ಇಂಡಿಯಾ: ಬಿಜೆಪಿ ಮೈತ್ರಿಕೂಟ 194+, ಕಾಂಗ್ರೆಸ್ ಮೈತ್ರಿಕೂಟ 72-90
ಟೈಮ್ಸ್ ನೌ: ಬಿಜೆಪಿ ಮೈತ್ರಿಕೂಟ 230+, ಕಾಂಗ್ರೆಸ್ ಮೈತ್ರಿಕೂಟ 48+
ರಿಪಬ್ಲಿಕ್ ಟಿವಿ - ಜನ್ ಕೀ ಬಾತ್: ಬಿಜೆಪಿ ಮೈತ್ರಿಕೂಟ 223+, ಕಾಂಗ್ರೆಸ್ ಮೈತ್ರಿಕೂಟ 54+

ಮತಗಟ್ಟೆ ಸಮೀಕ್ಷೆ - ಮಹಾರಾಷ್ಟ್ರ - 2

ಮತಗಟ್ಟೆ ಸಮೀಕ್ಷೆ - ಮಹಾರಾಷ್ಟ್ರ - 2

ಮತಗಟ್ಟೆ ಸಮೀಕ್ಷೆ - ಮಹಾರಾಷ್ಟ್ರ - 2
ಎಬಿಪಿ - ಸಿವೋಟರ್ : ಬಿಜೆಪಿ ಮೈತ್ರಿಕೂಟ 204+, ಕಾಂಗ್ರೆಸ್ ಮೈತ್ರಿಕೂಟ 69, ಇತರರು 15
ನ್ಯೂಸ್ ಎಕ್ಸ್ - ಪೋಲ್ ಸ್ಟಾರ್: ಬಿಜೆಪಿ ಮೈತ್ರಿಕೂಟ 200+, ಕಾಂಗ್ರೆಸ್ ಮೈತ್ರಿಕೂಟ 80+, ಇತರರು 6-10
ಟಿವಿ 9 - ಸಿಸಿರೋ: ಬಿಜೆಪಿ ಮೈತ್ರಿಕೂಟ 197+, ಕಾಂಗ್ರೆಸ್ ಮೈತ್ರಿಕೂಟ 75+, ಇತರರು 16

ಮತಗಟ್ಟೆ ಸಮೀಕ್ಷೆ - ಹರಿಯಾಣ

ಮತಗಟ್ಟೆ ಸಮೀಕ್ಷೆ - ಹರಿಯಾಣ

ಮತಗಟ್ಟೆ ಸಮೀಕ್ಷೆ - ಹರಿಯಾಣ
ನ್ಯೂಸ್ ಎಕ್ಸ್, ಏಕ್ಸಿಸ್ ಮೈ ಇಂಡಿಯಾ: ಬಿಜೆಪಿ 77, ಕಾಂಗ್ರೆಸ್ 11, ಇತರರು 02
ಎಬಿಪಿ - ಸಿವೋಟರ್ : ಬಿಜೆಪಿ ಮೈತ್ರಿಕೂಟ 204+, ಕಾಂಗ್ರೆಸ್ ಮೈತ್ರಿಕೂಟ 69, ಇತರರು 15
ನ್ಯೂಸ್ 18: ಬಿಜೆಪಿ 75, ಕಾಂಗ್ರೆಸ್ 10, ಇತರರು 5
ರಿಪಬ್ಲಿಕ್ ಟಿವಿ - ಜನ್ ಕೀ ಬಾತ್: ಬಿಜೆಪಿ 57+, ಕಾಂಗ್ರೆಸ್ 17+, ಇತರರು 16

English summary
Maharasthra And Haryana Assembly Elections 2019 Result Vs Exit Poll Result Of Various Media House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X