ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಾರವಾದಿಗಳ ಬಂಧನ: ಮೋದಿ ಹತ್ಯೆ ಸಂಚಿನ ಸಾಕ್ಷ್ಯ ಇದೆ ಎಂದ ಪೊಲೀಸರು

By Manjunatha
|
Google Oneindia Kannada News

ಮುಂಬೈ, ಆಗಸ್ಟ್ 31: ಹಲವು ವಿಚಾರವಾದಿಗಳನ್ನು ಬಂಧಿಸಿದ್ದ ಮಹಾರಾಷ್ಟ್ರ ಪೊಲೀಸ್ ಇಲಾಖೆ ತನ್ನ ಕಾರ್ಯವನ್ನು ಸಮರ್ಥಿಸಿಕೊಂಡಿದ್ದು, ನಮ್ಮ ಬಳಿ ದೋಷಾರೋಪಣೆ ಹೊರಿಸುವ ಸಾಕ್ಷ್ಯಗಳಿವೆ ಎಂದಿದೆ.

ಮಾವೋವಾದಿಗಳು ಸರ್ಕಾರಕ್ಕೆ ತೊಂದರೆ ತಂದೊಡ್ಡುವ ಅಥವಾ ಸರ್ಕಾರಕ್ಕೆ ಹಾನಿ ಮಾಡುವ ಉದ್ದೇಶ ಹೊಂದಿದ್ದರು ಎಂಬುದು ವಿಚಾರವಾದಿಗಳ ಮನೆಯ ಮೇಲೆ ದಾಳಿ ನಡೆಸಿದಾಗ ನಮಗೆ ಗೊತ್ತಾಗಿದೆ ಎಂದು ಮಹಾರಾಷ್ಟ್ರ ಪೊಲೀಸ್ ಎಡಿಜಿ ಪರಂಬೀರ್ ಸಿಂಗ್ ಹೇಳಿದ್ದಾರೆ.

ವಿಚಾರವಾದಿಗಳ ಬಂಧಿಸಿದ ಕ್ರಮ ಪ್ರಶ್ನಿಸಿ, ಮಹಾ ಸರ್ಕಾರಕ್ಕೆ ನೋಟಿಸ್ವಿಚಾರವಾದಿಗಳ ಬಂಧಿಸಿದ ಕ್ರಮ ಪ್ರಶ್ನಿಸಿ, ಮಹಾ ಸರ್ಕಾರಕ್ಕೆ ನೋಟಿಸ್

ಮಹಾರಾಷ್ಟ್ರ ಪೊಲೀಸರು ಹೈದರಾಬಾದ್, ಚತ್ತೀಸ್ಘಡ್, ಮುಂಬೈ, ದೆಹಲಿ ಇನ್ನೂ ಹಲವೆಡೆ ದಾಳಿ ನಡೆಸಿ ಐದು ಮಂದಿ ವಿಚಾರವಾದಿಗಳನ್ನು ಬಂಧಿಸಿದ್ದರು. ಈ ಬಗ್ಗೆ ದೇಶದಾದ್ಯಂತ ಭಾರಿ ವಿರೋಧವೂ ವ್ಯಕ್ತವಾಗಿತ್ತು.

ಐದು ವಿಚಾರವಾದಿಗಳ ಬಂಧನ

ಐದು ವಿಚಾರವಾದಿಗಳ ಬಂಧನ

ಆಂಧ್ರ ಪ್ರದೇಶದ ಕ್ರಾಂತಿಕಾರಿ ಕವಿ ವರವರ ರಾವ್. ವಕೀಲೆ, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರಧ್ವಜ್. ವಿರ್ನೋನ್ ಗೋನ್ಸಾಲ್ವೀಸ್, ಅರುಣ್ ಫರೇರಿಯಾ, ಗೌತಮ್ ನಾಲ್ವಾಕ್ಕಾ ಅವರುಗಳನ್ನು ಪೊಲೀಸರು ಆಗಸ್ಟ್‌ 28ರಂದು ಬಂಧಿಸಿದ್ದರು.

ಎಲ್ಲ ಬಂಧಿತರನ್ನು ಗೃಹ ಬಂಧನಕ್ಕೆ

ಎಲ್ಲ ಬಂಧಿತರನ್ನು ಗೃಹ ಬಂಧನಕ್ಕೆ

ಬಂಧಿತರಾಗಿದ್ದ ಎಲ್ಲ ವಿಚಾರವಾದಿಗಳನ್ನು ಗೃಹ ಬಂಧನಕ್ಕೆ ಒಳಪಡಿಸಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಸುಪ್ರೀಂಕೋರ್ಟ್‌ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದು ಮಹಾರಾಷ್ಟ್ರ ಪೊಲೀಸರಿಗೆ ಆದ ಹಿನ್ನೆಡೆ ಎನ್ನಲಾಗಿದೆ.

ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?

ಮಹತ್ವದ ಸಾಕ್ಷ್ಯ ವಶಪಡಿಸಿಕೊಂಡಿರುವ ಪೊಲೀಸರು

ಮಹತ್ವದ ಸಾಕ್ಷ್ಯ ವಶಪಡಿಸಿಕೊಂಡಿರುವ ಪೊಲೀಸರು

ಮಹಾರಾಷ್ಟ್ರ ಪೊಲೀಸರು ಹೇಳುವ ಪ್ರಕಾರ ಬಂಧಿಸಿರುವ ಕಬೀರ್ ಕಲಾ ಮಂಚ್‌ ಸಂಘಕ್ಕೆ ಸದಸ್ಯರಾಗಿದ್ದಾರೆ. ದಾಳಿಯ ಸಮಯ ಪೊಲೀಸರಿಗೆ ಮಹತ್ವದ ಸಾಕ್ಷ್ಯಗಳು ಸಿಕ್ಕಿವೆ. ಬಂಧಿತರ ಲ್ಯಾಪ್‌ಟಾಪ್, ಮೊಬೈಲ್‌ಗಳ ಪಾಸ್‌ವರ್ಡ್‌ಗಳನ್ನು ಬ್ರೇಕ್ ಮಾಡಿರುವ ಪೊಲೀಸರು. ಬಂಧಿತ ಹೋರಾಟಗಾರರು ನಿಷೇಧಿತ ಸಿಪಿಐಎಂ ಜೊತೆಗೆ ಒಡನಾಟ ಇರಿಸಿಕೊಂಡಿರುವುದಕ್ಕೆ ಸಾಕ್ಷ್ಯಿಯಾಗಿ ಹಲವು ಇ-ಮೇಲ್‌ಗಳಿವೆ ಎಂದು ಹೇಳಿದ್ದಾರೆ.

ಮಾವೋವಾದಿಗಳ ಜತೆ ನಂಟು: ಬಂಧಿತ ವಿಚಾರವಾದಿಗಳಿಗೆ ಸೆ.6ರ ವರೆಗೆ ಗೃಹ ಬಂಧನಮಾವೋವಾದಿಗಳ ಜತೆ ನಂಟು: ಬಂಧಿತ ವಿಚಾರವಾದಿಗಳಿಗೆ ಸೆ.6ರ ವರೆಗೆ ಗೃಹ ಬಂಧನ

'ರಾಜೀವ್ ಗಾಂಧಿ ಮಾದರಿಯಲ್ಲಿ ಮೋದಿ ರಾಜ್ ಅಂತ್ಯ'

'ರಾಜೀವ್ ಗಾಂಧಿ ಮಾದರಿಯಲ್ಲಿ ಮೋದಿ ರಾಜ್ ಅಂತ್ಯ'

ಬಂಧಿತ ಹೋರಾಟಗಾರರೊಬ್ಬರಿಂದ ವಶಪಡಿಸಿಕೊಂಡ ಪತ್ರವೊಂದನ್ನು ತೋರಿಸಿದ ಪೊಲೀಸ್ ಎಡಿಜಿ, ಆ ಪತ್ರದಲ್ಲಿ 'ಮೋದಿ ರಾಜ್' ಅನ್ನು 'ರಾಜೀವ್ ಗಾಂಧಿ ಮಾದರಿ'ಯಲ್ಲಿ ಅಂತ್ಯ ಮಾಡಬೇಕು ಎಂದು ಉಲ್ಲೇಖವಿರುವುದನ್ನು ತೋರಿಸಿದರು. ಅದೇ ಪತ್ರದಲ್ಲಿ 'ಗ್ರೆನೆಡ್ ಲಾಂಚರ್ ಖರೀದಿಗೆ ಹಣ ಸಂಗ್ರಹಣೆ ಮಾಡುವ ಬಗ್ಗೆಯೂ ಬರೆಯಲಾಗಿದೆ ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್‌ ಆಕ್ಷೇಪ

ಸುಪ್ರೀಂಕೋರ್ಟ್‌ ಆಕ್ಷೇಪ

ಮಹಾರಾಷ್ಟ್ರ ಪೊಲೀಸರು ವಿಚಾರವಾದಿಗಳನ್ನು ಬಂಧಿಸಿದ ಬಗ್ಗೆ ಆಕ್ಷೇಪ ಎತ್ತಿದ್ದ ಸುಪ್ರೀಂಕೋರ್ಟ್‌ 'ಭಿನ್ನಾಭಿಪ್ರಾಯ ಸಮಾಜದಲ್ಲಿ ಸಮತೋಲನ ಕಾಪಾಡುತ್ತದೆ, ಅದನ್ನು ಅದುಮಿಡುವ ಯತ್ನ ಮಾಡಿದರೆ ಸ್ಫೋಟಗೊಳ್ಳುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಸೆಪ್ಟೆಂಬರ್ 6ರಂದು ಸುಪ್ರೀಕೋರ್ಟ್‌ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ನಕ್ಸಲ್ ಪರ ಚಿಂತಕರ ಬಂಧನ ಈಗ, ಪಟ್ಟಿ ಸಿದ್ಧವಾಗಿದ್ದು ಯುಪಿಎ ಕಾಲದಲ್ಲಿನಕ್ಸಲ್ ಪರ ಚಿಂತಕರ ಬಂಧನ ಈಗ, ಪಟ್ಟಿ ಸಿದ್ಧವಾಗಿದ್ದು ಯುಪಿಎ ಕಾಲದಲ್ಲಿ

English summary
Maharashtra Police said we have enough evidence to charge sheet the arrested 5 activists. Maharashtra Police ADG shows a seized letter in that written that have to end 'Modi Raj' in 'Rajeev Gandhi-like'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X