ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್‌ ನಿಷೇಧದಿಂದ 15,000 ಕೋಟಿ ರೂ. ನಷ್ಟ

By Sachhidananda Acharya
|
Google Oneindia Kannada News

ಮುಂಬೈ, ಜೂನ್ 26: ಮರು ಸಂಸ್ಕರಣೆ ಮಾಡಲು ಸಾಧ್ಯವಾಗದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌, ಥರ್ಮೊಕೋಲ್‌ ಗಳ ಬಳಕೆ ಹಾಗೂ ಮಾರಾಟವನ್ನು ಮಹಾರಾಷ್ಟ್ರ ಸರಕಾರ ಶನಿವಾರದಿಂದ ನಿಷೇಧಿಸಿತ್ತು.

ಈ ನಿಷೇಧದಿಂದ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕಾ ಕಂಪನಿಗಳು 15,000 ಕೋಟಿ ರೂ. ನಷ್ಟ ಅನುಭವಿಸಲಿದ್ದು, ಸುಮಾರು 3 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಪೂರ್ಣ ನಿಷೇಧ, ಕರ್ನಾಟಕದಲ್ಲಿ ಯಾವಾಗ?ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಪೂರ್ಣ ನಿಷೇಧ, ಕರ್ನಾಟಕದಲ್ಲಿ ಯಾವಾಗ?

"ಮಹಾರಾಷ್ಟ್ರ ಸರಕಾರದ ನಿರ್ಧಾರದ ಬೆನ್ನಿಗೆ 2,500 ಉತ್ಪಾದಕರು ಒಕ್ಕೂಟದ ಸದಸ್ಯತ್ವದಿಂದ ದೂರ ಸರಿದಿದ್ದಾರೆ," ಎಂದು ಭಾರತೀಯ ಪ್ಲಾಸ್ಟಿಕ್‌ ಬ್ಯಾಗ್‌ ಉತ್ಪಾದಕರ ಒಕ್ಕೂಟದ ಪ್ರಧಾನ ಕಾರ‍್ಯದರ್ಶಿ ನೀಮಿತ್‌ ಪುನಾಮಿಯಾ ತಿಳಿಸಿದ್ದಾರೆ.

Maharashtra Plastic Ban To Loss Of 15,000 Crore

ಮಹಾರಾಷ್ಟ್ರ ಸರಕಾರದ ನಿರ್ಧಾರದಿಂದ ಪ್ಲಾಸ್ಟಿಕ್‌ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದು ರಾಜ್ಯದ ಜಿಡಿಪಿ ಮೇಲೂ ಪರಿಣಾಮ ಬೀರಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ.

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ, ಆದೇಶ ಉಲ್ಲಂಘಿಸಿದರೆ ಜೈಲುಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ, ಆದೇಶ ಉಲ್ಲಂಘಿಸಿದರೆ ಜೈಲು

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್ ನಿಷೇಧ ಉಲ್ಲಂಘಿಸುವವರಿಗೆ 5,000 ರೂಪಾಯಿ ದಂಡ, ಎರಡನೇ ಬಾರಿ ಉಲ್ಲಂಘಿಸುವವರಿಗೆ 10,000 ರೂಪಾಯಿ ದಂಡ ಮತ್ತು ಮೂರನೇ ಬಾರಿ ನಿಷೇಧ ಮೀರಿ ಪ್ಲಾಸ್ಟಿಕ್ ಬಳಸಿದರೆ 25,000 ರೂಪಾಯಿ ದಂಡ ಮತ್ತು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

English summary
Plastic ban, including carry-bags and thermocol by the Maharashtra government, will result in loss of up to Rs. 15,000 crore and nearly 3 lakh job, says the plastic manufacturing industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X