ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ವೋಲ್ವೋ ದುರಂತ: 7 ಶಾಲಾ ಮಕ್ಕಳ ಸಾವು

By Srinath
|
Google Oneindia Kannada News

Maharashtra Kolhapur Volvo buses accident 7 school children dead,
ಕೊಲ್ಹಾಪುರ, ಡಿ.7- ಆಂಧ್ರದಲ್ಲಿ ಮೆಹಬೂಬ್‌ ನಗರ, ಹಾವೇರಿಯಲ್ಲಿ ವೋಲ್ವೋ ಬಸ್ ದುರಂತಗಳ ನಂತರ ಮತ್ತೊಂದು ದುರಂತ ಸಂಭವಿಸಿದೆ. ಮಿನಿ ಬಸ್ ಮತ್ತು ವೋಲ್ವೋ ಬಸ್ಸುಗಳ ಮಧ್ಯೆ ಶನಿವಾರ ಬೆಳಗಿನ ಜಾವ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 7 ಮಂದಿ ಮುಗ್ಧ ಶಾಲಾ ಮಕ್ಕಳು ಅಸುನೀಗಿದ್ದಾರೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.

ಮೃತರನ್ನು ಕೊಲ್ಹಾಪುರ ಮೂಲದ ಅಕ್ಷಯ್ ಪಾಟೀಲ್, ವಲ್ಲಭ್ ಕಾಂಬ್ಲೆ, ಗಣೇಶ್ ಕುಮಾರ್, ಸೂರಜ್ ಪಾಟೀಲ್, ಆಕಾಶ್, ಪಂಕಜ್ ಕುಮಾರ್ ಮತ್ತು ಮಿನಿ ಬಸ್ ಚಾಲಕ ಪ್ರತಾಪ್ ಎಂದು ಗುರುತಿಸಲಾಗಿದೆ. ಕೊಲ್ಹಾಪುರದಿಂದ ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿದ್ದರು.

ಮಹಾರಾಷ್ಟ್ರದ ತುಳಜಾಪುರ ಬಳಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ಸಿಗೆ ವೇಗವಾಗಿ ಬಂದ ವೋಲ್ವೋ ಬಸ್ ಅಪ್ಪಳಿಸಿ ಈ ದುರಂತ ಸಂಭವಿಸಿದೆ. ವೋಲ್ವೋ ಬಸ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.

English summary
Maharashtra Kolhapur Volvo buses accident 7 school children dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X