ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Exit Poll ಮಹಾರಾಷ್ಟ್ರ ಮತ್ತು ಹರಿಯಾಣಗಳಲ್ಲಿ ಮತ್ತೆ ಬಿಜೆಪಿ ಅಲೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆ ಕುತೂಹಲದ ಘಟ್ಟಕ್ಕೆ ಕಾಲಿರಿಸಿದೆ. ಸತತ ಪ್ರಚಾರ ಕಸರತ್ತುಗಳ ಮೂಲಕ ಎರಡೂ ರಾಜ್ಯಗಳಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಸೋಮವಾರ ನಡೆದ ಮತದಾನಕ್ಕೆ ತೀರಾ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾನೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ಮತದಾರರ ಅಭಿಪ್ರಾಯ ಏನು ಎಂಬ ಲೆಕ್ಕಾಚಾರ ಆರಂಭವಾಗಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಬಾರಿಯ ಚುನಾವಣೆಯ ಬಳಿಕ ಮತದಾರ ಈ ಪಕ್ಷವನ್ನೇ ಮರಳಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಒಲವು ತೋರಿಸುತ್ತಾನೆಯೇ ಅಥವಾ ಬದಲಾವಣೆ ಬಯಸಿ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತಾನೆಯೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರಕಲು ಅ.24ರಂದು ಪ್ರಕಟವಾಗುವ ಫಲಿತಾಂಶದವರೆಗೆ ಕಾಯಬೇಕು.

Maharashtra & Haryana Election Exit Poll Results 2019 Live Updates in Kannada

ನರೇಂದ್ರ ಮೋದಿ ಸರ್ಕಾರ ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದು. ಅತ್ತ ಲೋಕಸಭೆ ಚುನಾವಣೆಯ ಬಳಿಕ ತನ್ನ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್‌ಗೆ ಕೂಡ ಹೊಸ ಅಗ್ನಿಪರೀಕ್ಷೆ. ಇದರಲ್ಲಿ ಜನರ ತೀರ್ಪು ಸ್ಪಷ್ಟವಾಗಿ ಪ್ರಕಟವಾಗುವ ಮುನ್ನ ನಡೆದ ಸಮೀಕ್ಷೆಗಳು ವಿವಿಧ ಲೆಕ್ಕಾಚಾರಗಳನ್ನು ಮುಂದಿಡುತ್ತಿವೆ. ಖಾಸಗಿ ವಾಹಿನಿಗಳು ಮತ್ತು ಚುನಾವಣಾ ತಜ್ಞರನ್ನು ಒಳಗೊಂಡ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳಲ್ಲಿನ ಫಲಿತಾಂಶ ಏನಿರಬಹುದು? ನಿರಂತರ ಅಪ್‌ಡೇಟ್‌ಗಳನ್ನು ಇಲ್ಲಿ ಪಡೆಯಿರಿ.

Newest FirstOldest First
7:40 PM, 21 Oct

ಸಮೀಕ್ಷೆಗಳ ಸಮೀಕ್ಷೆಯಲ್ಲಿ (ಪೋಲ್ ಆಫ್ ಪೋಲ್) ಹರಿಯಾಣದಲ್ಲಿ ಬಿಜೆಪಿ 63, ಕಾಂಗ್ರೆಸ್ 16 ಮತ್ತು ಇತರೆ 11 ಕ್ಷೇತ್ರಗಳಲ್ಲಿ ಜಯಗಳಿಸಲಿದೆ.
7:39 PM, 21 Oct

ಸಮೀಕ್ಷೆಗಳ ಸಮೀಕ್ಷೆಯಲ್ಲಿ (ಪೋಲ್ ಆಫ್ ಫೋಲ್) ಮಹಾರಾಷ್ಟ್ರದಲ್ಲಿ ಬಿಜೆಪಿ 213, ಕಾಂಗ್ರೆಸ್‌ 61 ಮತ್ತು ಇತರೆ ಪಕ್ಷಗಳು 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.
7:33 PM, 21 Oct

ನ್ಯೂಸ್ ಎಕ್ಸ್-ಪೋಲ್‌ಸ್ಟ್ರಾಟ್ ನಡೆಸಿದ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ 188-200 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ ಮೈತ್ರಿಕೂಟ 74-89 ಹಾಗೂ ಇತರೆ 6-10 ಕ್ಷೇತ್ರಗಳಲ್ಲಿ ಗೆಲ್ಲಲಿದೆ.
7:06 PM, 21 Oct

ಎಬಿಪಿ-ಸಿ ವೋಟರ್ (ಹರಿಯಾಣ ಎಕ್ಸಿಟ್ ಪೋಲ್). ಬಿಜೆಪಿ 72, ಕಾಂಗ್ರೆಸ್ 8, ಇತರೆ 10 ಕ್ಷೇತ್ರಗಳು.
7:04 PM, 21 Oct

ಟಿವಿ9-ಭರತವರ್ಷ್ (ಹರಿಯಾಣ ಎಕ್ಸಿಟ್ ಪೋಲ್). ಬಿಜೆಪಿ-47, ಕಾಂಗ್ರೆಸ್- 23, ಇತರೆ 20 ಕ್ಷೇತ್ರಗಳು.
7:03 PM, 21 Oct

ನ್ಯೂಸ್ ಎಕ್ಸ್ (ಹರಿಯಾಣ ಎಕ್ಸಿಟ್ ಪೋಲ್). ಬಿಜೆಪಿ-77, ಕಾಂಗ್ರೆಸ್-11, ಇತರೆ 2 ಕ್ಷೇತ್ರಗಳು.
7:02 PM, 21 Oct

ರಿಪಬ್ಲಿಕ್ ಟಿವಿ-ಜನ್‌ಕಿ ಬಾತ್ (ಹರಿಯಾಣ ಎಕ್ಸಿಟ್ ಪೋಲ್) ಬಿಜೆಪಿ- 57, ಕಾಂಗ್ರೆಸ್ 17 ಮತ್ತು ಇತರೆ 16 ಕ್ಷೇತ್ರಗಳು.
Advertisement
7:01 PM, 21 Oct

ಟೈಮ್ಸ್ ನೌ ಸಮೀಕ್ಷೆಯನ್ವಯ ಹರಿಯಾಣದಲ್ಲಿ ಬಿಜೆಪಿ 71, ಕಾಂಗ್ರೆಸ್ 11 ಮತ್ತು ಇತರರು 8 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ.
7:00 PM, 21 Oct

ನ್ಯೂಸ್ 18-ಇಪ್ಸೋಸ್ ಸಮೀಕ್ಷೆ ಪ್ರಕಾರ ಬಿಜೆಪಿ 75, ಕಾಂಗ್ರೆಸ್ ಮೈತ್ರಿಪಕ್ಷಗಳು 10 ಮತ್ತು ಇತರರು 5 ಕ್ಷೇತ್ರಗಳಲ್ಲಿ ಗೆಲ್ಲಲಿದ್ದಾರೆ.
6:58 PM, 21 Oct

ಇಂಡಿಯಾ ನ್ಯೂಸ್-ಪೋಲ್ ಸ್ಟಾರ್ ಸಮೀಕ್ಷೆ ಪ್ರಕಾರ ಬಿಜೆಪಿ 75-80 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ 9-12 , ಇತರರು 1 ಕ್ಷೇತ್ರಗಳಲ್ಲಿ ಜಯಗಳಿಸಲಿದೆ.
6:55 PM, 21 Oct

ಹರಿಯಾಣದಲ್ಲಿ 90 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಇಲ್ಲಿಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ.
6:54 PM, 21 Oct

ಟಿವಿ9-ಸಿಸೆರೋ ಸಮೀಕ್ಷೆಯ ಅನ್ವಯ ಬಿಜೆಪಿ-ಸೇನಾ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ 197, ಕಾಂಗ್ರೆಸ್-ಎನ್‌ಸಿಪಿ 75 ಮತ್ತು ಇತರೆ ಪಕ್ಷಗಳು 16 ಕ್ಷೇತ್ರಗಳಲ್ಲಿ ಜಯಗಳಿಸಲಿವೆ.
Advertisement
6:53 PM, 21 Oct

ಎಬಿಪಿ-ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ ಮೈತ್ರಿಕೂಟ 204, ಕಾಂಗ್ರೆಸ್-ಎನ್‌ಸಿಪಿ 69, ಮತ್ತು ಇತರರು 15 ಕ್ಷೇತ್ರಗಳಲ್ಲಿ ಗೆಲ್ಲಲಿದೆ.
6:52 PM, 21 Oct

ರಿಪಬ್ಲಿಕ್-ಜನ್‌ಕಿ ಬಾತ್ ನಡೆಸಿದ ಸಮೀಕ್ಷೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮಿತ್ರಪಕ್ಷಗಳು 223, ಕಾಂಗ್ರೆಸ್-ಎನ್‌ಸಿಪಿ 54 ಮತ್ತು ಇತರೆ ಪಕ್ಷಗಳು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಲಾಗಿದೆ.
6:50 PM, 21 Oct

ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ 230 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್-ಎನ್‌ಸಿಪಿ 48 ಹಾಗೂ ಇತರರು 10 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ.
6:39 PM, 21 Oct

ಬಿಜೆಪಿ-ಶಿವಸೇನಾ ಮೈತ್ರಿಕೂಟ 243, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ 41, ಇತರರು 4 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ ಎಂದು ನ್ಯೂಸ್ 18 ಸಮೀಕ್ಷೆ ಹೇಳಿದೆ.
6:37 PM, 21 Oct

ನ್ಯೂಸ್ 18-ಇಪ್ಸೋಸ್ ಮತದಾನೋತ್ತರ ಸಮೀಕ್ಷೆಯು ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದೆ.
6:35 PM, 21 Oct

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ 166-194 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಇಂಡಿಯಾ ಟುಡೆ ಹೇಳಿದೆ.
6:29 PM, 21 Oct

ಬಿಜೆಪಿ+ ಮೈತ್ರಿಕೂಟ 166-194, ಕಾಂಗ್ರೆಸ್+ ಮೈತ್ರಿಕೂಟ 72-90, ಇತರೆ+ ಮೈತ್ರಿಕೂಟ 22-34 ಕ್ಷೇತ್ರಗಳಲ್ಲಿ ಗೆಲ್ಲಲಿವೆ ಎಂದು ಇಂಡಿಯಾ ಟುಡೆ ಸಮೀಕ್ಷೆ ಹೇಳಿದೆ.
6:29 PM, 21 Oct

ಬಿಜೆಪಿ 109- 123, ಶಿವಸೇನಾ 57-70, ಕಾಂಗ್ರೆಸ್ 32-40, ಎನ್‌ಸಿಪಿ40-50, ವಿಬಿಎ 0-2, ಇತರರು 22-32 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿದೆ ಎಂದು ಇಂಡಿಯಾ ಟುಡೆ ಹೇಳಿದೆ.
6:29 PM, 21 Oct

ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳಲ್ಲಿ ಬಹುಮತದೊಂದಿಗೆ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ ಹೇಳಿದೆ.
6:11 PM, 21 Oct

ಮಹಾರಾಷ್ಟ್ರ ಮತ್ತು ಹರಿಯಾಣಗಳಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸರ್ಕಾರಗಳು ಬದಲಾಗಲಿವೆಯೇ ಅಥವಾ ಬಿಜೆಪಿಗೇ ಮತದಾರರು ಮತ್ತೆ ಒಲವು ತೋರಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.
5:59 PM, 21 Oct

ಹರಿಯಾಣದಲ್ಲಿ ಇದುವರೆಗೂ ಶೇ 61ರಷ್ಟು ಮತದಾನ ನಡೆದಿರುವುದು ವರದಿಯಾಗಿದೆ.
5:58 PM, 21 Oct

ಮಹಾರಾಷ್ಟ್ರದಲ್ಲಿ ಇದುವರೆಗೂ ಶೇ 55ರಷ್ಟು ಮತದಾನ ನಡೆದಿರುವುದು ವರದಿಯಾಗಿದೆ.
5:52 PM, 21 Oct

ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿವಿಧ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯ ವರದಿಗಳು ಹಂತಹಂತವಾಗಿ ಬಿಡುಗಡೆಯಾಗಲಿವೆ.
5:51 PM, 21 Oct

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ನಡೆಯುತ್ತಿರುವ ಮತದಾನ ಸಂಜೆ 6 ಗಂಟೆಗೆ ಪೂರ್ಣಗೊಳ್ಳಲಿದೆ.
3:53 PM, 21 Oct

ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಖಾಸಗಿ ವಾಹಿನಿಗಳು ವಿವಿಧ ಸಂಸ್ಥೆಗಳೊಂದಿಗೆ ಸೇರಿ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ಮಾಹಿತಿ ಪ್ರಕಟವಾಗಲಿದೆ.

English summary
Maharashtra & Haryana Election 2019 Exit Polls Live Updates in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X