ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ, ಹರ್ಯಾಣದಲ್ಲಿ ಅತಂತ್ರ ಫಲಿತಾಂಶ

|
Google Oneindia Kannada News

ನವದೆಹಲಿ, ಅಕ್ಟೋಬರ್ 24: ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು(ಅಕ್ಟೋಬರ್ 24) ಪ್ರಕಟಗೊಳ್ಳಲಿದ್ದು, ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ.

ಅಕ್ಟೋಬರ್ 21 ರಂದು ಮತದಾನ ನಡೆದಿದ್ದು, ಕಳೆದ ಏಪ್ರಿಲ್ ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಮಾಡಿಕೊಂಡಿವೆ. ಎರಡೂ ರಾಜ್ಯಗಳಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯ ಫಲಿತಾಂಶ ಕುತೂಹಲ ಕೆರಳಿಸಿದೆ.

Exit Poll ಮಹಾರಾಷ್ಟ್ರ ಮತ್ತು ಹರಿಯಾಣಗಳಲ್ಲಿ ಮತ್ತೆ ಬಿಜೆಪಿ ಅಲೆExit Poll ಮಹಾರಾಷ್ಟ್ರ ಮತ್ತು ಹರಿಯಾಣಗಳಲ್ಲಿ ಮತ್ತೆ ಬಿಜೆಪಿ ಅಲೆ

Maharashtra, Haryana Assembly Election Results 2019 LIVE

ಬೆಳಿಗ್ಗೆ 8 ಕ್ಕೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಎರಡು ರಾಜ್ಯಗಳಲ್ಲೂ ಬಿಜೆಪಿಯೇ ಬಹುಮತ ಗಳಿಸಲಿದೆ ಎಂದಿವೆ.

ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ಚುನಾವಣಾ ಫಲಿತಾಂಶದ ಕ್ಷಣಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಲೈವ್ ಅಪ್ಡೇಟ್ಸ್ ಗಳ ಮೂಲಕ ನೀಡಲಿದೆ.

Newest FirstOldest First
9:04 PM, 24 Oct

ಹರ್ಯಾಣ ಫಲಿತಾಂಶ : ಬಿಜೆಪಿ 39 (1 ಲೀಡ್), ಹೆಚ್‌ಎಲ್‌ಪಿ 1, ಪಕ್ಷೇತರ 7, ಕಾಂಗ್ರೆಸ್ 31, ಐಎನ್‌ಎಲ್‌ಡಿ 1, ಜೆಜೆಪಿ 10.
9:03 PM, 24 Oct

90 ವಿಧಾನಸಭಾ ಕ್ಷೇತ್ರದ ಹರ್ಯಾಣದಲ್ಲಿ ಬಹುಮತ ಪಡೆಯಲು ಮ್ಯಾಜಿಕ್ ನಂಬರ್ 46. ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದೇ ಅತಂತ್ರ ಫಲಿತಾಂಶ ಬಂದಿದೆ.
9:03 PM, 24 Oct

"ಕಳೆದ 9 ವರ್ಷಗಳಂತೆಯೇ ನಾನು ಇದ್ದೇನೆ. ಈಗಲೂ ಹಾಗೆಯೇ ನೋಡಿಕೊಳ್ಳಿ. ನನ್ನಲ್ಲಿ ಏನೂ ಬದಲಾಗಿಲ್ಲ" ಎಂದು ಆದಿತ್ಯ ಠಾಕ್ರೆ ಹೇಳಿದರು. ವರ್ಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಆದಿತ್ಯ ಠಾಕ್ರೆ 70 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
9:01 PM, 24 Oct

"ನಮಗೆ ಇನ್ನಷ್ಟು ಸಮಯ ಸಿಕ್ಕಿದ್ದರೆ ಸಂಪೂರ್ಣ ಬಹುಮತ ಸಾಧಿಸುತ್ತಿದ್ದೆವು. ರಾಜ್ಯದಲ್ಲಿ ನಮಗೆ ಪೂರಕವಾದ ವಾತಾವರಣ ನಿರ್ಮಾಣವಾಗಿತ್ತು. ಜನರು ಕಾಂಗ್ರೆಸ್ ಜೊತೆ ಸೇರಿ ಸ್ಥಿರ ಸರ್ಕಾರ ರಚನೆಯಾಗುವುದನ್ನು ಬಯಸಿದ್ದಾರೆ" ಎಂದು ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಭೂಪಿಂದರ್ ಸಿಂಗ್ ಹೂಡಾ ಹೇಳಿದರು.
8:55 PM, 24 Oct

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ
8:51 PM, 24 Oct

ಹರ್ಯಾಣ ವಿಧಾಸನಸಭೆ ಚುನಾವಣೆ ಚಿತ್ರಣ ಅಂತಿಮ. 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಮುನ್ನಡೆ
8:48 PM, 24 Oct

ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, "ಮುಂದಿನ 5 ವರ್ಷಗಳಲ್ಲಿ ಎರಡು ರಾಜ್ಯಗಳು ಹೊಸ ಮಾದರಿಯ ಅಭಿವೃದ್ಧಿ ಪರ್ವಕ್ಕೆ ಸಾಕ್ಷಿಯಾಗಲಿವೆ" ಎಂದು ಹೇಳಿದರು.
Advertisement
8:39 PM, 24 Oct

ಮಹಾರಾಷ್ಟ್ರ ವಿಧಾನಸಭೆ : ಬಿಜೆಪಿ 84 (21 ಲೀಡ್), ಕಾಂಗ್ರೆಸ್ 35 (9 ಲೀಡ್), ಶಿವಸೇನೆ 53 (3), ಎನ್‌ಸಿಪಿ 46 (ಲೀಡ್ 8).
8:23 PM, 24 Oct

ಹರ್ಯಾಣದಲ್ಲಿ ಬಿಜೆಪಿ 36 (4 ಮುನ್ನಡೆ), ಕಾಂಗ್ರೆಸ್ 31, ಜೆಪಿಪಿ 10, ಐಎನ್‌ಎಲ್‌ಡಿ 1, ಪಕ್ಷೇತರ 7, ಹೆಚ್‌ಎಲ್‌ಪಿ 1
4:27 PM, 24 Oct

ಮುಂಬೈ ಬಿಜೆಪಿ ಕಚೇರಿಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಸುದ್ದಿಗೋಷ್ಠಿ
4:22 PM, 24 Oct

ಶಿವಸೇನೆ ಸುದ್ದಿಗೋಷ್ಠಿ

ಸಂಜೆ 5 ಗಂಟೆಗೆ ಶಿವಸೇನೆಯಿಂದ ಸುದ್ದಿಗೋಷ್ಠಿ, ಸಂಪೂರ್ಣ ಫಲಿತಾಂಶಕ್ಕೂ ಮುನ್ನವೇ ಸುದ್ದಿಗೋಷ್ಠಿ ನಡೆಸುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
3:35 PM, 24 Oct

ಜನರು ನನಗೆ ಬೆಂಬಲ ನೀಡಿದ್ದಾರೆ ಎಂದು ಭಾವಿಸಿದ್ದೇನೆ, ಜನರ ಬೆಂಬಲಕ್ಕೆ ನಾನು ಋಣಿಯಾಗಿರುತ್ತೇನೆ , ಬಿಜೆಪಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನರ ನನಗೆ ಮತ ಹಾಕಿದ್ದಾರೆ- ಬಬಿತಾ ಫೋಗಟ್ , ದಾದ್ರಿ-ಬಿಜೆಪಿ ಅಭ್ಯರ್ಥಿ
Advertisement
3:20 PM, 24 Oct

ನಾನು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಲ್ಲಾ ಸುಳ್ಳುಸುದ್ದಿ ಎಂದು ಹರ್ಯಾಣಾ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲಾ ತಿಳಿಸಿದ್ದಾರೆ.
3:16 PM, 24 Oct

ಛತ್ತೀಸ್‌ಗಢ ಉಪ ಚುನಾವಣೆ

ಛತ್ತೀಸ್‌ಗಢದ ಚಿತ್ರಕೋಟ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
3:11 PM, 24 Oct

ಒಡಿಶಾ ಉಪ ಚುನಾವಣೆ: ಒಡಿಶಾದ ಬಿಜೇಪುರ ಕ್ಷೇತ್ರದಲ್ಲಿ ಬಿಜು ಜನತಾ ದಳ(ಬಿಜೆಡಿ) ಗೆಲುವು ಸಾಧಿಸಿದೆ.
3:08 PM, 24 Oct

ಹರ್ಯಾಣ: ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕರ್ನಾಲ್ ವಿಧಾನಸಭಾ ಕ್ಷೇತ್ರದಲ್ಲಿ 41,950 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
2:35 PM, 24 Oct

ಹರ್ಯಾಣ ವಿಧಾನಸಭೆ ಚುನಾವಣೆ: ಒಟ್ಟು 90 ಕ್ಷೇತ್ರಗಳ ಪೈಕಿ ಬಿಜೆಪಿಯು 39 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 33 ಕ್ಷೇತ್ರಗಳಲ್ಲಿ ಮುಂದಿದೆ.
2:34 PM, 24 Oct

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಬಿಜೆಪಿ 5 ಕ್ಷೇತ್ರಗಳಲ್ಲಿ ಜಯ, 97 ಕ್ಷೇತ್ರಗಳಲ್ಲಿ ಮುಂದೆ, ಶಿವಸೇನಾ 5 ಕ್ಷೇತ್ರಗಳಲ್ಲಿ ಜಯ, 55 ಕ್ಷೇತ್ರಗಳಲ್ಲಿ ಮುನ್ನಡೆ, ಎನ್‌ಸಿಪಿ 1 ಕ್ಷೇತ್ರದಲ್ಲಿ ಜಯ ಸಾಧಿಸಿದ್ದು 54 ಕ್ಷೇತ್ರಗಳಲ್ಲಿ ಧಾಪುಗಾಲಿಟ್ಟಿದೆ. ಐಎನ್‌ಸಿಯು 44 ಕ್ಷೇತ್ರಗಳನ್ನು ಮುನ್ನಡೆ ಕಾಯ್ದುಕೊಂಡಿದೆ.
2:17 PM, 24 Oct

''ಬಿಜೆಪಿಯು ಕಾಂಗ್ರೆಸ್‌ಗೆ ಸೇರಲು ಬಯಸಿದ್ದ ಸಾಕಷ್ಟು ಸ್ವತಂತ್ರ ಅಭ್ಯರ್ಥಿಗಳ ಮೇಲೆ ಒತ್ತಡ ಹೇರಿದೆ. ನಾನು ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಸ್ವತಂತ್ರ ಅಭ್ಯರ್ಥಿಗಳು ಯಾರದ್ದೇ ಭಯ ಇಲ್ಲದೆ ತಮಗೆ ಬೇಕಾದ ಪಕ್ಷವನ್ನು ಸೇರಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕು''-ಡಿ.ಎಸ್. ಹೂಡಾ
1:50 PM, 24 Oct

ಹರ್ಯಾಣ

ಹರ್ಯಾಣ: ಕಾಂಗ್ರೆಸ್ ವಕ್ತಾರ್ ರಣದೀಪ್ ಸುರ್ಜೇವಾಲಾಗೆ ಅಚ್ಚರಿಯ ಸೋಲು, ಕೆಲವೇ ಮತಗಳ ಅಂತರಿದಿಂದ ಸೋಲು
12:55 PM, 24 Oct

ಹರ್ಯಾಣ

ಹರ್ಯಾಣದಲ್ಲಿ ಬಿಜೆಪಿ ಸೋಲಿನ ನೈತಿಕ ಹೊಣೆ ಹೊತ್ತು ಬಿಜೆಪಿ ಅಧ್ಯಕ್ಷ ಸುಭಾಷ್ ರಾಜೀನಾಮೆ
12:45 PM, 24 Oct

ಅಸ್ಸಾಂನ 4 ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ 3 ರಲ್ಲಿ ಬಿಜೆಪಿ ಮುನ್ನಡೆ.
12:38 PM, 24 Oct

"ನಾನು ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲು ಹೊರಟಿದ್ದೇನೆ. ನಾವು ಬಿಜೆಪಿ ಜೊತೆ ಮೈತ್ರಿ ಮುಂದುವರಿಸುತ್ತೇವೆ" - ಸಂಜಯ್ ರಾವತ್, ಶಿವಸೇನೆ ನಾಯಕ
12:34 PM, 24 Oct

ಹರ್ಯಾಣದ ಎಲ್ಲಾ ಕಾಂಗ್ರೆಸ್ ಶಾಸಕರಿಗೆ ದೆಹಲಿ ಹೈಕಮಾಂಡ್ ನಿಂದ ಬುಲಾವ್
12:32 PM, 24 Oct

ಪಾರ್ಲಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಂಕಜ್ ಮುಂಡೆ ಸೋಲು ಬಹುತೇಕ ಖಚಿತ
12:23 PM, 24 Oct

ಉತ್ತರ ಪ್ರದೇಶದ 11 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 6 ರಲ್ಲಿ ಬಿಜೆಪಿ ಮುನ್ನಡೆ, ಕಾಂಗ್ರೆಸ್ 1, ಎಸ್ಪಿ 2 ಬಿಎಸ್ಪಿ, ಅಪ್ನಾದಳ್ ತಲಾ 1 ಸ್ಥಾನದಲ್ಲಿ ಮುನ್ನಡೆ
12:17 PM, 24 Oct

ಹರ್ಯಾಣ

ಬಿಜೆಪಿಯ ಅಭ್ಯರ್ಥಿಗಳಾದ ಸಂದೀಪ್ ಸಿಂಗ್, ಬಬಿತಾ ಫೋಗಟ್ ಮೂವರೂ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದು ಬಹುತೇಕ ಖಚಿತವಾಗಿದೆ.
11:52 AM, 24 Oct

ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಬಿಜೆಪಿ 102, ಶಿವಸೇನೆ 61 ಕ್ಷೇತ್ರಗಳಲ್ಲಿ ಮುನ್ನಡೆ
11:46 AM, 24 Oct

ಗುಜರಾತ್ ಉಪಚುನಾವಣೆ ಅಲ್ಪೇಶ್ ಠಾಕೂರ್ ಹಿನ್ನಡೆ
11:39 AM, 24 Oct

ಹರ್ಯಾಣದ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಭುಪೀಂದರ್ ಸಿಂಗ್ ಹೂಡಾ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತುಕತೆ ನಡೆಸಿದ್ದಾರೆ.
READ MORE

English summary
Maharashtra, Haryana Assembly Election 2019 Results Live Updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X