ನವದೆಹಲಿ, ಅಕ್ಟೋಬರ್ 24: ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು(ಅಕ್ಟೋಬರ್ 24) ಪ್ರಕಟಗೊಳ್ಳಲಿದ್ದು, ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ.
ಅಕ್ಟೋಬರ್ 21 ರಂದು ಮತದಾನ ನಡೆದಿದ್ದು, ಕಳೆದ ಏಪ್ರಿಲ್ ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಮಾಡಿಕೊಂಡಿವೆ. ಎರಡೂ ರಾಜ್ಯಗಳಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯ ಫಲಿತಾಂಶ ಕುತೂಹಲ ಕೆರಳಿಸಿದೆ.
ಬೆಳಿಗ್ಗೆ 8 ಕ್ಕೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಎರಡು ರಾಜ್ಯಗಳಲ್ಲೂ ಬಿಜೆಪಿಯೇ ಬಹುಮತ ಗಳಿಸಲಿದೆ ಎಂದಿವೆ.
ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ಚುನಾವಣಾ ಫಲಿತಾಂಶದ ಕ್ಷಣಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಲೈವ್ ಅಪ್ಡೇಟ್ಸ್ ಗಳ ಮೂಲಕ ನೀಡಲಿದೆ.
Newest FirstOldest First
9:04 PM, 24 Oct
ಹರ್ಯಾಣ ಫಲಿತಾಂಶ : ಬಿಜೆಪಿ 39 (1 ಲೀಡ್), ಹೆಚ್ಎಲ್ಪಿ 1, ಪಕ್ಷೇತರ 7, ಕಾಂಗ್ರೆಸ್ 31, ಐಎನ್ಎಲ್ಡಿ 1, ಜೆಜೆಪಿ 10.
9:03 PM, 24 Oct
90 ವಿಧಾನಸಭಾ ಕ್ಷೇತ್ರದ ಹರ್ಯಾಣದಲ್ಲಿ ಬಹುಮತ ಪಡೆಯಲು ಮ್ಯಾಜಿಕ್ ನಂಬರ್ 46. ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದೇ ಅತಂತ್ರ ಫಲಿತಾಂಶ ಬಂದಿದೆ.
9:03 PM, 24 Oct
"ಕಳೆದ 9 ವರ್ಷಗಳಂತೆಯೇ ನಾನು ಇದ್ದೇನೆ. ಈಗಲೂ ಹಾಗೆಯೇ ನೋಡಿಕೊಳ್ಳಿ. ನನ್ನಲ್ಲಿ ಏನೂ ಬದಲಾಗಿಲ್ಲ" ಎಂದು ಆದಿತ್ಯ ಠಾಕ್ರೆ ಹೇಳಿದರು. ವರ್ಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಆದಿತ್ಯ ಠಾಕ್ರೆ 70 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
9:01 PM, 24 Oct
"ನಮಗೆ ಇನ್ನಷ್ಟು ಸಮಯ ಸಿಕ್ಕಿದ್ದರೆ ಸಂಪೂರ್ಣ ಬಹುಮತ ಸಾಧಿಸುತ್ತಿದ್ದೆವು. ರಾಜ್ಯದಲ್ಲಿ ನಮಗೆ ಪೂರಕವಾದ ವಾತಾವರಣ ನಿರ್ಮಾಣವಾಗಿತ್ತು. ಜನರು ಕಾಂಗ್ರೆಸ್ ಜೊತೆ ಸೇರಿ ಸ್ಥಿರ ಸರ್ಕಾರ ರಚನೆಯಾಗುವುದನ್ನು ಬಯಸಿದ್ದಾರೆ" ಎಂದು ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಭೂಪಿಂದರ್ ಸಿಂಗ್ ಹೂಡಾ ಹೇಳಿದರು.
8:55 PM, 24 Oct
Union Home Minister & BJP President Amit Shah: In Maharashtra, BJP-Shiv Sena is going to form the govt once again with majority. In Haryana have seen a 3% increase in our vote share since the last time and we have emerged as the largest party there, I thank the people for this. pic.twitter.com/2LFLXtwEiW
ಹರ್ಯಾಣ ವಿಧಾಸನಸಭೆ ಚುನಾವಣೆ ಚಿತ್ರಣ ಅಂತಿಮ. 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಮುನ್ನಡೆ
8:48 PM, 24 Oct
ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, "ಮುಂದಿನ 5 ವರ್ಷಗಳಲ್ಲಿ ಎರಡು ರಾಜ್ಯಗಳು ಹೊಸ ಮಾದರಿಯ ಅಭಿವೃದ್ಧಿ ಪರ್ವಕ್ಕೆ ಸಾಕ್ಷಿಯಾಗಲಿವೆ" ಎಂದು ಹೇಳಿದರು.
8:39 PM, 24 Oct
ಮಹಾರಾಷ್ಟ್ರ ವಿಧಾನಸಭೆ : ಬಿಜೆಪಿ 84 (21 ಲೀಡ್), ಕಾಂಗ್ರೆಸ್ 35 (9 ಲೀಡ್), ಶಿವಸೇನೆ 53 (3), ಎನ್ಸಿಪಿ 46 (ಲೀಡ್ 8).
ಮುಂಬೈ ಬಿಜೆಪಿ ಕಚೇರಿಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಸುದ್ದಿಗೋಷ್ಠಿ
4:22 PM, 24 Oct
ಶಿವಸೇನೆ ಸುದ್ದಿಗೋಷ್ಠಿ
ಸಂಜೆ 5 ಗಂಟೆಗೆ ಶಿವಸೇನೆಯಿಂದ ಸುದ್ದಿಗೋಷ್ಠಿ, ಸಂಪೂರ್ಣ ಫಲಿತಾಂಶಕ್ಕೂ ಮುನ್ನವೇ ಸುದ್ದಿಗೋಷ್ಠಿ ನಡೆಸುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
3:35 PM, 24 Oct
ಜನರು ನನಗೆ ಬೆಂಬಲ ನೀಡಿದ್ದಾರೆ ಎಂದು ಭಾವಿಸಿದ್ದೇನೆ, ಜನರ ಬೆಂಬಲಕ್ಕೆ ನಾನು ಋಣಿಯಾಗಿರುತ್ತೇನೆ , ಬಿಜೆಪಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನರ ನನಗೆ ಮತ ಹಾಕಿದ್ದಾರೆ- ಬಬಿತಾ ಫೋಗಟ್ , ದಾದ್ರಿ-ಬಿಜೆಪಿ ಅಭ್ಯರ್ಥಿ
3:20 PM, 24 Oct
ನಾನು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಲ್ಲಾ ಸುಳ್ಳುಸುದ್ದಿ ಎಂದು ಹರ್ಯಾಣಾ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲಾ ತಿಳಿಸಿದ್ದಾರೆ.
3:16 PM, 24 Oct
ಛತ್ತೀಸ್ಗಢ ಉಪ ಚುನಾವಣೆ
ಛತ್ತೀಸ್ಗಢದ ಚಿತ್ರಕೋಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
3:11 PM, 24 Oct
ಒಡಿಶಾ ಉಪ ಚುನಾವಣೆ: ಒಡಿಶಾದ ಬಿಜೇಪುರ ಕ್ಷೇತ್ರದಲ್ಲಿ ಬಿಜು ಜನತಾ ದಳ(ಬಿಜೆಡಿ) ಗೆಲುವು ಸಾಧಿಸಿದೆ.
3:08 PM, 24 Oct
ಹರ್ಯಾಣ: ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕರ್ನಾಲ್ ವಿಧಾನಸಭಾ ಕ್ಷೇತ್ರದಲ್ಲಿ 41,950 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
2:35 PM, 24 Oct
ಹರ್ಯಾಣ ವಿಧಾನಸಭೆ ಚುನಾವಣೆ: ಒಟ್ಟು 90 ಕ್ಷೇತ್ರಗಳ ಪೈಕಿ ಬಿಜೆಪಿಯು 39 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 33 ಕ್ಷೇತ್ರಗಳಲ್ಲಿ ಮುಂದಿದೆ.
2:34 PM, 24 Oct
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಬಿಜೆಪಿ 5 ಕ್ಷೇತ್ರಗಳಲ್ಲಿ ಜಯ, 97 ಕ್ಷೇತ್ರಗಳಲ್ಲಿ ಮುಂದೆ, ಶಿವಸೇನಾ 5 ಕ್ಷೇತ್ರಗಳಲ್ಲಿ ಜಯ, 55 ಕ್ಷೇತ್ರಗಳಲ್ಲಿ ಮುನ್ನಡೆ, ಎನ್ಸಿಪಿ 1 ಕ್ಷೇತ್ರದಲ್ಲಿ ಜಯ ಸಾಧಿಸಿದ್ದು 54 ಕ್ಷೇತ್ರಗಳಲ್ಲಿ ಧಾಪುಗಾಲಿಟ್ಟಿದೆ. ಐಎನ್ಸಿಯು 44 ಕ್ಷೇತ್ರಗಳನ್ನು ಮುನ್ನಡೆ ಕಾಯ್ದುಕೊಂಡಿದೆ.
2:17 PM, 24 Oct
''ಬಿಜೆಪಿಯು ಕಾಂಗ್ರೆಸ್ಗೆ ಸೇರಲು ಬಯಸಿದ್ದ ಸಾಕಷ್ಟು ಸ್ವತಂತ್ರ ಅಭ್ಯರ್ಥಿಗಳ ಮೇಲೆ ಒತ್ತಡ ಹೇರಿದೆ. ನಾನು ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಸ್ವತಂತ್ರ ಅಭ್ಯರ್ಥಿಗಳು ಯಾರದ್ದೇ ಭಯ ಇಲ್ಲದೆ ತಮಗೆ ಬೇಕಾದ ಪಕ್ಷವನ್ನು ಸೇರಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕು''-ಡಿ.ಎಸ್. ಹೂಡಾ
1:50 PM, 24 Oct
ಹರ್ಯಾಣ
ಹರ್ಯಾಣ: ಕಾಂಗ್ರೆಸ್ ವಕ್ತಾರ್ ರಣದೀಪ್ ಸುರ್ಜೇವಾಲಾಗೆ ಅಚ್ಚರಿಯ ಸೋಲು, ಕೆಲವೇ ಮತಗಳ ಅಂತರಿದಿಂದ ಸೋಲು
12:55 PM, 24 Oct
ಹರ್ಯಾಣ
ಹರ್ಯಾಣದಲ್ಲಿ ಬಿಜೆಪಿ ಸೋಲಿನ ನೈತಿಕ ಹೊಣೆ ಹೊತ್ತು ಬಿಜೆಪಿ ಅಧ್ಯಕ್ಷ ಸುಭಾಷ್ ರಾಜೀನಾಮೆ
12:45 PM, 24 Oct
ಅಸ್ಸಾಂನ 4 ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ 3 ರಲ್ಲಿ ಬಿಜೆಪಿ ಮುನ್ನಡೆ.
12:38 PM, 24 Oct
"ನಾನು ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲು ಹೊರಟಿದ್ದೇನೆ. ನಾವು ಬಿಜೆಪಿ ಜೊತೆ ಮೈತ್ರಿ ಮುಂದುವರಿಸುತ್ತೇವೆ" - ಸಂಜಯ್ ರಾವತ್, ಶಿವಸೇನೆ ನಾಯಕ
12:34 PM, 24 Oct
ಹರ್ಯಾಣದ ಎಲ್ಲಾ ಕಾಂಗ್ರೆಸ್ ಶಾಸಕರಿಗೆ ದೆಹಲಿ ಹೈಕಮಾಂಡ್ ನಿಂದ ಬುಲಾವ್
12:32 PM, 24 Oct
ಪಾರ್ಲಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಂಕಜ್ ಮುಂಡೆ ಸೋಲು ಬಹುತೇಕ ಖಚಿತ
12:23 PM, 24 Oct
ಉತ್ತರ ಪ್ರದೇಶದ 11 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 6 ರಲ್ಲಿ ಬಿಜೆಪಿ ಮುನ್ನಡೆ, ಕಾಂಗ್ರೆಸ್ 1, ಎಸ್ಪಿ 2 ಬಿಎಸ್ಪಿ, ಅಪ್ನಾದಳ್ ತಲಾ 1 ಸ್ಥಾನದಲ್ಲಿ ಮುನ್ನಡೆ
12:17 PM, 24 Oct
ಹರ್ಯಾಣ
ಬಿಜೆಪಿಯ ಅಭ್ಯರ್ಥಿಗಳಾದ ಸಂದೀಪ್ ಸಿಂಗ್, ಬಬಿತಾ ಫೋಗಟ್ ಮೂವರೂ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದು ಬಹುತೇಕ ಖಚಿತವಾಗಿದೆ.
11:52 AM, 24 Oct
ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ಬಿಜೆಪಿ 102, ಶಿವಸೇನೆ 61 ಕ್ಷೇತ್ರಗಳಲ್ಲಿ ಮುನ್ನಡೆ
11:46 AM, 24 Oct
ಗುಜರಾತ್ ಉಪಚುನಾವಣೆ ಅಲ್ಪೇಶ್ ಠಾಕೂರ್ ಹಿನ್ನಡೆ
11:39 AM, 24 Oct
ಹರ್ಯಾಣದ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಭುಪೀಂದರ್ ಸಿಂಗ್ ಹೂಡಾ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತುಕತೆ ನಡೆಸಿದ್ದಾರೆ.
READ MORE
1:08 AM, 24 Oct
ಮಹಾರಾಷ್ಟ್ರ
ಮಹಾರಾಷ್ಟ್ರ ವಿಧಾನಸಭೆಯಲ್ಲಿ 288 ಸೀಟುಗಳಿದ್ದು, ಮ್ಯಾಜಿಕ್ ನಂಬರ್ 145.
1:08 AM, 24 Oct
ಮಹಾರಾಷ್ಟ್ರ
ಈ ರಾಜ್ಯದಲ್ಲಿ ಒಟ್ಟು 8,98,39,600 ಮತದಾರರಿದ್ದು, ಅವರಲ್ಲಿ 4,28,43,635 ಮಹಿಳೆಯರು ಮತ್ತು 4,68,75,750 ಪುರುಷ ಮತದಾರರಿದ್ದಾರೆ.
5:06 AM, 24 Oct
235 ಮಹಿಳೆಯರು ಸೇರಿದಂತೆ 3237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 95,473 ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು. ಆ ಎಲ್ಲ ಕೇಂದ್ರಗಳಲ್ಲಿ ಇಂದು ಮತ ಎಣಿಕೆ ನಡೆಯಲಿದೆ.
6:00 AM, 24 Oct
ಹರ್ಯಾಣ
ಹರ್ಯಾಣ ವಿಧಾನಸಭೆಯಲ್ಲಿ 90 ಸೀಟುಗಳಿವೆ. ರಾಜ್ಯದಲ್ಲಿ 1.83 ಕೋಟಿ ಮತದಾರರು ಇದ್ದಾರೆ. ಇವರಲ್ಲಿ 83 ಲಕ್ಷ ಮಹಿಳೆಯರು.
6:13 AM, 24 Oct
ಮಹಾರಾಷ್ಟ್ರ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 164 ಮತ್ತು ಶಿವಸೇನೆ 126 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದವು.
6:36 AM, 24 Oct
ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21 ರಂದು ಚುನಾವಣೆಯಲ್ಲಿ ಶೇ. 61.13 ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು.
6:59 AM, 24 Oct
ಹರ್ಯಾಣ
ಹರ್ಯಾಣ ವಿಧಾನಸಭೆಯಲ್ಲಿ 90 ಸೀಟುಗಳಿವೆ. ರಾಜ್ಯದಲ್ಲಿ 1.83 ಕೋಟಿ ಮತದಾರರು ಇದ್ದಾರೆ. ಇವರಲ್ಲಿ 83 ಲಕ್ಷ ಮಹಿಳೆಯರು.
7:04 AM, 24 Oct
ಮಹಾರಾಷ್ಟ್ರ
ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ.
7:10 AM, 24 Oct
ಉಪಚುನಾವಣೆ ಫಲಿತಾಂಶ
ಎರಡು ರಾಜ್ಯಗ ವಿಧಾನಸಭೆ ಚುನುವಣಾ ಫಲಿತಾಂಶದೊಟ್ಟಿಗೆ ಇಂದೇ, 51 ವಿಧಾನಸಭಾ ಮತ್ತು 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವೂ ಪ್ರಕಟವಾಗಲಿದೆ.
7:14 AM, 24 Oct
ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸ ಹೊಂದಿರುವ ಬಿಜೆಪಿ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಸಂಭ್ರಮಾಚರಣೆಗೆ ಸಜ್ಜಾಗಿದೆ.ಈಗಾಗಲೇ 5000 ಲಡ್ಡುಗಳಿಗೆ ಬಿಜೆಪಿ ಆರ್ಡರ್ ಕೊಟ್ಟಿದ್ದು, ಸಾಕಷ್ಟು ಹೂವಿನ ಮಾಲೆಗಳಿಗೂ ಆರ್ಡರ್ ಕೊಟ್ಟಿದೆ. ಮುಂಬೈಯಲ್ಲಿರುವ ಮಹಾರಾಷ್ಟ್ರ ಬಿಜೆಪಿ ಕೇಂದ್ರ ಕಚೇರಿಯ ಮುಂದೆ ದೊಡ್ಡ ಸ್ಕ್ರೀನ್ ಒಂದನ್ನು ಅಳವಡಿಸಿ, ಅದರಲ್ಲಿ ಫಲಿತಾಂಶವನ್ನು ಬಿತ್ತರಿಸಲು ಬಿಜೆಪಿ ಮುಂದಾಗಿದೆ.
7:42 AM, 24 Oct
ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ 2014 ರಲ್ಲೂ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಶಿವಸೇನೆ
ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಆ ನಂತರ ಬಿಜೆಪಿ 122(288), ಶಿವಸೇನೆ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಕೆಲವು ತಿಂಗಳ ನಂತರ ಉಭಯ ಪಕ್ಷಗಳೂ ಮೈತ್ರಿ ಮಾಡಿಕೊಂಡಿದ್ದವು.
8:05 AM, 24 Oct
ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಮತ ಎಣಿಕೆ ಆರಂಭ
8:10 AM, 24 Oct
ಮಹಾರಾಷ್ಟ್ರ 14(288) ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
8:13 AM, 24 Oct
ಹರ್ಯಾಣದಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ, 6 ರಲ್ಲಿ ಕಾಂಗ್ರೆಸ್ ಮುನ್ನಡೆ
8:17 AM, 24 Oct
ಹರ್ಯಾಣ
ಹರ್ಯಾಣದ ಜಿಂದ್ ಮತಗಟ್ಟೆಯಲ್ಲಿ ಮತಎಣಿಕೆ ಆರಂಭ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಬಂದೋಬಸ್ತ್
8:21 AM, 24 Oct
ಮಹಾರಾಷ್ಟ್ರದಲ್ಲಿ 37 ಕ್ಷೇತ್ರಗಳಲ್ಲಿ ಬಿಜೆಪಿ+, 16 ರಲ್ಲಿ ಕಾಂಗ್ರೆಸ್ ಮುನ್ನಡೆ, 5 ಕ್ಷೇತ್ರಗಳಲ್ಲಿ ಇತರರು ಮುನ್ನಡೆ
8:29 AM, 24 Oct
ಹರ್ಯಾಣ
ಹರ್ಯಾಣದ ಕೈತಾಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾಗೆ ಮುನ್ನಡೆ
8:31 AM, 24 Oct
ಮಹಾರಾಷ್ಟ್ರ
ಮಹಾರಾಷ್ಟ್ರದ ಪರ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ಪಂಕಜ್ ಮುಂಡೆ ಮುನ್ನಡೆ
8:34 AM, 24 Oct
ಹರ್ಯಾಣ
ಹರ್ಯಾಣದಲ್ಲಿ ಬಿಜೆಪಿ 40, ಕಾಂಗ್ರೆಸ್ 10 ರಲ್ಲಿ ಮುನ್ನಡೆ
8:37 AM, 24 Oct
ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ 106 ಕ್ಷೇತ್ರಗಳಲ್ಲಿ ಬಿಜೆಪಿ+ ಮುನ್ನಡೆ.
8:44 AM, 24 Oct
ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ 134 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
8:49 AM, 24 Oct
ಹರ್ಯಾಣದಲ್ಲಿ 55 ಕ್ಷೇತ್ರಗಳಲ್ಲಿ ಬಿಜೆಪಿ, 17 ರಲ್ಲಿ ಕಾಂಗ್ರೆಸ್ ಮುನ್ನಡೆ
8:57 AM, 24 Oct
ಮಹಾರಾಷ್ಟ್ರ
ಮಹಾರಾಷ್ಟ್ರದ ವರ್ಲಿ ಕ್ಷೇತ್ರದಲ್ಲಿ ಶಿವಸೇನೆ ಅಭ್ಯರ್ಥಿ ಆದಿತ್ಯ ಠಾಕ್ರೆ ಮುನ್ನಡೆ
9:01 AM, 24 Oct
ಮಹಾರಾಷ್ಟ್ರದಲ್ಲಿ 168 ಕ್ಷೇತ್ರಗಳಲ್ಲಿ ಬಿಜೆಪಿ, ಶಿವಸೇನೆ ಮುನ್ನಡೆ
9:03 AM, 24 Oct
ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭಾರಿ ಮುನ್ನಡೆ
9:13 AM, 24 Oct
ಮಹಾರಾಷ್ಟ್ರದಲ್ಲಿ 176 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
9:20 AM, 24 Oct
ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ಶಿವಸೇನೆ ಮೈತ್ರಿಕೂಟ 180 ಕ್ಷೇತ್ರಗಳಲ್ಲಿ ಮುನ್ನಡೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more