ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ನೆಲಕಚ್ಚಿದ ಕಾಂಗ್ರೆಸ್, ಅರಳಿದ ಕಮಲ

By Mahesh
|
Google Oneindia Kannada News

ಬೆಂಗಳೂರು, ಅ.19: ಭಾರಿ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಫಲಿತಾಂಶ ಹೊರ ಹಾಕಿದೆ. ಪ್ರಧಾನಮಂತ್ರಿ ನರೇಂದ್ರಮೋದಿಯವರ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎಂದೇ ಹೇಳಲಾಗಿದ್ದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಮೂಲಕ ಉಭಯ ರಾಜ್ಯಗಳಲ್ಲೂ ಕಾಂಗ್ರೆಸ್ ನೆಲಕಚ್ಚುವಂತೆ ಮಾಡಿದೆ.

ಹರಿಯಾಣದಲ್ಲಿ ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚನೆಗೆ ಮುಂದಾಗಿದೆ. ಮಹಾರಾಷ್ಟ್ರದಲ್ಲಿ ಮೈತ್ರಿ ಸಾಧಿಸಿ ಸರ್ಕಾರ ರಚಿಸುವುದು ಖಚಿತವಾಗಿದೆ. ಈ ನಡುವೆ ಉಭಯ ರಾಜ್ಯಗಳಲ್ಲಿ ಕಮಲ ಅರಳುತ್ತಿರುವ ಸುದ್ದಿ ತಿಳಿದು ಇಡೀ ದೇಶದ ಬಿಜೆಪಿ ಘಟಕದಲ್ಲಿ ಅವಧಿಗೆ ಮುನ್ನ ದೀಪಾವಳಿ ಹಬ್ಬದಾಚರಣೆ ಸಂಭ್ರಮ ಮನೆ ಮಾಡಿದೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಬ್ಯಾಂಡ್ ಸೆಟ್ ನೊಂದಿಗೆ ತಯಾರಾಗಿದ್ದ ತಂಡ ಹಾಡುಗಳನ್ನು ಊದುತ್ತಾ ಕಾರ್ಯಕರ್ತರ ಕುಣಿತಕ್ಕೆ ಕಾರಣರಾದರು.[ಹರ್ಯಾಣದಲ್ಲಿ ಬಿಜೆಪಿಗೆ ಜಯ ಮಹಾರಾಷ್ಟ್ರ ಅತಂತ್ರ ]

ಲೋಕಸಭೆ ಚುನಾವಣೆಯಲ್ಲಿ ಭಾರೀ ಸೋಲನುಭವಿಸಿದ್ದ ಕಾಂಗ್ರೆಸ್ ಪಕ್ಷ ಸುಮಾರು 15 ವರ್ಷಗಳ ನಂತರ ಮಹಾರಾಷ್ಟ್ರವನ್ನು ಕಳೆದುಕೊಂಡಿದೆ. ಹರಿಯಾಣದಲ್ಲಿ ಇದೇ ಮೊದಲ ಬಾರಿಗೆ ಕೇಸರಿ ಧ್ವಜ ರಾರಾಜಿಸುತ್ತಿದೆ. ಬಿಜೆಪಿ ಸಂಭ್ರಮ, ಕಾಂಗ್ರೆಸ್ ಕಚೇರಿಯಲ್ಲಿನ ನೀರವ ಮೌನ ಚಿತ್ರಗಳಲ್ಲಿ ಸೆರೆ ಹಿಡಿಯಲಾಗಿದೆ.. ಈ ಸುದ್ದಿ ಅಪ್ ಲೋಡ್ ಮಾಡುವ ಹೊತ್ತಿಗೆ ಮಹಾರಾಷ್ಟ್ರ(288)ದಲ್ಲಿ ಬಿಜೆಪಿ 123(ಮುನ್ನಡೆ) ಸ್ಥಾನದಲ್ಲಿ 82 ಗೆದ್ದಿದೆ, ಹರ್ಯಾಣದಲ್ಲಿ 49ರಲ್ಲಿ 45 ಸ್ಥಾನ ಭದ್ರವಾಗಿದೆ. ಸದ್ಯಕ್ಕೆ ಸೆಲೆಬ್ರೇಷನ್ ನೋಡಿ

ಫಲಿತಾಂಶ ಹೊರಬೀಳುವುದಕ್ಕೂ ಮುನ್ನ

ಫಲಿತಾಂಶ ಹೊರಬೀಳುವುದಕ್ಕೂ ಮುನ್ನ

ಫಲಿತಾಂಶ ಹೊರಬೀಳುವುದಕ್ಕೂ ಮುನ್ನ ಮುಂಬೈನ ನಾರಿಮನ್ ಪಾಯಿಂಟ್ ನ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ಕಂಡು ಬಂದ ದೃಶ್ಯ

ದೇವೇಂದ್ರ ಫಡ್ನಾವೀಸ್ ಅಭಿಮಾನಿಗಳು

ದೇವೇಂದ್ರ ಫಡ್ನಾವೀಸ್ ಅಭಿಮಾನಿಗಳು

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಗೆಲುವಿನ ಕ್ರೆಡಿಟ್ ಕೊಟ್ಟ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನಾವೀಸ್.

ದೀಪಾವಳಿ ಸಂಭ್ರಮಾಚರಣೆ

ದೀಪಾವಳಿ ಸಂಭ್ರಮಾಚರಣೆ

ಬಿಜೆಪಿ ಕಚೇರಿಗಳಲ್ಲಿ ಅವಧಿಗೂ ಮುನ್ನ ದೀಪಾವಳಿ ಸಂಭ್ರಮಾಚರಣೆ ಕಂಡು ಬಂದಿತು.

ಸಂಭ್ರಮಾಚರಣೆ ವ್ಯಾಪಕವಾಗಿ ಹಬ್ಬಿತು

ಸಂಭ್ರಮಾಚರಣೆ ವ್ಯಾಪಕವಾಗಿ ಹಬ್ಬಿತು

ಉಭಯ ರಾಜ್ಯಗಳು ಬಿಜೆಪಿ ಟಾಪ್ ಟ್ರೆಂಡಿಂಗ್ ನಲ್ಲಿರುವಾಗಲೇ ಇಡೀ ದೇಶದ ಬಿಜೆಪಿ ಕಚೇರಿಗಳಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಲಾಯಿತು.

ಮೋದಿ ಅಲೆಯಿಂದ ವಿಜಯ

ಮೋದಿ ಅಲೆಯಿಂದ ವಿಜಯ

ಮೋದಿ ಅಲೆಯಿಂದ ವಿಜಯ ಎಂದು ಬಿಜೆಪಿ ಕಾರ್ಯಕರ್ತರು ಮೋದಿ ಅವರ ಚಿತ್ರಕ್ಕೆ ಸಿಹಿ ತಿನ್ನಿಸುತ್ತಿದ್ದಾರೆ.

ಹರ್ಯಾಣದಲ್ಲಿ ಬಿಜೆಪಿ ಜಯ

ಹರ್ಯಾಣದಲ್ಲಿ ಬಿಜೆಪಿ ಜಯ

ಹರ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ವಿಜ್ ವಿಜಯೋತ್ಸವ

ಹೋಳಿ, ದೀಪಾವಳಿ ಎರಡೂ ಇಂದೇ

ಹೋಳಿ, ದೀಪಾವಳಿ ಎರಡೂ ಇಂದೇ

ಬಿಜೆಪಿ ಕಾರ್ಯಕರ್ತರು ಹೋಳಿ, ದೀಪಾವಳಿ ಎರಡೂ ಇಂದೇ ಆಚರಿಸುತ್ತಿದ್ದಾರೆ

ಬಿಜೆಪಿ ನಾಯಕರ ವಿಜಯೋತ್ಸವ

ಬಿಜೆಪಿ ನಾಯಕರ ವಿಜಯೋತ್ಸವ

ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಫಡ್ನಾವೀಸ್ ವಿಜಯೋತ್ಸವ ಸಂಭ್ರಮ

ಬಿಕೋ ಎನ್ನುತ್ತಿರುವ ದೆಹಲಿ ಕಾಂಗ್ರೆಸ್ ಕಚೇರಿ

ಬಿಕೋ ಎನ್ನುತ್ತಿರುವ ದೆಹಲಿ ಕಾಂಗ್ರೆಸ್ ಕಚೇರಿ

ಉಭಯ ರಾಜ್ಯಗಳಲ್ಲೂ ಸೋಲಿನ ಕಹಿ ಉಂಡಿರುವ ಕಾಂಗ್ರೆಸ್. ಬಿಕೋ ಎನ್ನುತ್ತಿರುವ ದೆಹಲಿ ಕಾಂಗ್ರೆಸ್ ಕಚೇರಿ

English summary
As the Bharatiya Janata Party is set to record a thumping victory in the assembly elections in two states - Haryana and Maharashtra, the workers in Mumbai and across the India has started celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X