ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗಾಯತರಿಗೆ ಮಹಾರಾಷ್ಟ್ರ ಸರ್ಕಾರದಿಂದಲೂ ಶಾಕ್‌

By Nayana
|
Google Oneindia Kannada News

Recommended Video

ಮಹಾರಾಷ್ಟ್ರ ಸರ್ಕಾರದಿಂದ ಲಿಂಗಾಯತರಿಗೆ ಷಾಕಿಂಗ್ ಸುದ್ದಿ | Oneindia Kannada

ಬೆಂಗಳೂರು, ಜು.14: ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಕೇಳಿಬರುತ್ತಿದೆ, ಈ ಕುರಿತು ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಅಥವಾ ಅಲ್ಪಸಂಖ್ಯಾತರಿಗೆ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕರ್ನಾಟಕದಲ್ಲಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಲಿಂಗಾಯತರಿಗೆ ಅಲ್ಪಸಂಖ್ಯಾತ ಹಾಗೂ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮಾಡಿದ್ದ ಶಿಫಾರಸು ಚರ್ಚೆಯ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ಘೋಷಿಸಿದೆ.

ಚರ್ಚೆ: ವೀರಶೈವ ಒಂದು ವ್ರತ-ಲಿಂಗಾಯತ ಸ್ವತಂತ್ರ ಧರ್ಮಚರ್ಚೆ: ವೀರಶೈವ ಒಂದು ವ್ರತ-ಲಿಂಗಾಯತ ಸ್ವತಂತ್ರ ಧರ್ಮ

ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಧರ್ಮ ವಿಭಜನೆ ವಿಷಯ ರಾಜಕೀಯ ವಿಚಾರವಾಗಿ ಪರಿಣಮಿಸಿತ್ತು, ಮಹಾರಾಷ್ಟ್ರದಲ್ಲಿಯೂ ಕೆಲ ವರ್ಷಗಳಿಂದ ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತರಿಗೆ ಸ್ಥಾನಮಾನ ನೀಡುವ ವಿಚಾರದಲ್ಲಿ ಸಂಘರ್ಷಗಳು ನಡೆಯುತ್ತಲೇ ಇದೆ.'ಆದರೆ ರಾಜ್ಯ ಸರ್ಕಾರದ ಮುಂದೆ ಇಂತಹ ಪ್ರಸ್ತಾಪವೇ ಇಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ವಿನೋದ್‌ ತಾವ್ಡೆ ಸ್ಪಷ್ಟಪಡಿಸಿದ್ದಾರೆ.

Maharashtra govt rejects demand of separate religion status for Lingayaths

2014ರಲ್ಲಿ ಕೇಂದ್ರ ಅಲ್ಪಸಂಖ್ಯಾತ ಆಯೋಗವು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಲು ನಿರಾಕರಿಸಿದೆ. 2011ರ ಜನಗಣತಿ ಸಂದರ್ಭದಲ್ಲಿಯೂ ಲಿಂಗಾಯತವನ್ನು ಹಿಂದು ಧರ್ಮದ ಭಾಗ ಹಾಗೂ ಒಂದು ಜಾತಿಯಾಗಿಯೇ ಪರಿಗಣಿಸಲಾಗಿದೆ ಎಂದಿದ್ದಾರೆ. ಹಾಗಾಗಿ ಮಹಾರಾಷ್ಟ್ರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಸಾಧ್ಯವೇ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.

English summary
Maharashtra state government has strongly denied for Lingayath as separate religion or minority status since its part of Hindu sub caste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X