ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದ ಕೆರೆ, ನದಿಯಷ್ಟೇ ಅಲ್ಲ ಮಂದಿಯ ಗಂಟಲೊಣಗಿಸಿದ ಬೇಸಿಗೆ!

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಕಳೆದ ಬಾರಿ ಚೆನ್ನಾಗಿ ಮಳೆಯಾಗಿದೆ ಬೇಸಿಗೆಗಾಲ ಮುಗಿಯುವವರೆಗೂ ನೀರಿನ ಸಮಸ್ಯೆ ಇಲ್ಲ ಎಂದು ಹೇಳುವ ಹಾಗೆಯೇ ಇಲ್ಲ, ಈ ಉರಿ ಬಿಸಿಲಿಗೆ ಕೆರೆ, ನದಿಯಲ್ಲಿ ನೀರು ವೇಗವಾಗಿ ಬತ್ತುತ್ತಿದೆ, ಮೇ ತಿಂಗಳಲ್ಲಿ ಕಳೆದ ವರ್ಷ ಹೆಚ್ಚು ಮಳೆಯಾದ ಪ್ರದೇಶಗಳಲ್ಲೂ ನೀರಿನ ಬರ ಎದುರಾಗಲಿದೆ. ಕರ್ನಾಟಕದ ಸಾಕಷ್ಟು ಜಿಲ್ಲೆಗಳಲ್ಲಿ ಈಗಾಗಲೇ ನೀರಿನ ಹಾಹಾಕಾರ ಆರಂಭವಾಗಿದೆ.

ಹೀಗಿರುವಾಗ ಮಹಾರಾಷ್ಟ್ರ, ರಾಜಸ್ತಾನದ ಜನರ ಪರಿಸ್ಥಿತಿ ಏನಾಗಿರಬಹುದು ಎನ್ನುವ ಕುರಿತು ಕೊಂಚ ಆಲೋಚಿಸಬೇಕಿದೆ. ಮಧ್ಯಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ರಾಜ್ಯಗಳಲ್ಲಿ ಬೇಸಿಗೆ ಆರಂಭದಲ್ಲೇ ಗಂಟಲು ಒಣಗಿದೆ. ಬಿಸಿಲ ಬೇಗೆ ಏರುತ್ತಿದ್ದಂತೆಯೇ ಹಲವೆಡೆ ನೀರಿನ ಬರವೂ ಕಾಡಲಾರಂಭಿಸಿದೆ. ಕೃಷಿ ತೋಟಗಳು ನೀರಿನ ಅಭಾವದಿಂದ ಕೆಂಬಣ್ಣಕ್ಕೆ ತಿರುಗಿದರೆ ಜನ ಕುಡಿಯುವ ನೀರಿಗೂ ಬವಣೆ ಪಡುವಂತಾಗಿದೆ.

ಕರೆನ್ಸಿ ಎಮರ್ಜೆನ್ಸಿ : ಕರ್ನಾಟಕದಲ್ಲೂ ನೋ ಕ್ಯಾಷ್, ಜನರ ಪರದಾಟಕರೆನ್ಸಿ ಎಮರ್ಜೆನ್ಸಿ : ಕರ್ನಾಟಕದಲ್ಲೂ ನೋ ಕ್ಯಾಷ್, ಜನರ ಪರದಾಟ

ಮಹಾರಾಷ್ಟ್ರದ ಉಸ್ಮಾನಾಬಾದ್, ಲಾತೂರ್, ಬೀಡ್, ಅಹಮ್ಮದ್ ನಗರ, ಸಾಂಗ್ಲಿ, ಸೋಲಾಪುರ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದೆ. ನೀರಿಗಾಗಿ ಹಾಹಾಕಾರ ಎದ್ದಿರುವ ಲಾತೂರಿಗೆ ಪಂಢರಪುರದಿಂದ ರೈಲ್ವೆ ಬೋಗಿಗಳಲ್ಲಿ ಕುಡಿಯುವ ನೀರನ್ನು ಪೂರೈಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ಬಹುತೇಕ ಎಲ್ಲ ಜಲಾಶಯಗಳಲ್ಲಿರುವ ಅಲ್ಪ ಪ್ರಮಾಣದ ನೀರಿ ಸಂಗ್ರಹವನ್ನು ಕುಡಿಯಲು ಮಾತ್ರ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಪ್ರತಿ ವರ್ಷವೂ ಮಹಾರಾಷ್ಟ್ರ, ರಾಜಸ್ತಾನ ಭಾಗಗಳಲ್ಲಿ ನೀರಿನ ಅಭಾವ ಉಂಟಾಗುತ್ತದೆ, ಆದರೆ ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಬುಗಿಲೆದ್ದಿದೆ.

 ಮಹಾರಾಷ್ಟ್ರದಲ್ಲಿ ನೀರಿಗಾಗಿ ಹಾಹಾಕಾರ

ಮಹಾರಾಷ್ಟ್ರದಲ್ಲಿ ನೀರಿಗಾಗಿ ಹಾಹಾಕಾರ

ಮಹಾರಾಷ್ಟ್ರ ಸರ್ಕಾರವು ದಿನಕ್ಕೆ ಒಂದು ಬಾರಿ ಟ್ಯಾಂಕರ್ ನೀರನ್ನು ಪೂರೈಸುತ್ತಿದೆ. ಉಳಿದ ನೀರನ್ನು ಟ್ಯಾಂಕ್ರ್ ಗಳಿಂದ ಅಲ್ಲಿನ ಬಾವಿಯೊಳಗೆ ಶೇಖರಿಸಲಾಗುತ್ತಿದೆ. ಬಾವಿಗಳಿಂದ ನೀರನ್ನು ತೆಗೆದುಕೊಳ್ಳಲು ತೆಗೆದುಕೊಳ್ಳಲು ಬಿಂದಿಗೆ ಸಮೇತ ಬಾಯಿಬಳಿಯಲ್ಲಿ ಕಾಯುತ್ತಿರುವ ಮಂದಿ.

 ಒಂದೇ ಟ್ಯಾಂಕರ್ ನೀರು ಪೂರೈಕೆ

ಒಂದೇ ಟ್ಯಾಂಕರ್ ನೀರು ಪೂರೈಕೆ

ಮಹಾರಾಷ್ಟ್ರದ ಮೋಕ್ದಾದ್ ಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರವಿ ದಿನಕ್ಕೆ ಒಂದೇ ಟ್ಯಾಂಕರ್ ನೀರನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೆ ಅಲ್ಲಿರುವ ಬಾವಿಯೊಳಗೆ ನೀರನ್ನು ಬಿಡಲಾಗುತ್ತಿದೆ. ಸುತ್ತಮುತ್ತಲ ಪ್ರದೇಶದಲ್ಲಿರುವ ಜನರು ಬಾಯಿಯಿಂದ ಮತ್ತೆ ನೀರನ್ನು ತೆಗೆದುಕೊಂಡು ತಮ್ಮ ಹಳ್ಳಿಗಳಿಗೆ ನಡೆದುಕೊಂಡೇ ಹೋಗಬೇಕಾಗುತ್ತದೆ.

 ಒಂದೇ ಬಿಂದಿಗೆ ನೀರಿನಿಂದ ಬದುಕುವ ಜನರು

ಒಂದೇ ಬಿಂದಿಗೆ ನೀರಿನಿಂದ ಬದುಕುವ ಜನರು

ಬಿರು ಬೇಸಿಗೆ ಆರಂಭವಾಗಿದೆ, ದೇಶಾದ್ಯಂತ ಸಾಕಷ್ಟು ಕಡೆ ನೀರಿನ ಅಭಾವ ತಲೆದೂರಿದೆ ಹೀಗಿರುವಾಗ ಮಹಾರಾಷ್ಟ್ರ ಮೊಕ್ದಾದ್ ನಲ್ಲಿ ದಿನಕ್ಕೆ ಒಂದೇ ಟ್ಯಾಂಕರ್ ನೀರು ಪೂರೈಕೆಯಾಗುತ್ತಿದೆ. ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ದಿನ ಒಂದೇ ಬಿಂದಿಗೆ ನೀರನ್ನು ಮಾತ್ರ ಅಲ್ಲಿನ ಮಂದಿಗೆ ದೊರೆಯುತ್ತಿದೆ.

 ಬಿಂದಿಗೆ ಹೊತ್ತು ಕಿಲೋಮೀಟರ್‌ಗಟ್ಟಲೆ ನಡೆಯುವ ಮಹಿಳೆಯರು

ಬಿಂದಿಗೆ ಹೊತ್ತು ಕಿಲೋಮೀಟರ್‌ಗಟ್ಟಲೆ ನಡೆಯುವ ಮಹಿಳೆಯರು

ಮಹಾರಾಷ್ಟ್ರದಲ್ಲಿ ನೀರಿಗಾಗಿ ಜನರು ಪರಿತಪಿಸುವಂತಾಗಿದೆ. ಅಲ್ಲಿನ ಜನರು ಒಂದು ಗುಟುಕು ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಕ್ರಮಿಸಿ ಬರಬೇಕಾಗಿದೆ. ಮೊಕ್ದಾದ್ ಗ್ರಾಮದಿಂದ ನೀರು ಪಡೆದುಕೊಂಡು ಬಿಂದಿಗೆ ಹೊತ್ತು ಊರಿನತ್ತ ತೆರಳುತ್ತಿರುವ ಮಹಿಳೆಯರು ಕಂಡುಬಂದಿದ್ದು ಹೀಗೆ.

 ನದಿಯಲ್ಲಿಯೇ ಇದ್ದುಬಿಡು ಅನ್ನುತ್ತಿದೆ ಮನಸ್ಸು

ನದಿಯಲ್ಲಿಯೇ ಇದ್ದುಬಿಡು ಅನ್ನುತ್ತಿದೆ ಮನಸ್ಸು

ದೇಶದೆಲ್ಲಡೆ ಕಡು ಬೇಸಿಗೆ ಆರಂಭವಾದ ಹಿನ್ನೆಲೆಯಲ್ಲಿ ತಾಪಮಾನ ಏರಿಕೆಯಾಗಿದೆ. ಬಿಸಿಲ ಝಳ ತಾಳಲಾರದೆ ಲಖ್ನೌನಲ್ಲಿ ಬಾಲಕನೊಬ್ಬ ನದಿಯಲ್ಲಿ ನೀರಿನ ಜತೆಗೆ ಕಾಲಕಳೆಯುತ್ತಿದ್ದ ದೃಶ್ಯ .

English summary
Tribal women fetch water from a well which was supplied by the government tankers at a village in Mokhdad district of Maharashtra on Thursday. The region is facing acute shotrtage of water and government tankers supply water to the villagers only one time a day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X