ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಈ ಸಾವಿಗೆ ಮೋದಿ ಸರ್ಕಾರ ಹೊಣೆ' ಎಂದು ಆತ್ಮಹತ್ಯೆ ಮಾಡಿಕೊಂಡ ರೈತ

|
Google Oneindia Kannada News

ಯವತ್ಮಾಲ್(ಮಹಾರಾಷ್ಟ್ರ), ಏಪ್ರಿಲ್ 11: "ನನ್ನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಕಾರಣ" ಎಂದು ಡೆತ್ ನೋಟ್ ಬರೆದಿಟ್ಟು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂದ ಘಟನೆ ಮಹಾರಾಷ್ಟ್ರದ ಯಾವತ್ಮಾಲ್ ಎಂಬಲ್ಲಿ ನಡೆದಿದೆ.

ಶಂಕರ್ ಭಾವೂರಾವ್ ಚಾಯ್ರೆ(50) 1 ಲಕ್ಷ ರೂ. ಸಾಲ ಹೂಂದಿದ್ದರೂ, ಮಹಾರಾಷ್ಟ್ರ ಸರ್ಕಾರದ ಸಾಲಮನ್ನಾ ಯೋಜನೆ ತಮಗೆ ಅನ್ವಯವಾಗಿಲ್ಲ ಎಂಬ ಕಾರಣಕ್ಕೆ ತೀರಾ ನೊಂದುಕೊಂಡಿದ್ದರು. ಅದಕ್ಕಾಗಿ ಮನನೊಂದು ಏಪ್ರಿಲ್ 10 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

"ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಅವಕಾಶ ನೀಡಿದರೆ ಮಾತ್ರವೇ ನಾವು ಮೃತ ರೈತನ ಅಂತ್ಯ ಸಂಸ್ಕಾರ ಮಾಡುತ್ತೇವೆ" ಎಂದು ರೈತನ ಕುಟುಂಬದ ಸದಸ್ಯರು ದುಂಬಾಲುಬಿದ್ದಿದ್ದಾರೆ. ಇಲ್ಲಿನ ವಸಂತರಾವ್ ಮೆಡಿಕಲ್ ಕಾಲೇಜಿನಲ್ಲಿ ರೈತನ ದೇಹವನ್ನು ಇಡಲಾಗಿದ್ದು, ಮೋದಿ ಮಧ್ಯಸ್ಥಿಕೆಯ ನಂತರವೇ ಅವರ ದೇಹವನ್ನು ಕೊಂಡೊಯ್ಯುವುದಾಗಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Maharashtra farmer commits suicide, death note says Modi government is responsible

ವರದಿಯೊಂದರ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗುವ ಜಿಲ್ಲೆಗಳಲ್ಲಿ ಯವತ್ಮಾಲ್ ಸಹ ಒಂದು.

English summary
A 50-year-old debt-ridden farmer committed suicide at Yavatmal in Maharshtra by consuming poison. The deceased, identified as Shankar Bhaurao Chayre, in his suicide note wrote, Narendra Modi government is responsible for his death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X