ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ 200 ಅಡಿ ಕಂದಕಕ್ಕೆ ಉರುಳಿದ ಬಸ್, 30ಕ್ಕೂ ಹೆಚ್ಚು ಸಾವು

|
Google Oneindia Kannada News

ಮುಂಬೈ, ಜುಲೈ 28: ಮಹಾರಾಷ್ಟ್ರದ ಮಹಾಬಲೇಶ್ವರದ ಸಮೀಪ ಸುಮಾರು 40 ಪ್ರಯಾಣಿಕರಿದ್ದ ಬಸ್ 200 ಅಡಿಗೂ ಹೆಚ್ಚಿನ ಆಳದ ಕಂದಕಕ್ಕೆ ಬಿದ್ದಿದೆ.

ಅಂಬೇನಾಲಿ ಘಾಟ್‌ನಲ್ಲಿ ಈ ಅವಘಡ ಸಂಭವಿಸಿದೆ. ಕಂದಕದಿಂದ ಪ್ರಕಾಶ್ ಸಾವಂತ್ ಎಂಬುವವರನ್ನು ಜೀವಂತವಾಗಿ ಹೊರಕ್ಕೆ ಕರೆತರುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕಂದಕ ಸುಮಾರು 400 ಮೀಟರ್‌ನಷ್ಟು ಆಳವಿದ್ದು, 200 ಮೀಟರ್‌ವರೆಗೆ ಬಸ್ ಉರುಳಿದೆ. 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

maharashtra bus falls in to gorge near raigarh

ಉಳಿದಂತೆ ಬಸ್‌ನಲ್ಲಿದ್ದ ಎಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಎನ್‌ಡಿಆರ್ಎಫ್ ಪಡೆ ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ಬಸ್‌ನಲ್ಲಿದ್ದ ಎಲ್ಲರೂ ದಪೋಲಿಯ ಡಾ. ಬಾಲಸಾಹೇಬ್ ಸಾವಂತ್ ಕೊಂಕಣ ಕೃಷಿ ವಿದ್ಯಾಪೀಠದವರಾಗಿದ್ದು, ಪ್ರವಾಸಕ್ಕೆಂದು ತೆರಳುತ್ತಿದ್ದರು ಎನ್ನಲಾಗಿದೆ.

ಇದರಲ್ಲಿ ಕೃಷಿ ವಿಶ್ವವಿದ್ಯಾಲಯದ 25 ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ರಾಯಗಡ- ಸತಾರಾ ಜಿಲ್ಲೆಯ ಗಡಿಯಲ್ಲಿ ಈ ದುರಂತ ಸಂಭವಿಸಿದೆ.

English summary
A Bus with almost 40 people inside fell in a gorge near Ambenali Ghat in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X