ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಫ್ ಬೆಜೋಸ್ ತಂಡದಲ್ಲಿ ಮುಂಬೈ ಯುವತಿ; ಬಾಹ್ಯಾಕಾಶ ಕ್ಷೇತ್ರದ ಹೆಮ್ಮೆ

By ಒನ್ ಇಂಡಿಯಾ ಡೆಸ್ಕ್‌
|
Google Oneindia Kannada News

"ಬಾಹ್ಯಾಕಾಶ ನೌಕೆ ನಿರ್ಮಿಸಬೇಕೆನ್ನುವ ಕನಸನ್ನು ಚಿಕ್ಕ ವಯಸ್ಸಿನಲ್ಲೇ ಕಾಣುತ್ತಿದ್ದೆ. ಆ ಬಾಲ್ಯದ ಕನಸು ಈಗ ನನಸಾಗಿದೆ. ನನಗೆ ಬಹಳ ಸಂತೋಷವಾಗಿದೆ"; ಅಮೆಜಾನ್ ಸಂಸ್ಥಾಪಕ, ಉದ್ಯಮಿ ಜೆಫ್ ಬೆಜೋಸ್ ಅವರ ರಾಕೆಟ್ ತಯಾರಿಕಾ ಸಂಸ್ಥೆ "ಬ್ಲೂ ಒರಿಜಿನ್" ತಂಡದ ಭಾಗವಾಗಿರುವ ಮುಂಬೈ ಮೂಲದ ಯುವತಿ ಸಂತಸ ವ್ಯಕ್ತಪಡಿಸಿದ್ದು ಹೀಗೆ...

ಅಂದ ಹಾಗೆ, ಜೆಫ್ ಬೆಜೋಸ್ ಇಂದು, (ಜುಲೈ 20) ತಮ್ಮ ಮಹಾತ್ವಾಕಾಂಕ್ಷೆಯ ಗಗನ ಯಾತ್ರೆ ಕೈಗೊಳ್ಳಲಿದ್ದಾರೆ. ಜೆಫ್ ಅವರ ಸ್ಪೇಸ್ ಟೂರಿಸಂ ಕಂಪನಿ ಬ್ಲೂ ಒರಿಜಿನ್ ಈ ಯಾತ್ರೆಗೆ ರಾಕೆಟ್ ಸಿದ್ಧಪಡಿಸಿದೆ. ಬ್ಲೂ ಒರಿಜಿನ್‌ನ ಟಿಇಸಿ ಕ್ಯಾಪ್ಸೂಲ್ ಇಂಜಿನಿಯರ್‌ಗಳ ತಂಡ ಈ ವಿಶೇಷ ಸಬ್ ಆರ್ಬಿಟಲ್ ಬಾಹ್ಯಾಕಾಶ ರಾಕೆಟ್ "ನ್ಯೂ ಶೆಫರ್ಡ್" ನಿರ್ಮಿಸಿದ್ದು, ಮಹಾರಾಷ್ಟ್ರ ಮೂಲದ 30 ವರ್ಷದ ಯುವತಿ ಸಂಜಲ್ ಗವಾಂಡೆ ಈ ತಂಡದ ಭಾಗವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದೆ ಓದಿ...

 ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಜಲ್‌ಗೆ ಅಪಾರ ಆಸಕ್ತಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಜಲ್‌ಗೆ ಅಪಾರ ಆಸಕ್ತಿ

ಸಂಜಲ್ ಗವಾಂಡೆ ಮಹಾರಾಷ್ಟ್ರದ ಕಲ್ಯಾಣ್‌ ಮೂಲದವರು. ಡೊಂಬಿವ್ಲಿ ಮುನಿಸಿಪಾಲ್ ಕಾರ್ಪೊರೇಷನ್ ನಿವೃತ್ತ ಉದ್ಯೋಗಿ ಅಶೋಕ್ ಗವಾಂಡೆ ಹಾಗೂ ನಿವೃತ್ತ ಎಂಟಿಎನ್‌ಎಲ್ ಉದ್ಯೋಗಿ ಸುರೇಖಾ ಅವರ ಪುತ್ರಿ ಸಂಜಲ್ ಗವಾಂಡೆ ಅವರಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿದ್ದ ಅಪಾರ ಆಸಕ್ತಿಯೇ ಅವರನ್ನು ಈ ಮಟ್ಟಕ್ಕೆ ಕರೆದುಕೊಂಡು ಬಂದಿದೆ. "ನನ್ನ ಬಾಲ್ಯದ ಕನಸು ನನಸಾಗುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ. ಟೀಮ್ ಬ್ಲೂ ಒರಿಜಿನ್‌ನ ಭಾಗವಾಗಲು ನನಗೆ ಹೆಮ್ಮೆ ಎನಿಸುತ್ತಿದೆ" ಎಂದು ಸಂಜಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಬ್ಲೂ ಒರಿಜಿನ್‌ನ ಮೊದಲ ಮಾನವ ಬಾಹ್ಯಾಕಾಶ ಹಾರಾಟದತ್ತ ಚಿತ್ತ: ಏನಿದು ಪ್ರವಾಸ? ಇಲ್ಲಿದೆ ಮಾಹಿತಿಬ್ಲೂ ಒರಿಜಿನ್‌ನ ಮೊದಲ ಮಾನವ ಬಾಹ್ಯಾಕಾಶ ಹಾರಾಟದತ್ತ ಚಿತ್ತ: ಏನಿದು ಪ್ರವಾಸ? ಇಲ್ಲಿದೆ ಮಾಹಿತಿ

 ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ

ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ

ಮುಂಬೈ ವಿಶ್ವವಿದ್ಯಾಲಯದಿಂದ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ನಂತರ ಸಂಜಲ್ ಗವಾಂಡೆ ಮಿಚಿಗನ್ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದರು. ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಮರ್ಕ್ಯುರಿ ಮೆರೈನ್‌ನಲ್ಲಿ ಕೆಲಸ ಮಾಡಿದರು. ನಂತರ ಕ್ಯಾಲಿಫೋರ್ನಿಯಾದ ಆರೆಂಜ್ ಸಿಟಿಯಲ್ಲಿ ಟೊಯೊಟೊ ರೇಸಿಂಗ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ.

 ನಾಸಾಗೆ ಅರ್ಜಿ ಸಲ್ಲಿಸಿದ್ದ ಸಂಜಲ್

ನಾಸಾಗೆ ಅರ್ಜಿ ಸಲ್ಲಿಸಿದ್ದ ಸಂಜಲ್

2016ರಲ್ಲಿ ಪೈಲಟ್ ಪರವಾನಗಿ ಪಡೆದ ನಂತರ ಸಂಜಲ್ ಗವಾಂಡೆ ನಾಸಾದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಪೌರತ್ವ ಸಮಸ್ಯೆಗಳಿಂದಾಗಿ ಅವರನ್ನು ಆಯ್ಕೆ ಮಾಡಲಾಗಿಲ್ಲ. ನಂತರ ಬ್ಲೂ ಒರಿಜಿನ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದು, ಸಿಸ್ಟಂ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದರು. ಈ ವಿಶೇಷ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎನಿಸಿದೆ.

"ಸಂಜಲ್ ಏಕೆ ಈ ಕ್ಷೇತ್ರ ಆರಿಸಿಕೊಂಡಿದ್ದು ಎಂದು ಕೇಳುತ್ತಿದ್ದರು ಜನ"

"ಮೆಕಾನಿಕಲ್ ಇಂಜಿನಿಯರಿಂಗ್ ಆಯ್ಕೆ ಮಾಡಿದಾಗ, ಹೆಣ್ಣು ಮಕ್ಕಳಿಗೆ ಮೆಕಾನಿಕಲ್ ಇಂಜಿನಿಯರಿಂಗ್ ಸೂಕ್ತವೇ? ಸಂಜಲ್ ಏಕೆ ಇದನ್ನು ಆರಿಸಿಕೊಂಡಿದ್ದು ಎಂದು ಜನರು ಪ್ರಶ್ನೆ ಮಾಡುತ್ತಿದ್ದರು. ಆದರೆ ಆಕೆ ಬಾಲ್ಯದಿಂದಲೂ ಬಾಹ್ಯಾಕಾಶದ ಬಗ್ಗೆ ಕನಸು ಕಾಣುತ್ತಿದ್ದವಳು. ಇದೀಗ ಆಕೆಯೇ ಉತ್ತರ ಕೊಟ್ಟಿದ್ದಾಳೆ. ಸಂಜಲ್ ಕನಸು ನನಸಾಗಿದೆ" ಎಂದು ಹೆಮ್ಮೆಯಿಂದ ಸಂಜಲ್ ತಾಯಿ ಸುರೇಖಾ ಹೇಳಿಕೊಳ್ಳುತ್ತಾರೆ.

ಬಾಹ್ಯಾಕಾಶ ಯಾನ ಮಾಡಲಿರುವ ಎರಡನೇ ಭಾರತೀಯ ಸಂಜಾತೆಬಾಹ್ಯಾಕಾಶ ಯಾನ ಮಾಡಲಿರುವ ಎರಡನೇ ಭಾರತೀಯ ಸಂಜಾತೆ

 ಜೆಫ್ ಬೆಜೋಸ್ ಬಾಹ್ಯಾಕಾಶ ಯಾನ

ಜೆಫ್ ಬೆಜೋಸ್ ಬಾಹ್ಯಾಕಾಶ ಯಾನ

ಬ್ಲೂ ಒರಿಜಿನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಇತರ ಮೂವರು ಬಾಹ್ಯಾಕಾಶಕ್ಕೆ ಜುಲೈ 20 ರ ಮಂಗಳವಾರದಂದು ಹಾರಲಿದ್ದಾರೆ. ಎರಡು ದಶಕಗಳ ಹಿಂದೆ ಬೆಜೋಸ್ ಬ್ಲೂ ಒರಿಜಿನ್‌ ಎಂಬ ಕಂಪನಿಯನ್ನು ಸ್ಥಾಪಿಸಿದರು. ಈಗ ಬ್ಲೂ ಒರಿಜಿನ್‌ ತನ್ನ ಮೊದಲ ಮಾನವ ಬಾಹ್ಯಾಕಾಶ ಹಾರಾಟಕ್ಕೆ ಸಹಕಾರಿಯಾಗುವ ಸಬ್ ಆರ್ಬಿಟಲ್ ಬಾಹ್ಯಾಕಾಶ ರಾಕೆಟ್ ನ್ಯೂ ಶೆಫರ್ಡ್ ನಿರ್ಮಿಸಿದೆ. ಜೆಫ್ ಬೆಜೋಸ್ ಜೊತೆಗೆ ಸಹೋದರ ಮಾರ್ಕ್, 82 ವರ್ಷದ ಮಾಜಿ ಪೈಲಟ್ ವಾಲಿ ಫಂಕ್ ಮತ್ತು 18 ವರ್ಷದ ಹದಿಹರೆಯದವರು ಸೇರಿಕೊಳ್ಳಲಿದ್ದಾರೆ. ಬ್ಲೂ ಒರಿಜಿನ್‌ನ ನ್ಯೂ ಶೆಫರ್ಡ್ ವಿಮಾನದ ಮೊದಲ ಹಾರಾಟವು ತನ್ನ ನಾಲ್ಕು ಪ್ರಯಾಣಿಕರನ್ನು ಕರ್ಮನ್ ರೇಖೆಯನ್ನು ಮೀರಿ ಹೊತ್ತೊಯ್ಯಲಿದೆ. ಭೂಮಿಯಿಂದ ಸರಿಸುಮಾರು 100 ಕಿಲೋಮೀಟರ್ ದೂರದಲ್ಲಿ ಕರೆದೊಯ್ಯುವ ಈ ನ್ಯೂ ಶೆಪರ್ಡ್ ವಿಮಾನವು ಭೂಮಿಗೆ ಹಿಂತಿರುಗುವ ಮುನ್ನ ಪ್ರಯಾಣಿಕರು ನೀಲಿ ಗ್ರಹದ ಸೊಬಗನ್ನು ನೋಡಲು ಅವಕಾಶ ಮಾಡಿಕೊಡುತ್ತದೆ. ವಿಮಾನವು ಸಂಜೆ 6.30ಕ್ಕೆ (ಐಎಸ್‌ಟಿ) ಹಾರಾಟ ನಡೆಸಲಿದೆ. ಕೇವಲ 10 ನಿಮಿಷಗಳ ಕಾಲ ಹಾರಾಡಲಿದೆ.

English summary
The Maharashtra-Born 30 year Woman, Sanjal Gavande is Part Of Jeff Bezos' Blue Origin Team and made India proud
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X