ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಲಯ ಅಮಾವಾಸ್ಯೆಯಂದು ತೀರಿಕೊಂಡವರ ಮನಸಾರೆ ಸ್ಮರಿಸಿ...

|
Google Oneindia Kannada News

ತೀರಿಕೊಂಡ ಮನೆಯ ಹಿರಿಯರು, ಸಂಬಂಧಿಕರು, ಗುರು-ಹಿರಿಯರು, ಸ್ನೇಹಿತರಿಗೂ ವರ್ಷಾವಧಿಯಲ್ಲಿ ಒಮ್ಮೆ ಶ್ರದ್ಧಾ-ಭಕ್ತಿಯಿಂದ ಸ್ಮರಿಸಲು, ಆಧ್ಯಾತ್ಮಿಕವಾಗಿಯೂ ಬಹಳ ಪ್ರಾಶಸ್ತ್ಯ ಇರುವ ದಿನ ಮಹಾಲಯ ಅಮಾವಾಸ್ಯೆ. ಗರುಡ ಪುರಾಣದಲ್ಲೂ ಹೀಗೊಂದು ಪ್ರಸ್ತಾವ ಇದೆ. ತೀರಿಕೊಂಡವರ ಆತ್ಮಕ್ಕೆ ಸದ್ಗತಿ ದೊರೆಯಲು ಅವರ ಸಂಬಂಧಿಕರೇ ಕರ-ಕ್ರಿಯಾದಿಗಳನ್ನು ಮಾಡಬೇಕು ಎಂದೇನೂ ಇಲ್ಲ.

ಸ್ನೇಹಿತರು, ಪರಿಚಯಸ್ಥರು ಆಗಿದ್ದರೂ ಸಾಕು. ಕೊನೆಗೆ ತೀರಿಕೊಂಡವರ ಹೆಸರು ಗೊತ್ತಿದ್ದರೂ ಸಾಕು. ಹಿಂದೂ ಧಾರ್ಮಿಕ ನಂಬಿಕೆ ಪ್ರಕಾರ, ವ್ಯಕ್ತಿ ತೀರಿಕೊಂಡ ನಂತರ ಅವರು ಪಿತೃ ದೇವತೆಗಳಾಗುತ್ತಾರೆ. ಮನುಷ್ಯರಾದ ನಮಗೆ ಒಂದು ವರ್ಷವಾದರೆ, ಪಿತೃ ದೇವತೆಗಳಿಗೆ ಅದು ಒಂದು ದಿನಕ್ಕೆ ಸಮ.

ಮಹಾಲಯದಲ್ಲಿ ಯಾವಾಗ ಶ್ರಾದ್ಧ ಮಾಡಬಾರದು? ಯಾವಾಗ ಮಾಡಬೇಕುಮಹಾಲಯದಲ್ಲಿ ಯಾವಾಗ ಶ್ರಾದ್ಧ ಮಾಡಬಾರದು? ಯಾವಾಗ ಮಾಡಬೇಕು

ಆದ್ದರಿಂದಲೇ ವರ್ಷಕ್ಕೆ ಒಮ್ಮೆ ಶ್ರಾದ್ಧ ಮಾಡುವ ಪರಿಪಾಠ ಇದೆ. ಇನ್ನು ಭಾದ್ರಪದದ ಈ ಮಾಸವನ್ನು ಪಿತೃ ಪಕ್ಷ ಎಂದೇ ಕರೆಯಲಾಗುತ್ತದೆ. ಅದರಲ್ಲೂ ಈ ಭಾದ್ರಪದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಮಹಾಲಯ ಅಮಾವಾಸ್ಯೆಯಂತಲೇ ಕರೆಯಲಾಗುತ್ತದೆ. ಈ ದಿನ ತೀರಿಕೊಂಡವರ ಹೆಸರಿನಲ್ಲಿ ತರ್ಪಣ ನೀಡಲಾಗುತ್ತದೆ.

ಈ ಆಚರಣೆ ಕೂಡ ಆಯಾ ಪ್ರಾದೇಶಿಕತೆ ಹಾಗೂ ನಂಬಿಕೆ, ಪದ್ಧತಿಯಂತೆ ನಡೆಸಲಾಗುತ್ತದೆ. ಅವುಗಳಲ್ಲಿ ಏನೇ ಭಿನ್ನತೆಯಿದ್ದರೂ ಅಂತಿಮ ಉದ್ದೇಶ ತೀರಿಹೋದವರನ್ನು ಸ್ಮರಣೆ ಮಾಡುವುದಾದ್ದರಿಂದ ಆಚರಣೆಯ ವಿಧಿ-ವಿಧಾನಕ್ಕಿಂತ ಉದ್ದೇಶವೇ ಮುಖ್ಯ. ಈ ಮಹಾಲಯ ಅಮಾವಾಸ್ಯೆಯಂದು ವಿವಿಧೆಡೆ ನಡೆದ ಆಚರಣೆಯ ಫೋಟೋಗಳು ಇಲ್ಲಿವೆ.

ಹೌರಾ ಸೇತುವೆ ಬಳಿ ಪಿಂಡ ಪ್ರದಾನ

ಹೌರಾ ಸೇತುವೆ ಬಳಿ ಪಿಂಡ ಪ್ರದಾನ

ಕೋಲ್ಕತ್ತಾದ ಹೌರಾ ಸೇತುವೆ ಬಳಿಯ ಗಂಗಾ ನದಿಯಲ್ಲಿ ಮಂಗಳವಾರ ಹಿಂದೂ ಧಾರ್ಮಿಕ ಪದ್ಧತಿ ಅನುಸಾರ ತೀರಿಕೊಂಡ ತಮ್ಮ ಹಿರಿಯರಿಗೆ ಪಿಂಡ ಪ್ರದಾನ ಮಾಡಿದರು.

ಗಯಾದಲ್ಲಿ ಹಿರಿಯರ ಸ್ಮರಣೆ

ಗಯಾದಲ್ಲಿ ಹಿರಿಯರ ಸ್ಮರಣೆ

ಗತಿಸಿದ ಹಿರಿಯರ ಸ್ಮರಣೆಯಲ್ಲಿ ಗಯಾದಲ್ಲಿನ ಫಲ್ಗು ನದಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಪಿಂಡ ಪ್ರದಾನ ಮಾಡಲಾಯಿತು.

ನಂಬಿಕೆ ಎಲ್ಲರಿಗೂ ಒಂದೇ

ನಂಬಿಕೆ ಎಲ್ಲರಿಗೂ ಒಂದೇ

ಗಯಾದಲ್ಲಿ ವಿದೇಶೀಯರೂ ಪಿತೃಗಳ ಆತ್ಮದ ಶಾಂತಿಗಾಗಿ ಪ್ರಾರ್ಥಿಸಿ ಪಿಂಡ ಪ್ರದಾನ ಮಾಡಿದ ಕ್ಷಣ.

ಬಿಹಾರದ ವೇದಿ ಸೀತಾಕುಂಡ

ಬಿಹಾರದ ವೇದಿ ಸೀತಾಕುಂಡ

ಬಿಹಾರದಲ್ಲಿನ ವೇದಿ ಸೀತಾಕುಂಡದಲ್ಲಿ ಪಿತೃಪಕ್ಷದ ನಿಮಿತ್ತ ಕೈಗೊಳ್ಳುವ ಕಾರ್ಯದ ಸಲುವಾಗಿ ಬಹಳ ಜನ ಸೇರಿದ್ದರು.

English summary
Mahalaya amavasya and pitru paksh rituals represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X