ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಹಾ' ಚಂಡಮಾರುತ ಪ್ರಭಾವ: ನವೆಂಬರ್ 6 ರಿಂದ ಎಲ್ಲೆಲ್ಲಿ ಮಳೆ

|
Google Oneindia Kannada News

ಬೆಂಗಳೂರು, ನವೆಂಬರ್ 2: ಕ್ಯಾರ್ ಚಂಡಮಾರುತದ ಬಳಿಕ ಬಂದಿರುವ 'ಮಹಾ' ಚಂಡಮಾರುತದ ಪ್ರಭಾವ ನವೆಂಬರ್ 6ರ ಬಳಿಕ ಗೋಚರಿಸಲಿದೆ.

ನವೆಂಬರ್ 6ರಿಂದ ಗುಜರಾತ್ ಸೇರಿದಂತೆ ಕರ್ನಾಟಕದ ಕರಾವಳಿ ಭಾಗ, ತಮಿಳುನಾಡು ಸೇರಿದಂತೆ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆ ಚಂಡಮಾರುತದಿಂದ ಭೂಕುಸಿತವಾಗುವ ಬಗ್ಗೆ ಯಾವುದೇ ನಿರ್ದಿಷ್ಟವಾದ ಸೂಚನೆ ನೀಡಿಲ್ಲ. ಕ್ಯಾರ್ ಚಂಡಮಾರುತದಿಂದಾಗಿ ಕಳೆದ ಕೆಲವು ದಿನಗಳಲ್ಲಿ ಗುಜರಾತ್‌ನ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿತ್ತು. ಅದು ಈಗ ದುರ್ಬಲಗೊಂಡು ಒಮಾನ್ ಕಡೆಗೆ ಸಾಗಿದೆ.

ನವೆಂಬರ್ 1ರಂದು ದಕ್ಷಿಣ ಕನ್ನಡದ ಮಾಣಿಯಲ್ಲಿ 8 ಸೆಂ,ಮೀನಷ್ಟು ಮಳೆಯಾಗಿದೆ.ಪುತ್ತೂರು, ಮೂಡಬಿದಿರೆ, ಮಂಗಳೂರು, ಪಣಂಬೂರ್, ಕಾರ್ಕಳ, ಹುನಗುಂದ, ಕೂಡ್ಲಿಗಿ, ಕೊಲ್ಲೂರು, ಶಿರಾಲಿ, ಹಳಿಯಾಳ, ಗೇರುಸೊಪ್ಪ, ಬೆಳಗಾವಿಯಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಶುಭ್ರ ಆಕಾಶವಿದೆ. ಮಳೆ ಬರುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಕೆಲವು ದಿನಗಳಿಂದ ಭಾರತಕ್ಕೆ ಅಪ್ಪಳಿಸಿದ್ದ ಕ್ಯಾರ್​ ಚಂಡಮಾರುತ ಈಗ ದುರ್ಬಲಗೊಂಡು ಒಮಾನ್​ ಕಡೆ ಸಾಗಿದೆ. ಆದರೆ ಈ ಬೆನ್ನಲ್ಲೇ ಮಹಾ ಚಂಡಮಾರುತ ಭಾರತಕ್ಕೆ ಅಪ್ಪಳಿಸಿದೆ. ಮಹಾ ಚಂಡಮಾರುತ ತೀವ್ರಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

ಗುಜರಾತಿನ ದಕ್ಷಿಣ ಭಾಗದಲ್ಲಿ ಭಾರಿ ಮಳೆ

ಗುಜರಾತಿನ ದಕ್ಷಿಣ ಭಾಗದಲ್ಲಿ ಭಾರಿ ಮಳೆ

ನವೆಂಬರ್​ 6ರಿಂದ ಗುಜರಾತ್​ನ ದಕ್ಷಿಣ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ. ಕ್ಯಾರ್​ ಚಂಡಮಾರುತದ ಬಳಿಕ ಮಹಾ ಚಂಡಮಾರುತ ತೀವ್ರಗೊಂಡಿದೆ. ಇದು ಲಕ್ಷದ್ವೀಪಗಳ ಸಮೀಪ ಪೂರ್ವ-ಮಧ್ಯ ಅರೇಬಿಯನ್​ ಸಮುದ್ರದಲ್ಲಿ ಕೇಂದ್ರೀಕೃತವಾಗಿದೆ ಎಂದು ಇಲ್ಲಿನ ಹವಾಮಾನ ಕೇಂದ್ರ ಹೇಳಿದೆ.

24 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಚಂಡಮಾರುತ

24 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಚಂಡಮಾರುತ

ಮಹಾ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ವಾಯುವ್ಯ ದಿಕ್ಕಿನಲ್ಲಿ ಮತ್ತು ನವೆಂಬರ್​ 2ರಿಂದ4ರ ವರೆಗೆ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಮಹಾ ಚಂಡಮಾರುತ ತೀವ್ರಗೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಟೆಗೆ 80-90 ಕಿ,ಮೀ ವೇಗದಲ್ಲಿ ಗಾಳಿ ಬೀಸಲಿದೆ

ಗಂಟೆಗೆ 80-90 ಕಿ,ಮೀ ವೇಗದಲ್ಲಿ ಗಾಳಿ ಬೀಸಲಿದೆ

ಮಹಾ ಚಂಡಮಾರುತ ಲಕ್ಷ ದ್ವೀಪದಲ್ಲಿ ಗಂಟೆಗೆ 80-90 ಕಿ.ಮೀ ವೇಗದಲ್ಲಿ ಬೀಸಲಿದೆ. ಗುಜರಾತ್​ ಕರಾವಳಿಗೆ ಮಹಾ ಚಂಡಮಾರುತದ ಅಬ್ಬರ ಹೆಚ್ಚಾಗಿರುತ್ತದೆ.

ಹವಾಮಾನ ಇಲಾಖೆ ಹೇಳುವುದೇನು?

ಹವಾಮಾನ ಇಲಾಖೆ ಹೇಳುವುದೇನು?

ನವೆಂಬರ್​ 6ರಿಂದ ಮಹಾ ಚಂಡಮಾರುತ ಪೂರ್ವ-ಈಶಾನ್ಯ ದಿಕ್ಕಿನಲ್ಲಿ ದಕ್ಷಿಣ ಗುಜರಾತ್​ ಕರಾವಳಿಯ ಕಡೆಗೆ ಮರು ತಿರುವು ತೆಗೆದುಕೊಳ್ಳುತ್ತದೆ. ಸೌರಾಷ್ಟ್ರದ ಕರಾವಳಿ ಸೇರಿದಂತೆ ದಕ್ಷಿಣ ಗುಜರಾತ್​ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರದ ನಿರ್ದೇಶಕ ಜಯಂತ್​ ಸರ್ಕಾರ್​ ತಿಳಿಸಿದ್ದಾರೆ.

English summary
Wind warning Gale wind speed reaching 90-100 kmph gusting to 110 kmph is prevailing over eastcentral Arabian Sea around the system centre .Sea becoming 125-135 kmph gusting .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X