ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮಾರುಕಟ್ಟೆಗೆ ಬಂತು ಮ್ಯಾಗಿ, ತಿಂದು ಹಾಯಾಗಿ ಮಲಗಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 19 : ಚಿಣ್ಣರ ನೆಚ್ಚಿನ, ಯುವತಿಯರ ಅಚ್ಚು ಮೆಚ್ಚಿನ, ಬ್ಯಾಚುಲರ್ಸ್ ಗಳ ಬೆಳಗಿನ ತಿಂಡಿ, ಟು ಮಿನಿಟ್ಸ್‌ ಮ್ಯಾಗಿ ಮತ್ತೆ ಮಾರುಕಟ್ಟೆಯಲ್ಲಿ ಸಿಗಲಿದೆ. ಹೌದು...ನೆಸ್ಲೆ ಮ್ಯಾಗಿ ನ್ಯೂಡಲ್ಸ್‌ ಎಲ್ಲ ಪರೀಕ್ಷೆಗಳಲ್ಲೂ ಪಾಸಾಗಿದ್ದು ಇನ್ನೆರಡು ವಾರದಲ್ಲಿ ನಿಮ್ಮ ಅಡುಗೆ ಮನೆ ಸೇರಲಿದೆ.

ಮಾರಾಟದ ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂದಕ್ಕೆ ಪಡೆಯಲು ಕರ್ನಾಟಕ ರಾಜ್ಯ ಸರ್ಕಾರ ಸಹ ತೀರ್ಮಾನಿಸಿದೆ. ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದಿನ ನಿರ್ದೇಶನ ನೀಡಲಾಗುವುದು ಎಂದು ಆರೋಗ್ಯ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.[ಬೆಂಗಳೂರಲ್ಲಿ ನೂಡಲ್ಸ್ ಮಾರಾಟ ಹೇಗಿದೆ]

ಮ್ಯಾಗಿಯಲ್ಲಿ ಆರೋಗ್ಯಕ್ಕೆ ಮಾರಕವಾದ ಸೀಸದ ಅಂಶ ಪತ್ತೆಯಾಗಿತ್ತು ಎಂಬ ಹಿನ್ನೆಲೆಯಲ್ಲಿ ಮಾರಾಟದ ಮೇಲೆ ನಿಷೇಧ ಹೇರಲಾಗಿತ್ತು. ಜನರ ಮತ್ತು ಮಾಧ್ಯಮಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಜೂನ್ ತಿಂಗಳಲ್ಲಿ ಮ್ಯಾಗಿ ಮೇಲೆ ನಿಷೇಧ ಹೇರಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಅಭಿಪ್ರಾಯಗಳು ಹರಿದಾಡಿದ್ದವು. ಅಲ್ಲದೇ ಕೆಲವರು ಹಾಸ್ಯಭರಿತವಾಗಿ ಕಾಮೆಂಟ್ ಗಳನ್ನು ದಾಖಲಿಸಿದ್ದರು.[ಬಾಂಬೆ ಕೋರ್ಟ್ ನಿಂದ ಮ್ಯಾಗಿ ಮೇಲಿನ ನಿಷೇಧ ತೆರವು]

ಕೇಂದ್ರ ಸರ್ಕಾರವೂ ಮ್ಯಾಗಿ ಮೇಲೆ ನಿರ್ಬಂಧ ಹೇರಿತ್ತು. ಸ್ವತಃ ಮ್ಯಾಗಿ ಕಂಪನಿಯೇ ವ್ಯಾಪಾರ ನಿಲ್ಲಿಸುವುದಾಗಿ ಘೋಷಣೆ ಮಾಡಿತ್ತು. ಆದರೆ ಇದೀಗ ರಾಜ್ಯದಲ್ಲಿ ಮ್ಯಾಗಿಯ ಶಾಪ ವಿಮೋಚನೆ ಕಾಲ ಹತ್ತಿರಕ್ಕೆ ಬಂದಿದೆ. ಮ್ಯಾಗಿ ನಿಷೇಧದ ಕತೆಯ ಮೇಲೆ ಇಲ್ಲಿದೆ ಒಂದು ಝಲಕ್..

ಬಿಗ್ ಬಿ ಮೇಲೆ ಕೇಸ್

ಬಿಗ್ ಬಿ ಮೇಲೆ ಕೇಸ್

ನೆಸ್ಲೆ ಸಂಸ್ಥೆಯ 2 ಮಿನಿಟ್ ನ ರೆಡಿಮೇಡ್ ಫುಡ್ ಮ್ಯಾಗಿ ಉತ್ಪನ್ನಗಳ ಪರ ಪ್ರಚಾರ ನಡೆಸಿದ್ದಕ್ಕೆ ಮಾಧುರಿ ದೀಕ್ಷಿತ್, ಬಿಗ್ ಬಿ ಅಮಿತಾಬ್ ಬಚ್ಚನ್, ನಟಿ ಪ್ರೀತಿ ಜಿಂಟಾ ವಿರುದ್ಧ ಪ್ರಕರಣಗಳು ದಾಖಲಾಗಿದ್ದು ಮ್ಯಾಗಿ ನಿಷೇಧದ ಆರಂಭಿಕ ಹಂತ. ಉತ್ತರ ಪ್ರದೇಶದಲ್ಲಿ ಮ್ಯಾಗಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾಗ ಅದರಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಸೀಸದ ಅಂಶ ಪತ್ತೆಯಾಗಿತ್ತು.

ಸೈನಿಕರೇ ಮ್ಯಾಗಿ ತಿನ್ನಬೇಡಿ

ಸೈನಿಕರೇ ಮ್ಯಾಗಿ ತಿನ್ನಬೇಡಿ

ದೇಶ ಕಾಯುವ ಸೈನಿಕರಿಗೆ ಮ್ಯಾಗಿ ನೂಡಲ್ಸ್ ತಿನ್ನದಂತೆ ಅಧಿಕೃತ ಆದೇಶವನ್ನು ನೀಡಲಾಯಿತು, ಸೀಸದ ಪ್ರಮಾಣದ ಬಗ್ಗೆ ಪರೀಕ್ಷಾ ವರದಿ ಬಂದ ಮೇಲೆ ನೋಡೋಣ.. ಅಲ್ಲಿ ತನಕ ನ್ಯೂಡಲ್ಸ್ ತಿನ್ನಬೇಡಿ ಎಂದು ಸೈನಿಕರಿಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದರು.

ಮಾರಾಟ ಬಂದ್ ಮಾಡಿದ ಕಂಪನಿ

ಮಾರಾಟ ಬಂದ್ ಮಾಡಿದ ಕಂಪನಿ

ಇಷ್ಟೆಲ್ಲ ವಿವಾದ ಉಂಟಾದ ಮೇಲೆ ಕಂಪನಿ ಕೇವಲ ಜೂನ್ 5 ರಂದು ಮ್ಯಾಗಿ ಮಾರಾಟವನ್ನು ಭಾರತದಲ್ಲಿ ಹಿಂದಕ್ಕೆ ಪಡೆದುಕೊಂಡಿತು. ಮ್ಯಾಗಿ ನ್ಯೂಡಲ್ಸ್‌ ನಲ್ಲಿ ಯಾವುದೇ ಹಾನಿಕಾರಕ ಅಂಶ ಇಲ್ಲ. ಇದರ ಸೇವನೆಯಿಂದ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಆಗುವುದಿಲ್ಲ ಎಂದು ನೆಸ್ಲೆ ಸಿಇಒ ಪಾಲ್‌ ಬಲ್ಕೆ ಸಮರ್ಥನೆ ನೀಡಿದ್ದರು.

ಪರೀಕ್ಷೆಯಲ್ಲಿ ಮ್ಯಾಗಿ ಪಾಸ್

ಪರೀಕ್ಷೆಯಲ್ಲಿ ಮ್ಯಾಗಿ ಪಾಸ್

ಭಾರತೀಯ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಮ್ಯಾಗಿ ಮೇಲೆ ಹೇರಿದ್ದ ನಿಷೇಧವನ್ನು ಬಾಂಬೆ ಹೈಕೋರ್ಟ್ ತೆರವು ಮಾಡಿದ್ದು ಮ್ಯಾಗಿಗೆ ಸಂದ ಆರಂಭಿಕ ಜಯ. ಆಗಸ್ಟ್ ನಲ್ಲಿ ನಡೆದ ಪ್ರಯೋಗಾಲಯದ ಪರೀಕ್ಷೆಗಳು ಮ್ಯಾಗಿಯಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂದು ತಿಳಿಸಿದ್ದವು.

 ನೂಡಲ್ಸ್ ಮಾರುಕಟ್ಟೆಗೆ ರಾಮ್ ದೇವ್

ನೂಡಲ್ಸ್ ಮಾರುಕಟ್ಟೆಗೆ ರಾಮ್ ದೇವ್

ಪತಂಜಲಿ ಉತ್ಪನ್ನಗಳ ಮೂಲಕ ಜನರಿಗೆ ಹತ್ತಿರವಾಗಿರುವ ಬಾಬಾ ರಾಮ್ ದೇವ್ ಸೆಪ್ಟೆಂಬರ್ ನಲ್ಲಿ ಸ್ವದೇಶಿ ನ್ಯೂಡಲ್ಸ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಗೋಧಿಯಿಂದ ತಯಾರಿಸಿದ ಪತಂಜಲಿ "ಆಟಾ ನೂಡಲ್ಸ್‌'ಅನ್ನು ಬಾಬಾ ರಾಮ್‌ದೇವ್‌ ಹರಿದ್ವಾರದಲ್ಲಿ ಬಿಡುಗಡೆ ಮಾಡಿದ್ದರು.

ಹಾಗಾದರೆ ಮುಂದೇನು?

ಹಾಗಾದರೆ ಮುಂದೇನು?

ನಿಷೇಧವನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆದರೆ ಮತ್ತೆ ದೇಶದಲ್ಲಿ ಮ್ಯಾಗಿ ಪರ್ವ ಆರಂಭವಾಗಲಿದೆ. ಸ್ವದೇಶಿಯ ಪತಂಜಲಿ ನೂಡಲ್ಸ್ ಮತ್ತು ಮ್ಯಾಗಿ ನೂಡಲ್ಸ್ ನಡುವೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಏರ್ಪಡಬಹುದು

English summary
Maggi, the popular instant noodle brand, is set to return to store shelves as Nestle said it cleared tests mandated by the Bombay High Court and that the company will restart production of the snack within two-three weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X