ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಗಿಗೆ ಮೈಸೂರು ಲ್ಯಾಬ್‌ನಲ್ಲಿ ಮತ್ತೆ ಪರೀಕ್ಷೆ ನಡೆಸಿ : ಸುಪ್ರೀಂ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಡಿಸೆಂಬರ್ 16 : ತನ್ನ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿಕೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟರೂ ಮ್ಯಾಗಿಗೆ ಸಂಕಟ ತಪ್ಪಿಲ್ಲ. ಮೈಸೂರಿನ ಪ್ರಯೋಗಾಲಯದಲ್ಲಿ ಮ್ಯಾಗಿಯ ಹೊಸ ಮಾದರಿಯನ್ನು ಪುನಃ ಪರೀಕ್ಷೆಗೆ ಒಳಪಡಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಮ್ಯಾಗಿ ನೂಡಲ್ಸ್‌ ಮೇಲೆ ದೇಶದಾದ್ಯಂತ ಹೇರಿದ್ದ ನಿಷೇಧವನ್ನು ಬಾಂಬೆ ಹೈಕೋರ್ಟ್‌ ತೆರವುಗೊಳಿಸಿತ್ತು. ನಿಷೇಧ ತೆರವುಗೊಂಡ ಬಳಿಕ ಮ್ಯಾಗಿ ಪುನಃ ಮಾರುಕಟ್ಟೆ ಪ್ರವೇಶಿಸಿತ್ತು. [ಮ್ಯಾಗಿ ಮ್ಯಾಜಿಕ್: 21 ದಿನದಲ್ಲಿ 50 ಮಿಲಿಯನ್ ಮಾರಾಟ]

maggi

ಮಾರುಕಟ್ಟೆಗೆ ಮ್ಯಾಗಿ ವಾಪಸ್ ಬಂದಿರುವುದನ್ನು ಪ್ರಶ್ನಿಸಿ ಎಫ್‌ಎಸ್‌ಎಸ್‌ಎಐ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಮಾರುಕಟ್ಟೆಗೆ ಬಂದಿರುವ ಮ್ಯಾಗಿ ಉತ್ಪನ್ನದ ಪರೀಕ್ಷೆಯನ್ನು ಮತ್ತೆ ಮೈಸೂರಿನ ಲ್ಯಾಬ್‌ನಲ್ಲಿ ನಡೆಸುವಂತೆ ಬುಧವಾರ ಆದೇಶಿಸಿದೆ. [ನಂಜನಗೂಡಲ್ಲಿ ಬಿಸಿ ಬಿಸಿ ಮ್ಯಾಗಿ ರೆಡಿಯಾಗ್ತಿದೆ!]

ಕಳೆದ ಎರಡು ವಾರಗಳಿಂದ ಎಫ್‌ಎಸ್‌ಎಸ್‌ಎಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಕಳೆದ ವಾರ ಅರ್ಜಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ನೆಸ್ಲೆ ಕಂಪನಿಗೆ ಕೋರ್ಟ್ ಸೂಚಿಸಿತ್ತು. ಮಂಗಳವಾರ ಕೇಂದ್ರ ಸರ್ಕಾರದ ಬಳಿ ಅರ್ಜಿಯ ಬಗ್ಗೆ ಅಭಿಪ್ರಾಯ ಕೇಳಿತ್ತು. [ವಾವ್! ಮತ್ತೆ ಭಾರತೀಯರ ಹೊಟ್ಟೆ ಸೇರಲಿದೆ ಮ್ಯಾಗಿ?]

ಇಂದು ಪುನಃ ಮ್ಯಾಗಿ ಪರೀಕ್ಷೆಗೆ ಆದೇಶ ನೀಡಿರುವ ಕೋರ್ಟ್, 2016ರ ಜನವರಿ 13ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಜೂನ್‌ 5ರಂದು ಬಾಂಬೆ ಹೈಕೋರ್ಟ್ ದೇಶಾದ್ಯಂತ ಮ್ಯಾಗಿ ಮೇಲೆ ನಿಷೇಧ ಹೇರಿತ್ತು. ಕೆಲವು ದಿನಗಳ ಹಿಂದೆ ನಿಷೇಧವನ್ನು ತೆರವುಗೊಳಿಸಿತ್ತು. ಬಾಂಬೆ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಎಫ್‌ಎಸ್‌ಎಸ್‌ಎಐ ಪ್ರಶ್ನಿಸಿತ್ತು.

ಇದರ ನಡುವೆಯೇ ಮ್ಯಾಗಿಗೆ ನಿಷೇಧ ಹೇರಿರುವುದರಿಂದ 640 ಕೋಟಿ ನಷ್ಟವಾಗಿದೆ ಆದ್ದರಿಂದ ಪರಿಹಾರ ನೀಡುವಂತೆ ಕೋರಿ ನೆಸ್ಲೆ ಕಂಪೆನಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಲಿದೆ.

English summary
Supreme Court of India on Wednesday ordered for fresh testing of Maggi samples at Mysuru lab. Supreme Court is seized of a matter in which the return of Maggi noodles had been challenged by the FSSAI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X