ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1.10 ಕೋಟಿ ಪತ್ರ ಬರೆದ ಮಧ್ಯ ಪ್ರದೇಶ ಮುಖ್ಯಮಂತ್ರಿ, ಅಂಚೆ ಇಲಾಖೆಗೆ ತಲೆನೋವು

|
Google Oneindia Kannada News

ಭೋಪಾಲ್, ಆಗಸ್ಟ್ 27: ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬರೋಬ್ಬರಿ 1.10 ಕೋಟಿ ಪತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಹೌದು, ರಕ್ಷಾ ಬಂಧನ್ ಪ್ರಯುಕ್ತ ರಾಜ್ಯದ 'ಅಕ್ಕ -ತಂಗಿಯರಿಗೆ' ಪತ್ರ ಬರೆದಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು, ತಮ್ಮ ಸರ್ಕಾರದ ಕಾರ್ಯಕ್ರಮಗಲ ಪಟ್ಟಿ ವಿವರಿಸಿ, ಇದೇ ವರ್ಷಾಂತ್ಯಕ್ಕೆ ನಡೆಯುವ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

Madya Pradesh CM Shivraj Singh Chauhan posted 1.10 crore letters

ಈ ಮುದ್ರಿತ ಪತ್ರಗಳಲ್ಲಿ ಒಂದೇ ವಿಷಯವೇ ಇದೆ. ಆದರೆ 1.10 ಕೋಟಿ ವಿಳಾಸಗಳನ್ನು ಬರೆದು ಪೋಸ್ಟ್‌ ಮಾಡಲಾಗಿದೆ. ಈ ಪೋಸ್ಟ್‌ಗಳನ್ನು ಹಂಚುವುದು ಅಂಚೆ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಿಸಿದೆ.

ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದ ಕಿರಾತಕರಿಗೆ ಮರಣ ದಂಡನೆ: ಐತಿಹಾಸಿಕ ತೀರ್ಪುಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದ ಕಿರಾತಕರಿಗೆ ಮರಣ ದಂಡನೆ: ಐತಿಹಾಸಿಕ ತೀರ್ಪು

ಅಂಚೆ ವಿತರಿಸಲು ಅಂಚೆ ಕಚೇರಿಗಳಲ್ಲಿ ವಿಶೇಷ ವಿಭಾಗಗಳನ್ನೇ ಅಂಚೆ ಇಲಾಖೆ ತೆರೆದಿದೆ. ಪತ್ರಗಳ ವಿಭಾಗ, ಹಾಗೂ ತಲುಪಿಸುವಿಕೆಗೆ ವಿಶೇಷ ಜಾಗೃತೆ ವಹಿಸುವಂತೆ ಇಲಾಖೆ ತನ್ನ ಸಿಬ್ಬಂದಿಗಳಿಗೆ ಸೂಚನೆ ನೀಡಿದೆ.

ಯಾರಿಗೆ ಪತ್ರ ತಲುಪಿಲ್ಲವೋ ಅವರು, ವಾಟ್ಸ್‌ಆಫ್ ಅಥವಾ ಉಚಿತ ಕರೆ ಸಂಖ್ಯೆಗೆ ಕರೆ ಮಾಡಿ ಹೇಳಬಹುದಾಗಿದೆ. ಹಾಗಾಗಿ ಅಂಚೆ ಇಲಾಖೆ ಮೇಲೆ ಒತ್ತಡ ಹೆಚ್ಚಿದ್ದು, ಎಲ್ಲಾ ಪತ್ರಗಳನ್ನು ತಪ್ಪದೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

English summary
Madya Pradesh CM Shivraj Singh Chauhan posted 1.10 crore letters. He wrote his governments programs and ask people to support his government in upcoming assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X