• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಆರ್‌ಡಿಒ ಔಷಧ ಉತ್ಪಾದನೆ ಪರವಾನಗಿಯನ್ನು ಬೇರೆ ಪ್ರಯೋಗಾಲಯಗಳಿಗೆ ಏಕೆ ನೀಡಿಲ್ಲ?

|
Google Oneindia Kannada News

ಚೆನ್ನೈ, ಜೂನ್ 24: ಕೊರೊನಾ ಸೋಂಕಿಗೆ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಡಿಯಾಕ್ಸಿ ಡಿ ಗ್ಲೂಕೋಸ್ (2-DG) ಔಷಧ ಉತ್ಪಾದನೆ ಪರವಾನಗಿಯನ್ನು ಏಕೆ ರೆಡ್ಡಿ ಲ್ಯಾಬೊರೇಟರಿಗೆ ಮಾತ್ರ ನೀಡಲಾಗಿದೆ? ಬೇರೆ ಸಂಸ್ಥೆಗಳಿಗೆ ಪರವಾನಗಿ ನೀಡಿಲ್ಲವೇಕೆ ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ.

ತೀವ್ರತರ ಕೊರೊನಾ ಸೋಂಕಿನ ಪ್ರಭಾವವಿರುವ ರೋಗಿಗಳಿಗೆ ನೀಡಲು ಅನುಮೋದನೆ ಪಡೆದುಕೊಂಡಿರುವ ಪುಡಿ ರೂಪದ ಈ ಔಷಧ ಉತ್ಪಾದನೆ ಹೆಚ್ಚಳಕ್ಕೆ ದೇಶದ ಹಲವು ಪ್ರತಿಷ್ಠಿತ ಪ್ರಯೋಗಾಲಯಗಳಿಗೆ ಏಕೆ ಪರವಾನಗಿ ನೀಡಿಲ್ಲ ಎಂದು ನ್ಯಾಯಮೂರ್ತಿ ಎನ್. ಕಿರುಬಕರಣ್ ಹಾಗೂ ಟಿ.ವಿ. ತಮಿಳ್‌ಸೆಲ್ವಿ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ.

DRDO ಅಭಿವೃದ್ಧಿಪಡಿಸಿದ ಕೊರೊನಾ ಔಷಧಿಯನ್ನು ಎಂಥವರು ಬಳಸಬೇಕು?DRDO ಅಭಿವೃದ್ಧಿಪಡಿಸಿದ ಕೊರೊನಾ ಔಷಧಿಯನ್ನು ಎಂಥವರು ಬಳಸಬೇಕು?

ಎರಡನೇ ಅಲೆಯಲ್ಲಿ ಸೋಂಕಿನಿಂದ ಎಷ್ಟೊಂದು ಸಾವುಗಳು ಸಂಭವಿಸಿವೆ. ಎಷ್ಟು ಮಂದಿ ಆಸ್ಪತ್ರೆಗಳಿಗೆ ಸೇರುತ್ತಿದ್ದಾರೆ. ಜೊತೆಗೆ ಮೂರನೇ ಅಲೆ ಎಚ್ಚರಿಕೆಯನ್ನೂ ತಜ್ಞರು ನೀಡಿದ್ದಾರೆ. ಈ ಹೊತ್ತಿನಲ್ಲಿ ಈ ಔಷಧ ಉತ್ಪಾದನೆಗೆ ಉತ್ತೇಜನ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಕೇವಲ ಒಂದು ಸಂಸ್ಥೆಗೆ ಮಾತ್ರ ಔಷಧ ಉತ್ಪಾದನೆಗೆ ಪರವಾನಗಿ ನೀಡಲಾಗಿದೆ. ಈ ವಿಚಾರದಲ್ಲಿ ರಕ್ಷಣಾ ಸಚಿವಾಲಯ, ಡಿಆರ್‌ಡಿಒ, ಕೇಂದ್ರ ಆರೋಗ್ಯ ಸಚಿವಾಲಯದ ಪ್ರತಿಕ್ರಿಯೆಯನ್ನು ಶುಕ್ರವಾರದ ಒಳಗೆ ತಿಳಿಸಬೇಕು ಎಂದು ಕೇಂದ್ರ ಸರ್ಕಾರದ ಸಲಹೆಗಾರರಿಗೆ ನಿರ್ದೇಶನ ನೀಡಿದೆ.

ಚೆನ್ನೈ ಮೂಲದ ಖಾಸಗಿ ಕಂಪನಿ ಉದ್ಯೋಗಿ ಡಿ. ಸರವಣ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧಾರದಲ್ಲಿ ಈ ಮಧ್ಯಂತರ ನಿರ್ದೇಶನ ನೀಡಲಾಗಿದೆ.

ಡಿಆರ್‌ಡಿಒದ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯಾರ್ ಮೆಡಿಸಿನ್ ಅಂಡ್ ಅಲೈಡ್ ಸೈನ್ಸಸ್‌ನ ಈ ಔಷಧಿಯ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿದೆ. ಆದರೆ ಈ ಔಷಧಿ ತಯಾರಿ ಪರವಾನಗಿಯನ್ನು ಡಾ. ರೆಡ್ಡಿ ಲ್ಯಾಬೊರೇಟರಿಗೆ ಮಾತ್ರ ನೀಡಲಾಗಿದೆ. 2.34 ಗ್ರಾಂ ಪುಡಿಯ ಸ್ಯಾಶೆಗೆ 990 ರೂ ದರ ನಿಗದಿ ಮಾಡಿ ಮಾರಾಟಕ್ಕೆ ಯೋಜಿಸಿದೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ.

ಡಿಆರ್‌ಡಿಒ ಈ ಔಷಧದ ಬಗ್ಗೆ ತಾಂತ್ರಿಕ ಜ್ಞಾನ ಹಂಚಿಕೊಂಡಿರುವ ಹಾಗೂ ಔಷಧಿಯನ್ನು ಕೈಗೆಟುಕುವ ದರದಲ್ಲಿ ಮಾರಾಟ ಮಾಡುವ ಸಂಬಂಧ ಮಾಹಿತಿ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಕೋವಿಡ್ ಮೊದಲ ಅಲೆ ಹೆಚ್ಚಾದ ಸಮಯದಲ್ಲಿ ಪ್ರಧಾನಿ ಮೋದಿ ಅವರ ಸಲಹೆಯ ಮೇರೆ ಡಿಆರ್ಡಿಒದ ವಿಭಾಗವಾದ ದಿ ಇನ್ ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸನ್ ಆಂಡ್ ಅಲೈಡ್ ಸೈನ್ಸಸ್ ಸಂಸ್ಥೆ ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯೂಲರ್ ಆಂಡ್ ಮಾಲಿಕ್ಯುಲರ್ ಬಯೋಲಜಿ ಸಹಯೋಗದಲ್ಲಿ ಈ ಔಷಧವನ್ನು ಮೊದಲ ಪ್ರಯೋಗಕ್ಕೆ ಬಳಸಿತ್ತು.

English summary
Madras HC questions centre why DRDO covid drug licence given only to one laboratory
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X