ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧುರೈ ಅಧೀನಂ ಪೀಠ ಪ್ರವೇಶಿಸದಂತೆ ನಿತ್ಯಾನಂದ ಸ್ವಾಮೀಜಿಗೆ ತಡೆ

By Mahesh
|
Google Oneindia Kannada News

ಮಧುರೈ, ಅಕ್ಟೋಬರ್ 12: ಸುಮಾರು 2500 ವರ್ಷಗಳ ಇತಿಹಾಸ ಹೊಂದಿರುವ ಮಧುರೈನ ಶೈವ ಅದೀನಂ ಪೀಠಕ್ಕೇರದಂತೆ ಕಳಂಕಿತ ಸ್ವಾಮೀಜಿ ನಿತ್ಯಾನಂದನಿಗೆ ಹೈಕೋರ್ಟ್ ತಡೆಯೊಡ್ಡಿದೆ.

ವಿವಾದದಲ್ಲೇ ಮುಳುಗೆದ್ದ ಟಾಪ್ 10 'ದೇವಮಾನವರು'ವಿವಾದದಲ್ಲೇ ಮುಳುಗೆದ್ದ ಟಾಪ್ 10 'ದೇವಮಾನವರು'

ಪೊಲೀಸ್ ರಕ್ಷಣೆಯೊಂದಿಗೆ ಮದುರೈ ಅಧೀನಂ ಪೀಠ ಪ್ರವೇಶಿಸಲು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗುರುವಾರದಂದು ರದ್ದುಗೊಳಿಸಿದೆ.

ನಿತ್ಯಾನಂದ ತಿರುವಣ್ಣಾಮಲೈಗೆ ಶಿಫ್ಟ್, ಶೈವರಿಂದ ವಿರೋಧನಿತ್ಯಾನಂದ ತಿರುವಣ್ಣಾಮಲೈಗೆ ಶಿಫ್ಟ್, ಶೈವರಿಂದ ವಿರೋಧ

ಜಸ್ಟೀಸ್ ಆರ್ ಮಹದೇವನ್ ಅವರಿದ್ದ ಮಧುರೈ ನ್ಯಾಯಪೀಠವು, ನಿತ್ಯಾನಂದ ಹಾಗೂ ಆತನ ಸಹಚರರು ಮಧುರೈ ಪೀಠ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದು, ಅಲ್ಲಿನ ಆಡಳಿತದಲ್ಲಿ ತಲೆಹಾಕದಂತೆ ತಾಕೀತು ಮಾಡಿದೆ.

Madras HC bans entry of Nithyananda into Madurai mutt

ತಮಿಳುನಾಡಿನ ಮಧುರೈ ಮೀನಾಕ್ಷಿ ದೇವಾಲಯದ ಸನ್ನಿಧಿಯಲ್ಲಿರುವ ಐತಿಹಾಸಿಕ 'ಆಧೀನಂ ಮಹಾಸಂಸ್ಥಾನ' ಮಠದ 293ನೇ ಗುರುವಾಗಿ ಕಳಂಕಿತ ಸ್ವಾಮೀಜಿ ನಿತ್ಯಾನಂದ ನೇಮಕಗೊಂಡು ಐದು ವರ್ಷಗಳು ಕಳೆದಿವೆ. ಆದೀನಂ ಮಹಾಸಂಸ್ಥಾನ ಮಠದ 292ನೇ ಗುರುವಾಗಿದ್ದ ಅರುಣಗಿರಿನಾಥ ನಾಣಸಂಬಂಧ ಮರಮಾಚಾರ್ಯ ಸ್ವಾಮೀಜಿಯವರು ನಿತ್ಯಾನಂದನಿಗೆ ಅಧಿಕಾರ ವಹಿಸಿಕೊಟ್ಟಿದ್ದರು.

ಮೀನಾಕ್ಷಿ ದೇಗುಲ ದೇಶದಲ್ಲೇ ಅತ್ಯಂತ ಸ್ವಚ್ಛ ಸಾಂಪ್ರದಾಯಿಕ ಸ್ಥಳಮೀನಾಕ್ಷಿ ದೇಗುಲ ದೇಶದಲ್ಲೇ ಅತ್ಯಂತ ಸ್ವಚ್ಛ ಸಾಂಪ್ರದಾಯಿಕ ಸ್ಥಳ

ಕರ್ನಾಟಕದ ಬಿಡದಿ ಬಳಿ ಆಶ್ರಮ ಹೊಂದಿರುವ ನಿತ್ಯಾನಂದ ಅವರು ಇತ್ತೀಚೆಗೆ ಮಧುರೈ ಪೀಠಕ್ಕೆ ಪ್ರವೇಶ ಬಯಸಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ರಾಸಲೀಲೆ ಪ್ರಕರಣದಲ್ಲಿ 2010ರಲ್ಲಿ ಸಿಲುಕಿದ್ದ ನಿತ್ಯಾನಂದ ಅವರು 2012ರಿಂದ ಮಧುರೈ ಪೀಠಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ.(ಪಿಟಿಐ)

English summary
The Madras High Court today banned controversial self-styled godman Nithyananda from entering the 2500-year-old Saivite Madurai Adheenam mutt here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X