ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದ ಈ ಕೋಣದ ಬೆಲೆ ಕೇಳಿ, ಹೌಹಾರಬೇಡಿ

By Mahesh
|
Google Oneindia Kannada News

ಭೋಪಾಲ್, ಜುಲೈ 18: ಹೈದರಾಬಾದಿನ 'ಸದರ್ ಹಬ್ಬ' ದಲ್ಲಿ ಕಂಡಿದ್ದ ಯುವರಾಜ ಕೋಣ ಸಾಲಿಗೆ ಸೇರುವ ಮತ್ತೊಂದು ದುಬಾರಿ ಕೋಣ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಕಂಡು ಬಂದಿದೆ. ಹೀರಾ ಹೆಸರಿನ ಈ ಕೋಣದ ಬೆಲೆ 4 ಕೋಟಿ ರು ಎಂದು ನಿಗದಿ ಮಾಡಲಾಗಿದೆ.

ಹೀರಾ ಎಂಬ ಈ ಕೋಣವನ್ನು ಇದರ ಮಾಲೀಕ ಮುನ್ನಾ ಸಿಂಗ್ ಏಳು ವರ್ಷಗಳ ಹಿಂದೆ ಬಹಳ ಕಡಿಮೆಬೆಲೆಗೆ ಖರೀದಿಸಿದ್ದ. ಕೋಣನಿಗೆ ತಿಂಗಳಿಗೆ 25 ರಿಂದ 30 ಸಾವಿರ ಖರ್ಚು ಮಾಡುತ್ತಿದ್ದ. ಆದರೆ, ಕೋಣನ ತಳಿ ಸಂವರ್ಧನೆ ಮೂಲಕ ಲಕ್ಷ ಲಕ್ಷ ಹಣ ಸಂಪಾದಿಸಿದ್ದಾನೆ.

Madhyapradesh: Buffalo 'Hira' gets Rs 4crore price tag

ಮಹಾ ವೀರ್ಯದಾನಿ ಎನಿಸಿಕೊಂಡಿರುವ ಈ ಕೋಣನ ಮೂಲಕ ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ತಳಿ ಸಂವರ್ಧನೆಯಲ್ಲಿ ಹುಟ್ಟಿದ ಕರುಗಳು 45-ರಿಂದ 50 ಕೆಜಿ ತೂಕ ಹೊಂದಿದೆ. ಇದಲ್ಲದೆ ಹೆಣ್ಣುಕರುಗಳು ದೊಡ್ಡದಾದ ಮೇಲೆ 42-50 ಲೀಟರ್ ಹಾಲು ಕೊಡುವ ನಿರೀಕ್ಷೆಯಿದೆ.[ಏಳು ಕೋಟಿ ಬೆಲೆಬಾಳುವ ಕೋಣವನ್ನು ನೋಡಿದ್ದೀರಾ?]

ಈಗ ಹೀರಾನನ್ನು ಮಾರಾಟ ಮಾಡಲು ಮುಂದಾಗಿದ್ದು, ದೇಶದ ನಾನಾ ಭಾಗಗಳಿಂದ ಹೀರಾನನ್ನು ನೋಡಲು ಬರುತ್ತಿದ್ದಾರಂತೆ. ಪಶು ಸಂಗೋಪನೆ ಮಾಡುವವರು ದೇಶದ ನಾನಾ ಕಡೆಯಿಂದ ಬರುತ್ತಿದ್ದಾರೆ.

ಇತ್ತೀಚೆಗೆ ಸಿದಿ ಜಿಲ್ಲೆಯ ಉದ್ಯಮಿಯೊಬ್ಬ ಹಿರಾನಿಗೆ 4 ಕೋಟಿ ರು ನೀಡಲು ಮುಂದಾಗಿದ್ದಾನೆ. ಬಹುಶಃ ಡೀಲ್ ಮುಕ್ತಾಯವಾಗಲಿದೆ ಎಂದು ಮುನ್ನಾ ಸಿಂಗ್ ಖುಷಿಯಿಂದ ಹೇಳುತ್ತಾನೆ. ಹೀಗಾಗಿ 7 ಕೋಟಿ ರು ಬಾಳುವ ಯುವರಾಜ ಕೋಣ ಈಗಲೂ ಅತ್ಯಂತ ದುಬಾರಿ ಕೋಣ ಎಂದೆನಿಸಿಕೊಂಡಿದೆ.

English summary
'Hira', a buffalo in MP's Rewa district has a price tag of Rs 4 crore. Owing to its strong fertility, the buffalo drums up some good business for its owner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X