• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಮಧ್ಯಸ್ಥಿಕೆ ನಂತರವೂ ಬಗೆಹರಿದಿಲ್ಲ ಟಿಕೆಟ್ ಹಂಚಿಕೆ ಬಿಕ್ಕಟ್ಟು!

By ವಿನೋದ್ ಕುಮಾರ್ ಶುಕ್ಲಾ
|
   ಕಾಂಗ್ರೆಸ್ ನಲ್ಲಿ ಬಗೆ ಹರಿಯದ ಟಿಕೆಟ್ ಹಂಚಿಕೆ ಬಿಕ್ಕಟ್ಟು | Oneindia Kannada

   ಇಂದೋರ್, ಅಕ್ಟೋಬರ್ 27: ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆಯೇ ಕಾಂಗ್ರೆಸ್ಸಿಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ.

   ರಾಹುಲ್ ಗಾಂಧಿ ಅವರೇ ಖುದ್ದಾಗಿ ಈ ಬಗ್ಗೆ ಗಮನ ಹರಿಸುತ್ತಿದ್ದರೂ ಅತೃಪ್ತಿಯ ಹೊಗೆ ಮಾತ್ರ ಏಳುತ್ತಲೇ ಇದೆ. ಯಾರಿಗೆಲ್ಲ ಟಿಕೆಟ್ ನೀಡಬಹುದು ಎಂದು ರಾಹುಲ್ ಗಾಂಧಿ ಪಟ್ಟಿಯೊಂದನ್ನು ತಯಾರಿಸಿದ್ದರೋ, ಆ ಪಟ್ಟಿಯ ಬಗ್ಗೆಯೇ ರಾಜ್ಯದಲ್ಲಿ ಅಪಸ್ವರ ಎದ್ದಿದೆ.

   ಹಿರಿಯ ನಾಯಕರಿಗೆ ಟಿಕೆಟ್ ಇಲ್ಲ! ಫಲಿಸುತ್ತಾ, ಉಲ್ಟಾ ಹೊಡೆಯತ್ತಾ ಕಾಂಗ್ರೆಸ್ ತಂತ್ರ?

   ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದರೆ, ಇತ್ತ ಮುಖ್ಯಮಂತ್ರಿ ಅಭ್ಯರ್ಥಿ ಎಮದೇ ಬಿಂಬಿತವಾಗುತ್ತಿರುವ ಇನ್ನೋರ್ವ ಯುವ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ತಮಗೆ ಬೇಕಾದವರಿಗೆ ಟಿಕೆಟ್ ನೀಡಲು ಹವಣಿಸುತ್ತಿದ್ದಾರೆ.

   ಲೆಕ್ಕವಿಲ್ಲದಷ್ಟು ಸಭೆಗಳು!

   ಲೆಕ್ಕವಿಲ್ಲದಷ್ಟು ಸಭೆಗಳು!

   ಪಕ್ಷದ ಔಪಚಾರಿಕ ಸಭೆಗಳು ಒಂದೆಡೆಯಾದರೆ, ಅನೌಪಚಾರಿಕ ಸಭೆಗಳಂತೂ ದಿನೇ ದಿನೇ ನಡೆಯುತ್ತಲೇ ಇವೆ. ಪ್ರತಿ ಸಭೆಯ ಅಂತ್ಯದಲ್ಲೂ ಒಂದಷ್ಟು ಮುನಿಸು, ಅತೃಪ್ತಿ ಸಹಜವಾಗಿದೆ. ಮಧ್ಯಪ್ರದೇಶದಲ್ಲಿ ಸಿಧಿಯಾ, ಕಮಲ್ ನಾಥ್ ಇಬ್ಬರೂ ಪ್ರಬಲ ನಾಯಕರಾಗಿರುವುದರಿಂದ ಇಬ್ಬರೂ ತಮ್ಮ ಪಟ್ಟನ್ನು ಬಿಡುತ್ತಿಲ್ಲ. ತಾಚು ಬೇಡಿಕೆ ಇಟ್ಟಷ್ಟು ಸೀಟು ಬೇಕೇ ಬೇಕು ಎಂಬ ಹಠಕ್ಕೆ ಈ ನಾಯಕರು ಬಿದ್ದಿರುವುದು ಹೈಕಮಾಂಡ್ ಗೆ ದೊಡ್ಡ ತಲೆನೋವೆನ್ನಿಸಿದೆ.

   ಹಿರಿಯ ನಾಯಕರ ಕೈಯಲ್ಲಿ ಅಭ್ಯರ್ಥಿಗಳ ಪಟ್ಟಿ, ರಾಹುಲ್ ಗೆ ತಲೆನೋವು?!

   ಟಿಕೆಟ್ ಹಂಚಿಕೆ, ಕಾಂಗ್ರೆಸ್ಸಿಗೆ ಅಗ್ನಿಪರೀಕ್ಷೆ!

   ಟಿಕೆಟ್ ಹಂಚಿಕೆ, ಕಾಂಗ್ರೆಸ್ಸಿಗೆ ಅಗ್ನಿಪರೀಕ್ಷೆ!

   ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರು, ಬೇರೆ ಬೇರೆ ಘಟಕಗಳಲ ಅಧ್ಯಕ್ಷರು ಪ್ರತಿ ದಿನ ಒಂದೊಂದು ಪಟ್ಟಿಯನ್ನೇ ಹಿಡಿದು ಬರುತ್ತಿದ್ದಾರೆ. ರಾಜಸ್ಥಾನದಲ್ಲಿ ಮಾತ್ರವಲ್ಲದೆ, ಮಧ್ಯಪ್ರದೇಶದಲ್ಲೂ ಪಾಟೀದಾರ್ ಆಂದೋಲದ ರೂವಾರಿ ಹಾರ್ದಿಕ್ ಪಟೇಲ್, ಪಾಟೀದಾರ್ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ! ಅಷ್ಟೇ ಅಲ್ಲ, ಗಾಂಧಿವಾದಿ ರಾಜಗೋಪಾಲ್ ಎಂಬುವವರು ಬುಡಕಟ್ಟು ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡುವಂತೆಯೂ ಒತ್ತಾಯಿಸಿದ್ದಾರೆ! ಇರುವ 230 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲರನ್ನೂ ತೃಪ್ತಿಪಡಿಸುವ ಹಾಗೆ, ಚುನಾವಣೆಯ ಸಮಯದಲ್ಲಿ ಬಂಡಾಯದ ಬಿಸಿ ಏಳದ ಹಾಗೆ ಕಾಂಗ್ರೆಸ್ ಯಾವ ರೀತಿ ಟಿಕೆಟ್ ಹಂಚಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

   ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ! ಚೌಹಾಣ್ ವಿಶ್ವಾಸ

   ಹಿರಿಯ ನಾಯಕರಿಗೆ ಟಿಕೆಟ್ ಇಲ್ಲ!

   ಹಿರಿಯ ನಾಯಕರಿಗೆ ಟಿಕೆಟ್ ಇಲ್ಲ!

   ಮಧ್ಯಪ್ರದೇಶ ಮತ್ತು ರಾಜಸ್ಥಾನ ಕಾಂಗ್ರೆಸ್ ನ ಹಿರಿಯ ನಾಯಕರು ಸಂಪೂರ್ಣವಾಗಿ ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಗಮನ ಹರಿಸಲಿ ಎಮಬ ಕಾರಣಕ್ಕೆ ಹಿರಿಯ ನಾಯಕರಿಗೆ ಟಿಕೆಟ್ ನೀಡದಿರಲು ಕಾಣಗ್ರೆಸ್ ನಿರ್ಧರಿಸಿದೆ. ಆಗ ನಾಯಕರು ಇಡೀ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡಬಲ್ಲರು, ಇಲ್ಲವೆಂದರೆ ತಮ್ಮ ಕ್ಷೇತ್ರಗಳಿಗೆ ಮಾತ್ರ ಹೆಚ್ಚು ಒತ್ತು ನೀಡುತ್ತಾರೆ ಎಂಬುದು ಕಾಂಗ್ರೆಸ್ಸಿನ ಸ್ಟ್ರಾಟಜಿ. ಆದರೆ ಈ ನಿರ್ಧಾರ ನಿಜವಾಗಿಯೂ ಜಾರಿಯಾದರೆ ಮಾತ್ರ ಚುನಾವಣೆಯ ಹೊತ್ತಲ್ಲಿ ಆಂತರಿಕ ಭಿನ್ನಾಭಿಪ್ರಾಯ ಶುರುವಾಗಬಹುದು!

   ಸಿದ್ಧವಾಗಿದೆ ಅಖಾಡ!

   ಸಿದ್ಧವಾಗಿದೆ ಅಖಾಡ!

   ಮಧ್ಯಪ್ರದೇಶದಲ್ಲಿ ನವೆಂಬರ್ 28 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು ವಿಧಾನಸಭಾ ಕ್ಷೇತ್ರಗಳು 230. ಪ್ರಸ್ತುತ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 116.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Madhya Pradesh Assembly elections 2018: Though there is some space to take call on tickets for Assembly elections in Madhya Pradesh, but over half a dozens official meetings and similar number of unofficial meetings of the senior Congress leaders for the selection of names of candidates for MP Assembly elections failed to yield any desirable results.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more