ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ: ಚುನಾವಣಾ ಪೂರ್ವ ಸಮೀಕ್ಷೆ

|
Google Oneindia Kannada News

ನವದೆಹಲಿ, ಆಗಸ್ಟ್ 01: ಮಧ್ಯಪ್ರದೇಶದಲ್ಲಿ ಬಿಎಸ್ಪಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳದೆ ಇದ್ದಲ್ಲಿ ಬಿಜೆಪಿ ಗೆಲುವು ಕಟ್ಟಿಟ್ಟಬುತ್ತಿ ಎಂದು ಸಮೀಕ್ಷೆಯೊಂದು ಹೇಳಿದೆ.

ತಮಿಳುನಾಡು ಮೂಲದ 'ಸ್ಪಿಕ್ ಮೀಡಿಯಾ' ಸಂಸ್ಥೆ ನಡೆಸಿದ ಈ ಸಮೀಕ್ಷೆಯ ಕುರಿತು ಸ್ವತಃ ಕಾಂಗ್ರೆಸ್ ಮುಖವಾಣಿ ನ್ಯಾಶ್ನಲ್ ಹೇರಾಲ್ಡ್ ವರದಿ ಮಾಡಿದೆ!

ಅವಧಿಗೆ ಮುಂಚೆಯೇ ಲೋಕಸಭೆ ಚುನಾವಣೆ! ಬಿಜೆಪಿ ಲೆಕ್ಕಾಚಾರ ಏನಿದು? ಅವಧಿಗೆ ಮುಂಚೆಯೇ ಲೋಕಸಭೆ ಚುನಾವಣೆ! ಬಿಜೆಪಿ ಲೆಕ್ಕಾಚಾರ ಏನಿದು?

ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೋ, ಬೇಡವೋ ಎಂಬ ಬಗ್ಗೆ ಕಾಂಗ್ರೆಸ್ ಮತ್ತು ಬಿಎಸ್ಪಿ ನಡುವೆ ಸಾಕಷ್ಟು ಚರ್ಚೆ ನಡೆದಿದೆ. ಆದರೆ ಇನ್ನೂ ಯಾವುದೇ ಪಕ್ಷ ಸೂಕ್ತ ನಿರ್ಧಾರಕ್ಕೆ ಬಂದಿಲ್ಲ.

ಬಿಜೆಪಿಗೆಷ್ಟು ಸೀಟು?

ಬಿಜೆಪಿಗೆಷ್ಟು ಸೀಟು?

ಅಕಸ್ಮಾತ್ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-ಬಿಎಸ್ಪಿ ಮೈತ್ರಿ ಮಾಡಿಕೊಳ್ಳದಿದ್ದಲ್ಲಿ ಬಿಜೆಪಿ ಸುಮಾರು 147(230) ಕ್ಷೇತ್ರಗಳನ್ನು ಗೆದ್ದು ಭರ್ಜರಿ ಜಯ ದಾಖಲಿಸಲಿದೆ ಎಂದು ಈ ಸಮೀಕ್ಷೆ ಹೇಳಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ 73 ಸ್ಥಾನಗಳಲ್ಲಿ ಜಯಗಳಿಸಲಿದ್ದು, ಉಳಿದ ಕ್ಷೇತ್ರಗಳಲ್ಲಿ ಬಿಎಸ್ಪಿ ಸೇರಿದಂತೆ ಇತರ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಕಾಂಗ್ರೆಸ್ಸಿಗೇ ನಷ್ಟ

ಕಾಂಗ್ರೆಸ್ಸಿಗೇ ನಷ್ಟ

ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳದೆ ಇದ್ದಲ್ಲಿ ನಷ್ಟ ಕಾಂಗ್ರೆಸ್ಸಿಗೇ. ಮುಂಬರುವ ಲೋಕಸಭಾ ಚುನಾವಣೆಯ ಮೇಲೂ ಇದು ಪರಿಣಾಮ ಬೀರುವುದು ಖಂಡಿತ. ಈಗಾಗಲೇ ಹಲವು ರಾಜ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುವ ಕಾಂಗ್ರೆಸ್ಸಿಗೆ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸುವ ಜರೂರತ್ತಿದೆ. ಅದಕ್ಕೆ ಬಿಎಸ್ಪಿ ಬೆಂಬಲ ಬೇಕೇ ಬೇಕು.

ಬೆಂಬಲಕ್ಕೆ ಬಿಎಸ್ಪಿ ರೆಡಿ, ಆದರೆ ಷರತ್ತುಗಳು ಅನ್ವಯ!

ಬೆಂಬಲಕ್ಕೆ ಬಿಎಸ್ಪಿ ರೆಡಿ, ಆದರೆ ಷರತ್ತುಗಳು ಅನ್ವಯ!

ಕಾಂಗ್ರೆಸ್ಸಿಗೆ ಬೆಂಬಲ ನೀಡಲು ಬಿಎಸ್ಪಿ ಸದಾ ಸಿದ್ಧ. ಏಕೆಂದರೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವುದಕ್ಕೆ ಬಿಎಸ್ಪಿಗೆ ಸಾಧ್ಯವೂ ಇಲ್ಲ. ಹಾಗಂತ ಕೇಳಿದೊಡನೆ ಒಪ್ಪಿಕೊಂಡು ಬಿಡುವಷ್ಟು ಮೂರ್ಖತನವನ್ನೂ ಬಿಎಸ್ಪಿ ಮಾಡೋಲ್ಲ. ಟಿಕೇಟ್ ಹಂಚಿಕೆಯ ವಿಷಯದಲ್ಲಿ ಬಿಎಸ್ಪಿ ಕೇಳಿದಷ್ಟು ಕ್ಷೇತ್ರಗಳನ್ನು ಬಿಎಸ್ಪಿ ಅಭ್ಯರ್ಥಿಗಾಗಿ ಬಿಟ್ಟುಕೊಟ್ಟರೆ ಆಗ ಮೈತ್ರಿಗೆ ಸಿದ್ಧ ಎಂದು ಬಿಎಸ್ಪಿ ಹೇಳಬಹುದು. ಜೊತೆಗೆ ಅಕಸ್ಮಾತ್ ಈ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಇಂತಿಷ್ಟು ಮಂತ್ರಿ ಸ್ಥಾನದ ಷರತ್ತುಗಳನ್ನೂ ಬಿಎಸ್ಪಿ ಹಾಕಬಹುದು.

ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ

ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ

230 ಕ್ಷೇತ್ರಗಳಿರುವ ಮಧ್ಯಪ್ರದೇಶದ ವಿಧಾನಸಭೆಯ ಕಾಲಾವಧಿ ಜನವರಿ 7, 2019 ರಂದು ಮುಗಿಯಲಿದೆ. ಆದ್ದರಿಂದ ಡಿಸೆಂಬರ್ ನಲ್ಲಿಯೇ ಚುನಾವಣೆ ನಡೆಯಬೇಕಿದೆ. ಈ ಚುನಾವಣೆಯ ಫಲಿತಾಂಶ 2019 ರ ಮೇ ನಲ್ಲಿ ನಡೆಯಬಹುದಾದ ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ ಬೀರುವುದು ಖಂಡಿತ. ಇಲ್ಲಿ ಬಿಜೆಪಿ ಗೆದ್ದರೆ ಮೋದಿ ಸರ್ಕಾರಕ್ಕೆ ಬಲ ಬಂದಂತೇ. ಸೋತರೆ ಮಹಾಘಟಬಂಧನದ ಸೂಚನೆ ಸಿಕ್ಕಂತೆ! ಅದು ಕೇಂದ್ರ ಎನ್ ಡಿಎ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯೂ ಆಗಬಹುದು.

English summary
A pre-poll survey in Madhya Pradesh has said that it will be difficult for the Congress party to defeat the ruling Bharatiya Janata Party (BJP) if there is no alliance with the Bahujan Samaj Party (BSP). The findings of the pre-poll survey conducted by Tamil Nadu-based Spick Media was published by National Herald.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X