• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನಸಭೆ ಚುನಾವಣೆ LIVE: ಮಧ್ಯಪ್ರದೇಶ, ಮಿಜೋರಾಂನಲ್ಲಿ ಇಂದು ಮತದಾನ

|

ಭೋಪಾಲ್-ಐಜ್ವಾಲ್, ನವೆಂಬರ್ 28: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಹಳ ಕುತೂಹಲ ಕೆರಳಿಸಿರುವ ಮಧ್ಯಪ್ರದೇಶ ರಾಜ್ಯದಲ್ಲಿ ಬುಧವಾರ ಮತದಾನ ನಡೆಯಲಿದೆ. ಅಂತೆಯೇ ಈಶಾನ್ಯ ರಾಜ್ಯವಾದ ಮಿಜೋರಾಂ ನಲ್ಲೂ ಇಂದು ಮತದಾನ ನಡೆಯಲಿದೆ.

ಮಧ್ಯಪ್ರದೇಶದಲ್ಲಿ ಒಟ್ಟು 230 ವಿಧಾನಸಭಾ ಕ್ಷೇತ್ರಗಳಿದ್ದು, ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಬಿರುಸಿನ ಪೈಪೋಟಿ ಇದೆ.

ಮಧ್ಯಪ್ರದೇಶದಲ್ಲಿ ನ.28ರಂದು 230ಕ್ಷೇತ್ರಗಳಲ್ಲಿ ಮತದಾನ

ಮಿಜೋರಾಂನಲ್ಲಿ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿದ್ದು ಸತತ ಮೂರು ಬಾರಿಗೆ ಕಾಂಗ್ರೆಸ್ ಈ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ.

Madhya Pradesh and Mizoram assemly elections 2018: Live updates

ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 11 ರಂದು ಹೊರಬೀಳಿದ್ದು, ಇದನ್ನು 2019 ರ ಲೋಕಸಭಾ ಚುನಾವಣೆ ದಿಕ್ಸೂಚಿ ಎಂದೇ ಪರಿಗಣಿಸಲಾಗುತ್ತಿದೆ.

ಕಾಂಗ್ರೆಸ್ ಅಧಿಪತ್ಯದ ಮಿಜೋರಾಂನಲ್ಲಿ ನ.28ರಂದು ಮತದಾನ

ಮಧ್ಯಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ಚುನಾವಣೆಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest First Oldest First
3:28 PM, 28 Nov
ಮಧ್ಯಪ್ರದೇಶದಲ್ಲಿ 3 ಗಂಟೆಯ ಹೊತ್ತಿಗೆ ಶೇ.50 ರಷ್ಟು ಮತದಾನ
3:27 PM, 28 Nov
ಮಿಜೋರಾಂನಲ್ಲಿ 3 ಗಂಟೆಯ ಹೊತ್ತಿಗೆ ಶೇ.58 ರಷ್ಟು ಮತದಾನ
2:49 PM, 28 Nov
ಮಧ್ಯಪ್ರದೇಶದಲ್ಲಿ 2 ಗಂಟೆಯ ಹೊತ್ತಿಗೆ 34% ಮತದಾನ ದಾಖಲು
1:24 PM, 28 Nov
ಮಧ್ಯಪ್ರದೇಶ: ಇವಿಎಂ ದೋಷದ ಕಾರಣ ಮತದಾನದ ಅವಧಿ ವಿಸ್ತರಣೆಗೆ ಒಪ್ಪಿಗೆ ಸೂಚಿಸಿದ ಮುಖ್ಯ ಚುನಾವಣಾಧಿಕಾರಿ ಒ ಪಿ ರಾವತ್.
12:20 PM, 28 Nov
11 ಗಂಟೆಯ ಹೊತ್ತಿಗೆ ಮಧ್ಯಪ್ರದೇಶದಲ್ಲಿ ಶೇ.21 ರಷ್ಟು ಮತದಾನ
12:19 PM, 28 Nov
ಹಲವು ಮತಗಟ್ಟೆಗಳಿಂದ ಇವಿಎಂ ದೋಷದ ದೂರು ಕೇಳಿಬರುತ್ತಿದೆ.ಈ ಕುರಿತು ನಾವು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದು, ಇವಿಎಂ ದೋಷ ಉಂಟಾದ ಮತಗಟ್ಟೆಗಳಲ್ಲಿ ಮತದಾನದ ಅವಧಿಯನ್ನು ವಿಸ್ತರಿಸಲು ಮನವಿ ಮಾಡಿದ್ದೇವೆ: ಜ್ಯೋತಿರಾದಿತ್ಯ ಸಿಂದಿಯಾ, ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡ
11:57 AM, 28 Nov
ಮಧ್ಯಪ್ರದೇಶ ಗುನ ಮತ್ತು ಇಂದೋರ್ ನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮೂರು ಅಧಿಕಾರಿಗಳು ಹೃದಯಾಘಾತದಿಂದ ನಿಧನ. ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ ಚುನಾವಣಾ ಆಯೋಗ
11:55 AM, 28 Nov
ಮಿಜೋರಾಂನಲ್ಲಿ 11 ಗಂಟೆಯ ಹೊತ್ತಿಗೆ 29% ಮತದಾನ ದಾಖಲು
11:09 AM, 28 Nov
'ಡಿಸೆಂಬರ್ 11 ರಂದು ಕಾಂಗ್ರೆಸ್ ಜನರ ಆಶೀರ್ವಾದದೊಂದಿಗೆ ಸರ್ಕಾರ ರಚಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ' ಗ್ವಾಲಿಯರ್ ನಲ್ಲಿ ಮತಚಲಾಯಿಸಿದ ಬಳಿಕ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ ಹೇಳಿಕೆ
9:55 AM, 28 Nov
ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಶೇ.100 ಸತ್ಯ. ನಾವು 200 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ನಮ್ಮ ಈ ಗುರಿ ತಲುಪಲು ನಮ್ಮ ಲಕ್ಷದಷ್ಟು ಕಾರ್ಯಕರ್ತರು ಹಗಲಿರುಳೂ ಶ್ರಮಿಸಿದ್ದಾರೆ- ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಮುಖ್ಯಮಂತ್ರಿ
9:53 AM, 28 Nov
9 ಗಂಟೆವರೆಗೆ ಮಿಜೋರಾಂ ನಲ್ಲಿ ಶೇ.15 ರಷ್ಟು ಮತದಾನ
8:59 AM, 28 Nov
ಮತ ಚಲಾವಣೆಗೂ ಮುನ್ನ ಮಧ್ಯಪ್ರದೇಶದ ಬುಧ್ನಿಯ ನರ್ಮದಾ ನದಿ ತಟದಲ್ಲಿ ಪೂಜೆ ಸಲ್ಲಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
8:52 AM, 28 Nov
ನನಗೆ ಮಧ್ಯಪ್ರದೇಶದ ಜನರ ಮೇಲೆ ನಂಬಿಕೆ ಇದೆ. ಅವರು ಸರಳ ಮತ್ತು ಮುಗ್ಧರು. ಬಿಜೆಪಿಯು ಇವರನ್ನು ಬಹಳ ಕಾಲದಿಂದ ದೋಚುತ್ತಿದೆ: ಕಮಲ್ ನಾಥ್, ಕಾಂಗ್ರೆಸ್ ಮುಖಂಡ
8:46 AM, 28 Nov
ಛಿಂದ್ವಾರಾ ಕ್ಷೇತ್ರದಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಮುಖಂಡ ಕಮಲ್ ನಾಥ್
8:45 AM, 28 Nov
230 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ 1,102 ಪಕ್ಷೇತರರು ಸ್ಪರ್ಧಿಸುತ್ತಿದ್ದಾರೆ.ಮಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದಿಂದ 227 ಅಭ್ಯರ್ಥಿಗಳು ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ(ಎಸ್ ಪಿ)ದಿಂದ 51 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
8:44 AM, 28 Nov
ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಕಳೆದ 15 ವರ್ಷಗಳಿಂದ ಇಲ್ಲಿ ಬಿಜೆಪಿ ರಾಜ್ಯಭಾರ ಮಾಡುತ್ತಿದ್ದು, ಈ ಬಾರಿ ಕೂಡಾ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ಸ್ಥಾಪನೆಯಾಗಬಹುದು ಬಹುತೇಕ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳಿಂದ ತಿಳಿದು ಬಂದಿದೆ.
8:44 AM, 28 Nov
2013ರಲ್ಲಿ ಕಾಂಗ್ರೆಸ್ ಪಕ್ಷವು 40ರಲ್ಲಿ 34ಸ್ಥಾನಗಳನ್ನು ಗೆದ್ದು ಜಯಭೇರಿ ಬಾರಿಸಿತ್ತು. ಎಂಎನ್ಎಫ್ 5 ಸ್ಥಾನಗಳನ್ನು ಗೆದ್ದಿತ್ತು. ಮಿಜೋರಾಂ ಪೀಪಲ್ಸ್ ಕಾನ್ಫ್ ರೆನ್ಸ್ 1 ಸ್ಥಾನ ಗೆದ್ದುಕೊಂಡಿತ್ತು.
7:21 AM, 28 Nov
ಮಿಜೋರಾಂನಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 4 ರವರೆಗೆ ನಡೆಯಲಿದೆ.
6:32 AM, 28 Nov
ಮಿಜೋರಾಂನಲ್ಲಿ ಬಿಜೆಪಿ ನೇತೃತ್ವದ ಈಶಾನ್ಯದ ಡೆಮೊಕ್ರಾಟಿಕ್ ಅಲೈಯನ್ಸ್ ನ ಭಾಗವಾಗಿರುವ ಮಿಜೋ ನ್ಯಾಷನಲ್ ಫ್ರಂಟ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಇದೆ.
6:32 AM, 28 Nov
ಮಧ್ಯಪ್ರದೇಶದಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Polling for Mandya Pradesh and mizoram states will be taking place today(Nov 28). Results will be out on December 11. Here are LIVE updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more