ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಬೋರ್‌ವೆಲ್‌ಗೆ ಬಿದ್ದ 8 ವರ್ಷದ ಬಾಲಕ- ರಕ್ಷಣಾ ಕಾರ್ಯಚರಣೆ ಆರಂಭ

|
Google Oneindia Kannada News

ಬೇತುಲ್ ಡಿಸೆಂಬರ್ 7: ಮೈದಾನದಲ್ಲಿ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕ 400 ಅಡಿ ಆಳವಾದ ಕೊಳವೆಬಾವಿಗೆ ಬಿದ್ದ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ಮಾಂಡವಿ ಗ್ರಾಮದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ನಾನಕ್‌ ಚೌಹಾಣ್‌ ಎಂಬುವರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿದ್ದರು. ಆದರೆ ಅದರಲ್ಲಿ ನೀರು ಬಾರದ ಕಾರಣ ಕಾರ್ಯರೂಪಕ್ಕೆ ಬಂದಿರಲಿಲ್ಲ. ಆ ಬಳಿಕ ಬಾವಿಯನ್ನು ಮುಚ್ಚಲಾಗಿದ್ದು ಹುಡುಗ ಹೇಗೆ ಮುಚ್ಚಳ ತೆಗೆದನು ಎಂಬುದು ತನಗೆ ತಿಳಿದಿಲ್ಲ ಎಂದು ಚೌಹಾಣ್ ಪೊಲೀಸರಿಗೆ ತಿಳಿಸಿದ್ದಾರೆ. ಇದರ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕ ತನ್ಮಯ್ ದಿಯಾವರ್ ಕೊಳವೆಬಾವಿಗೆ ಬಿದ್ದಿದ್ದಾನೆ.

ಬಾಲಕನನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಪ್ರದೇಶವನ್ನು ಮಣ್ಣು ಅಗೆಯಲು ಯಂತ್ರಗಳನ್ನು ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Madhya Pradesh: An eight-year-old boy fell into borewell while playing

ಬಾಲಕನಿಗೆ ಆಮ್ಲಜನಕ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದಕ್ಕಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ ಅಥವಾ ಎಸ್‌ಡಿಆರ್‌ಎಫ್‌ನ ತಂಡವನ್ನು ಭೋಪಾಲ್ ಮತ್ತು ಹೋಶಂಗಾಬಾದ್‌ನಿಂದ ಸಜ್ಜುಗೊಳಿಸಲಾಗಿದೆ.

English summary
An eight-year-old boy fell into borewell while playing ground in Madhya Pradesh's Betul district yesterday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X