ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೆರಡು ಗ್ರಹಣ, ಎಲ್ಲೆಲ್ಲಿ ಕಾಣುತ್ತೆ, ಹೇಗೆ ನೋಡ್ಬಹುದು?

By Mahesh
|
Google Oneindia Kannada News

Recommended Video

ಸೂರ್ಯ ಗ್ರಹಣ ಹಾಗು ಚಂದ್ರ ಗ್ರಹಣ 2018 : ಎಲ್ಲೆಲ್ಲಿ ಕಾಣುತ್ತೆ? ಹೇಗೆ ನೋಡಬಹುದು? | Oneindia Kannada

ಬೆಂಗಳೂರು, ಜುಲೈ 12: ಈ ವರ್ಷದಲ್ಲಿ ಖಗೋಳ ವೀಕ್ಷಕರಿಗೆ ಒಳ್ಳೆಯ ಕಾಲ. ಈ ತಿಂಗಳಿನಲ್ಲೇ ಎರಡೆರಡು ಗ್ರಹಣಗಳು ಸಂಭವಿಸುತ್ತಿವೆ. ಮತ್ತೊಂದು ಆಗಸ್ಟ್ ತಿಂಗಳಿನಲ್ಲಿ ಕಾಣಿಸಲಿದೆ. ಅದೃಷ್ಟ ಚೆನ್ನಾಗಿದ್ರೆ ಎಲ್ಲವನ್ನು ನೋಡಿ ಕಣ್ತುಂಬಿಸಿಕೊಳ್ಳಲು ಇದು ಸಕಾಲ.

ಜುಲೈ 13 ರಂದು ಸೂರ್ಯಗ್ರಹಣ ಸಂಭವಿಸಲಿದೆ. 2 ಗಂಟೆ 25 ನಿಮಿಷದವರೆಗೆ ಈ ಸೂರ್ಯ ಗ್ರಹಣವಿರಲಿದೆ. ಇದೇ ದಿನ ಅಮವಾಸ್ಯೆ ಕೂಡ ಬಂದಿದೆ. ಇದು ಅಂಶಿಕ ಸೂರ್ಯಗ್ರಹಣವಾಗಿದೆ. ಈ ವರ್ಷದ ಫೆಬ್ರವರಿ 15 ರಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿತ್ತು.

Lunar and Solar Eclipse Guide 2018: When, Where & How to watch

ಜುಲೈ 27 ರಂದು ಶತಮಾನದ ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ. 2018ರ ಆಗಸ್ಟ್ ನಲ್ಲಿ ಈ ವರ್ಷದ ಮೂರನೇ ಸೂರ್ಯ ಗ್ರಹಣ ಸಂಭವಿಸಲಿದೆ.

ಮಹಾಭಾರತ ಯುದ್ಧ ಕಾಲದಲ್ಲೂ ಸಂಭವಿಸಿತ್ತು ಎರಡು ಗ್ರಹಣ, ಏನು ಪರಿಣಾಮ?ಮಹಾಭಾರತ ಯುದ್ಧ ಕಾಲದಲ್ಲೂ ಸಂಭವಿಸಿತ್ತು ಎರಡು ಗ್ರಹಣ, ಏನು ಪರಿಣಾಮ?

ಈ ಬಾರಿ ಸೂರ್ಯ ಗ್ರಹಣ ಪುನರ್ವಸು ನಕ್ಷತ್ರ ಹಾಗೂ ಹರ್ಷಿಣ ಯೋಗದಲ್ಲಿ ಬರಲಿದೆ. ಬೆಳಿಗ್ಗೆ 7 ಗಂಟೆಯಿಂದ ಶುರುವಾಗಿ 9 ಗಂಟೆ 44 ನಿಮಿಷದವರೆಗೆ ಇರಲಿದೆ. ಗ್ರಹಣದ ಸೂತಕ ಸುಮಾರು 12 ಗಂಟೆ ಮೊದಲೇ ಹಿಡಿಯಲಿದೆ.

ಸೂರ್ಯ ಹಾಗೂ ಚಂದ್ರನ ಮಧ್ಯೆ ಭೂಮಿ ಸಾಗಲಿದ್ದು, ಗ್ರಹಣಪೀಡಿತ ಸೂರ್ಯನ ಪಾರ್ಶ್ವ ಭಾಗ ಕಾಣಿಸಲಿದೆ.ಆಸ್ಟ್ರೇಲಿಯಾ ಹಾಗೂ ಅಂಟಾರ್ಟಿಕಾದಲ್ಲಿ ಹಿಂದೂ ಮಹಾಸಾಗರ ಹಾಗೂ ಪೆಸಿಫಿಕ್ ಸಾಗರ ಸಂಗಮದ ಸ್ಥಳದಲ್ಲಿ ಚೆನ್ನಾಗಿ ಕಾಣಿಸಲಿದೆ.

ಜು.13 ಸೂರ್ಯಗ್ರಹಣ: ತಿಳಿಯಬೇಕಾದ 6 ಸಂಗತಿಜು.13 ಸೂರ್ಯಗ್ರಹಣ: ತಿಳಿಯಬೇಕಾದ 6 ಸಂಗತಿ

ದಕ್ಷಿಣ ಆಸ್ಟ್ರೇಲಿಯಾ, ಅಡಿಲೇಡ್, ಮೆಲ್ಬೋರ್ನ್ ನಲ್ಲಿ ಗ್ರಹಣದ ಪಾರ್ಶ್ವಭಾಗ ಕಾಣಲಿದೆ. ಭಾರತದಲ್ಲಿ ಈ ಅದ್ಭುತ ದೃಶ್ಯ ಕಾಣಿಸುವುದಿಲ್ಲ. ಆದರೆ, 7.18 am ಹಾಗೂ 9.43 am ಅವಧಿಯಲ್ಲಿ ನಾಸಾ, ಹಾಗೂ ವೆಬ್ ಕ್ಯಾಮ್ ಲೈವ್ ಗಳಲ್ಲಿ ನೋಡಬಹುದು ಎಂದು ಟೈಮ್ ಅಂಡ್ ಡೇಟ್.ಕಾಂ ವರದಿ ಮಾಡಿದೆ.

English summary
Solar Eclipse Guide 2018: Apartial eclipse of 2018 will take place on July 13 and will be visible primarily over the ocean between Australia and Antarctica.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X