• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜುಲೈ 17 ರಂದು ಭಾಗಶಃ ಚಂದ್ರಗ್ರಹಣ, ಭಾರತದಲ್ಲೂ ಕಾಣುತ್ತಾ?

|

ಮುಂಬೈ, ಜುಲೈ 15: ಜುಲೈ 2 ರಂದು ಸಂಭವಿಸಿದ ಸೂರ್ಯಗ್ರಹಣದ ನಂತರ ಇದೀಗ ಜುಲೈ 17 ರಂದು ಭಾಗಶಃ ಚಂದ್ರಗ್ರಹಣಕ್ಕೆ ನಭ ಸಾಕ್ಷಿಯಾಗಲಿದೆ.

ಜುಲೈ 02 ರಂದು ಸಭವಿಸಿದ ಸೂರ್ಯಗ್ರಹಣ ಕೇವಲ ದಕ್ಷಿಣ ಅಮೆರಿಕದಲ್ಲಿ ಮಾತ್ರ ಗೋಚರವಾಗಿತ್ತು. ಆದರೆ ಬುಧವಾರ ನಡೆಯಲಿರುವ ಚಂದ್ರಗ್ರಹಣ ಭಾರತದಲ್ಲೂ ಗೋಚರವಾಗಲಿದೆ.

ಚಿತ್ರಮಾಹಿತಿ: ಜ.20-21 ರ ಚಂದ್ರಗ್ರಹಣ ಭಾರತದಲ್ಲಿ ಕಾಣುತ್ತಾ?

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಪ್ರಕಾರ ಭಾರತದಲ್ಲಿ ಬೆಳಗ್ಗಿನ ಜಾವ 03:01 ಕ್ಕೆ ಗ್ರಹಣ ಸ್ಪರ್ಶವಾಗಲಿದೆ. ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶವನ್ನು ಹೊರತುಪಡಿಸಿದರೆ ಭಾರತದ ಎಲ್ಲೆಡೆಯೂ ಗ್ರಹಣ ಗೋಚರವಾಗಲಿದೆ.

2019 ರ ಕೊನೆಯ ಚಂದ್ರಗ್ರಹಣ ಇದಾಗಿದ್ದು, 2020 ರ ಜನವರಿ 10 ರಂದು ಮುಂದಿನ ಚಂದ್ರಗರಹಣ ಸಂಭವಿಸಲಿದೆ. ನಂತರ 26 ಮೇ 2021 ಮತ್ತು 19 ನವೆಂಬರ್ 2021 ರಂದು ಚಂದ್ರ ಗ್ರಹಣ ಸಂಭವಿಸಲಿದೆ.

2019 ರ ಜನವರಿ 20-21 ರಂದು ಸಹ ಚಂದ್ರಗ್ರಹಣ ಸಂಭವಿಸಿತ್ತು. ಇದು ಸೂಪರ್ ಬ್ಲಡ್ ಮೂನ್ ಎಂದೇ ಕರೆಸಿಕೊಂಡಿತ್ತು.

ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರಗ್ರಹಣ ಸಂಭವಿಸುತ್ತದೆ.

English summary
Partial Lunar eclipse will be taking place on July 17. Here is all you need to know qbouth this eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X