ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ರಾತ್ರಿಯೆಲ್ಲ ಆಗಸದಿ ಮೋಡಿ ಮಾಡಿದ ರಕ್ತಚಂದ್ರ

|
Google Oneindia Kannada News

ಪೂರ್ಣ ಶ್ವೇತ ವರ್ಣದ ಚಂದ್ರ ಹಠಾತ್ತನೆ ಇಂಚಿಂಚೇ ಕಪ್ಪಾಗುತ್ತ ಬಂದ... ಒಂದು ಬಿಂದುವಿನಲ್ಲಿ ಸಂಪೂರ್ಣ ಕಪ್ಪಾಗಿ ಮರೆಯಾದ. ಸ್ವಲ್ಪ ಹೊತ್ತಲೇ ವಜ್ರದುಂಗುರದಂತಾಗಿ, ನಂತರ ಕೆಂಪಾಗುತ್ತ ಆಗುತ್ತ... ರಕ್ತಚಂದ್ರನಾಗಿ ಬದಲಾದ.

ಆಹ್ಹಾ, ಆ ದೃಶ್ಯ ನೋಡಲು ಎರಡು ಕಣ್ಣು ಸಾಲದು. ಚಿಕ್ಕ ಮಕ್ಕಳು ಊಟ ಮಾಡಲೊಲ್ಲೆ ಎಂದಾಗ ಅಮ್ಮನ ಕೈಯ ತೋರುಬೆರಳಲ್ಲಿ ಕಾಣುವ ಈ ಚಂದಮಾಮ, ವಿಜ್ಞಾನಿಗಳ ಪಾಲಿಗೆ ಕೌತುಕ ಎನ್ನಿಸಿದ ಈ ಚಂದ್ರಮ ಎಷ್ಟೆಲ್ಲ ಚೆಂದವಾಗಿ ಕಂಡ!

ಸಣ್ಣಕಥೆ : ಗ್ರಹಣಸಣ್ಣಕಥೆ : ಗ್ರಹಣ

ಆದರೂ... ಮೋಡ ಮುಸುಕಿದ ಕಾರಣ ಈ ಅಮೋಘ ದೃಶ್ಯವನ್ನು ನೋಡಲು ಸಾಧ್ಯವಾಗದೆ ಎಷ್ಟೋ ಜನ ಪರಿತಪಿಸಿದ್ದಾರೆ. ಮಧ್ಯರಾತ್ರಿಯಲ್ಲಿ ನಿದ್ದೆಯನ್ನು ಒತ್ತಾಯದಿಂದ ಹತ್ತಿಕ್ಕಿ, ಕಣ್ಣುಜ್ಜುತ್ತಲೇ ಟೆರೆಸ್ ಗೆ ಹೋದವರೂ ಮೋಡಕ್ಕೆ ಹಿಡಿಶಾಪ ಹಾಕಿ ಬಂದಿದ್ದಾರೆ. ಅವರೆಲ್ಲರಿಗಾಗಿ, ಚಂದ್ರ ಗ್ರಹಣದ ಅಮೋಘ ದೃಶ್ಯವನ್ನೊಳಗೊಂಡ ತರಹೇವಾರಿ ವಿಡಿಯೋಗಳನ್ನು ಇಲ್ಲಿ ನೀಡುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್ ಆಗಿವೆ.

Array

ಅಮೋಘ ದೃಶ್ಯ

ಸರಿ ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಈ ಖಗೋಳ ವಿಸ್ಮಯದ ಸಾರವನ್ನು 45 ಸೆಕೆಂಡುಗಳಲ್ಲಿ ಹಿಡಿದಿಟ್ಟು ರಕ್ತಚಂದ್ರ ವಯ್ಯಾರವನ್ನು ವರ್ಣಿಸಿದ್ದು ಹೀಗೆ!

ಆಹಾ ಎಷ್ಟು ಚೆಂದ..! ಬಾನಂಗಳದಲ್ಲಿ ರಂಗಿನ ರಂಗೋಲಿ ಬರೆದ ರಕ್ತಚಂದ್ರ! ಆಹಾ ಎಷ್ಟು ಚೆಂದ..! ಬಾನಂಗಳದಲ್ಲಿ ರಂಗಿನ ರಂಗೋಲಿ ಬರೆದ ರಕ್ತಚಂದ್ರ!

Array

ವರ್ಣಿಸಲಸದಳ

ಶತಮಾನದ ಸುದೀರ್ಘ ಚಂದ್ರ ಗ್ರಹಣ ಪದಗಳಲ್ಲಿ ವರ್ಣಿಸಲಸದಳ. ಅದನ್ನು ವಿಡಿಯೋದಲ್ಲೇ ನೋಡಿ ಕಣ್ತುಂಬಿಕೊಳ್ಳಿ.

ಏನಿದು ರಕ್ತಚಂದ್ರ, ನೀಲಿಚಂದ್ರ? ಬಾನಂಗಳದಲ್ಲಾಗುತ್ತಾ ಕೋಲಾಹಲ?! ಏನಿದು ರಕ್ತಚಂದ್ರ, ನೀಲಿಚಂದ್ರ? ಬಾನಂಗಳದಲ್ಲಾಗುತ್ತಾ ಕೋಲಾಹಲ?!

Array

ಎರಡು ಕಣ್ಣು ಸಾಲದು..!

ಚಂದ್ರನ ಈ ರಂಗಿನಾಟ ನೋಡಲು ಎರಡು ಕಣ್ಣು ಸಾಲದು! ನೀವೇ ನೋಡಿ!

In Pics: ವಿಶ್ವದೆಲ್ಲೆಡೆ ರಕ್ತವರ್ಣದಲ್ಲಿ ಕಂಡ ಚಂದಿರನ ಕಣ್ತುಂಬಿಸಿಕೊಳ್ಳಿ

ಕಟ್ಟಡದ ಹಿಂದೆ ಅಡಗಿದ ಕಳ್ಳ ಚಂದ್ರ!

ಕಟ್ಟಡದ ಹಿಂದೆ ಅಡಗಿದ ಈ ಕಳ್ಳಚಂದ್ರ ಸುಂದರ ಚಿತ್ರ ಕಂಡಿದ್ದು ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ.

English summary
Lunar eclipse July 27, 2018: People around the world witnessed this century's longest lunar eclipse and a rare total blood moon eclipse. Here is beautiful videos of blood moon circulating in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X